Advertisement

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

04:05 PM Jun 29, 2024 | Team Udayavani |

ಶಾಲೆಯ ಶಿಕ್ಷಣ ವ್ಯವಸ್ಥೆಯು ಉತ್ತಮ ಸಮಾಜವನ್ನು ರೂಪಿಸುವಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ. ಇಂದು ನಾವು ಸಮಾಜದಲ್ಲಿ ವಿವಿಧ ರೀತಿಯ ಅಸಮಾನತೆ, ಶೋಷಣೆಯನ್ನು ಕಾಣುತ್ತಿದ್ದೇವೆ. ಇದರಲ್ಲಿ ಲಿಂಗ ತಾರಮ್ಯವು ಪ್ರಮುಖವಾದದ್ದು. ಶಾಲೆಯಿಂದ ಗಂಡು ಮತ್ತು ಹೆಣ್ಣಿನ ನಡುವೆ ಇರುವ ಈ ತಾರತಮ್ಯವನ್ನು ನೀಗಿಸಲು ಸಾಧ್ಯ. ಇಲ್ಲಿ ಎಲ್ಲರೂ ಸಮಾನರು ಆದ್ದರಿಂದ ಸಹ – ಶಿಕ್ಷಣ ಪದ್ಧತಿಯ ಅಗತ್ಯವಿದೆ.

Advertisement

ಏಕೆಂದರೇ ಅವರಿಗೆ ಲಿಂಗ ತಾರತಮ್ಯದ ಅನುಭವವಾಗುವುದಿಲ್ಲ. ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಇಬ್ಬರೂ ಇದ್ದಾಗ, ಪರಸ್ಪರ ಇಬ್ಬರೂ ಗೌರವಿಸುವುದನ್ನು ಕಲಿಯುತ್ತಾರೆ. ಲಿಂಗ ವಿಭಿನ್ನತೆ ಸಹಜ ಪ್ರಕ್ರಿಯೆ ಎಂದೆನಿಸುತ್ತದೆ. ಒಬ್ಬರ ಅಭಿಪ್ರಾಯಗಳನ್ನು ಗೌರವಿಸುವುದನ್ನು ಕಲಿಯುತ್ತಾರೆ. ಅದು ಅವರಿಗೆ ಮುಂದೆ ವೃತ್ತಿಶೀಲರಾದಾಗ ವಿಭಿನ್ನ ವ್ಯಕ್ತಿಗಳ ನಡುವೆ, ವಿಭಿನ್ನ ಲಿಂಗಗಳ ನಡುವೆ ಸಂವಹನ ಸಹಜ ಸಾಧ್ಯವಾಗುತ್ತದೆ.

ಅಧ್ಯಯನದ ಪ್ರಕಾರ ಸಹಶಿಕ್ಷಣದ ಶಾಲೆಯಲ್ಲಿ ಮಕ್ಕಳು ಹದಿಹರೆಯಕ್ಕೆ ಬಂದಾಗ ಆ ಅವಸ್ಥೆಯನ್ನು ಸಹಜವಾಗಿ ನಿಭಾಯಿಸಲು ಕಲಿಯುತ್ತಾರೆ. ಅನ್ಯಲಿಂಗದ ಉಪಸ್ಥಿತಿ ಅವರನ್ನು ವ್ಯಕ್ತಿಗತವಾಗಿ ಜಾಗರೂಕರಾಗಿಯೂ ವೃತ್ತಿಪರರಾಗಿಯೂ ರೂಪಿಸುತ್ತದೆ. ಪರಸ್ಪರ ವಿಭಿನ್ನಲಿಂಗಗಳು ಇಲ್ಲಿ ಪೂರಕವಾಗಿಯೇ ಕೆಲಸ ಮಾಡುತ್ತದೆ.

ಇಲ್ಲಿಯ ಸ್ನೇಹ ಸಂಬಂಧಗಳು ಗಟ್ಟಿಗೊಂಡರೆ ದೇಹಾಕರ್ಷಣೆಯನ್ನು ಮೀರಿ ಎಲ್ಲರ ವ್ಯಕ್ತಿತ್ವಕ್ಕೆ ಪ್ರೌಢಿಮೆ ಪ್ರಾಪ್ತವಾಗುತ್ತದೆ. ಅದನ್ನು ಸಹಜ ರೀತಿಯಲ್ಲಿ ವರ್ತಿಸಿ ಅತಿರೇಕಕ್ಕೆ ಈಡಾಗದಂತೆ ಕಾಪಾಡುವ ಜವಾಬ್ದಾರಿ ಪೋಷಕರದು ಮತ್ತು ಶಿಕ್ಷಕರದು. ಇಲ್ಲಿ ಯಾವುದೇ ಲಿಂಗ ತಾರತಮ್ಯಕ್ಕೆ ಅವಕಾಶವಿರುವುದಿಲ್ಲ.  ಇದರಿಂದಾಗಿ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಸಮಾಜದ ಸುಧಾರಣೆಗೆ ಸಹಾಯವಾಗುತ್ತದೆ.

ಸಹ – ಶಿಕ್ಷಣ ಪದ್ಧತಿಯಿಂದಾಗಿ ಹುಡುಗರು ಹುಡುಗಿಯರ ಬಳಿ ಸಭ್ಯವಾಗಿ ವರ್ತಿಸುತ್ತಾರೆ ಹಾಗೂ ಹುಡುಗಿಯರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹುಡುಗರನ್ನು ನೋಡಿದರೆ ಭಯಪಡುವುದು, ಅವರೊಡನೆ ಮಾತನಾಡಲು ಹಿಂಜರಿಕೆ ಇಂತಹ ಗೊಂದಲ ಇರಿಸು – ಮುರಿಸು ಪಡುವಂತೆ ಆಗುವುದಿಲ್ಲ.ಅವರಲ್ಲಿ   ಆರೋಗ್ಯಕರ ಸ್ಪರ್ಧೆ ಮತ್ತು ಸೌಹಾರ್ದ ಭಾವನೆ ಇರುತ್ತದೆ. ಇದು ಹುಡುಗ ಮತ್ತು ಹುಡುಗಿಯರ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತದೆ.

Advertisement

ಭವಿಷ್ಯದಲ್ಲಿ ಪುರುಷರು ಮತ್ತು ಮಹಿಳೆಯರು ಒಂದೇ ಸ್ಥಳದಲ್ಲಿ ಉದ್ಯೋಗ ಮಾಡಬೇಕಾಗುತ್ತದೆ. ಒಟ್ಟಿಗೆ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕಾಗುತ್ತದೆ ಈ ಸಹ – ಶಿಕ್ಷಣ ಪದ್ಧತಿಯು ಪರಸ್ಪರ ಹೇಗೆ ಬೆರೆಯಬೇಕು ಎನ್ನುವುದನ್ನು ಮೊದಲ ಹಂತದಲ್ಲಿಯೇ ತಿಳಿಸಿರುತ್ತದೆ. ಗಂಡು ಮತ್ತು ಹೆಣ್ಣು ಯಶಸ್ವಿಯಾಗಿ ಜೀವನವನ್ನು ನಡೆಸಲು  ಸಹಾಯವಾಗುತ್ತದೆ. ಸಮಾಜದಲ್ಲಿ ಆರ್ಥೀಕ, ಸಾಮಾಜಿಕ, ಶೈಕ್ಷಣಿಕ ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ವ್ಯವಸ್ಥೆ ಬಹಳ ಸಹಕಾರಿ ಎನ್ನಬಹುದು.

-ಚೇತನ ಭಾರ್ಗವ,

ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next