Advertisement
ಅಭ್ಯರ್ಥಿಯ ಸಂಪೂರ್ಣ ಹೆಸರು, ತಂದೆ, ತಾಯಿ ಹೆಸರಿನ ಅಕ್ಷರಗಳಲ್ಲಿ ಆಗುವ ತಪ್ಪು, ಆರ್‌ಡಿ ಸಂಖ್ಯೆಯಲ್ಲಿ ತಪ್ಪು, ಪ್ರವರ್ಗ/ಜಾತಿ ಮಾಹಿತಿ ತಪ್ಪು ಗಳಿಂದ ಸಿಇಟಿಯ ಕೌನ್ಸೆಲಿಂಗ್ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ತುಂಬುವಾಗ ಮಾಹಿತಿ ಲೋಪ ಕಂಡುಬಂದರೆ ಪ್ರಕ್ರಿಯೆ ಮುಂದಿನ ಹಂತಕ್ಕೆ ಹೋಗದಂತೆ ಸಾಫ್ಟ್ ವೇರ್ ವಿನ್ಯಾಸಗೊಳಿಸಲಾಗಿದೆ.ಜತೆಗೆ ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (ಸ್ಯಾಟ್ಸ್)ಯಿಂದ ಸಿಇಟಿ ಸಾಫ್ಟ್ವೇರ್ ನೇರವಾಗಿ ದಾಖಲೆ, ಮಾಹಿತಿ ಯನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಸಿಬಿಎಸ್‌ಇ ಮತ್ತು ಐಸಿ ಎಸ್‌ಇಯಿಂದಲೂ ನೇರ ಮಾಹಿತಿ ಸಿಇಟಿ ಸಾಫ್ಟ್ವೇರ್ ಸೇರಲಿದೆ. ಇದನ್ನು ಆಧರಿಸಿ ಕೆಇಎಯ ಸಾಫ್ಟ್ವೇರ್ ಅಭ್ಯರ್ಥಿಗಳ ಮಾಹಿತಿಯನ್ನು ಪರಿಷ್ಕರಿಸಲಿದೆ.