ಸಂರಕ್ಷಣೆಯಂಥ ಸಮಾಜ ಕಾರ್ಯಕ್ಕೆ ಕಾಲಿಡುತ್ತಿರುವ ನಮಗೆ ಜನರ ಪ್ರೋತ್ಸಾಹ ಮತ್ತು ಸಹಕಾರ ದೊರೆತರೆ ನಿಂತರವಾಗಿ ಈ ಕಾರ್ಯಕ್ರ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನ ಕ್ಯಾಡಮ್ಯಾಕ್ಸ್ ಸಲ್ಯೂಶನ್ ಹಾಗೂ ಎಂಎಸ್‌ಎಂಇ ವತಿಯಿಂದ ದ್ವಿತೀಯ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ
ಅರುಣಕುಮಾರ ಪಾಟೀಲ ಹಳ್ಳಿಸಲಗರ ಹೇಳಿದರು.
Advertisement
ತಾಲೂಕಿನ ಖಜೂರಿ ಕೋರಣೇಶ್ವರ ಮಠದಲ್ಲಿ ಶುಕ್ರವಾರ ಶ್ರೀಮಠದ ಪೀಠಾಧಿಪತಿ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿಗಳ 57ನೇ ಜನ್ಮದಿನದ ಪ್ರಯುಕ್ತ ಹಳ್ಳಿಸಲಗರದ ಶ್ರೀ ಚನ್ನಬಸಪ್ಪ ಪಾಟೀಲ ಮೆಮೋರಿಯಲ್ ಟ್ರಸ್ಟ್, ಕಲಬುರಗಿಯ ಎಚ್‌ಸಿಜಿ ಆಸ್ಪತ್ರೆ, ಎಚ್‌ಕೆಇ ಸಂಸ್ಥೆಯ ಎಸ್. ನಿಜಲಿಂಗಪ್ಪದಂತ ಮಹಾವಿದ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದೇನೆ. ತಮ್ಮ ಒಡೆತನದ ಕ್ಯಾಡ್‌ಮ್ಯಾಕ್ಸ್ ಸಂಸ್ಥೆಯಿಂದ 16
ಸಾವಿರ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. 20 ರಿಂದ 30 ಸಾವಿರ ಮಂದಿಗೆ
ಉಚಿತ ಕೌಶಲ್ಯ ತರಬೇತಿ ನೀಡಿದ್ದರಿಂದ ಅವರು ಉದ್ಯೋಗದಲ್ಲಿ ತೊಡಗಿದ್ದಾರೆ. ಇದರ ಫಲವಾಗಿ ಉದ್ಯಮ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ ಎಂದು ಹೇಳಿದರು. ಶಿಬಿರದಲ್ಲಿ ಕ್ಯಾನ್ಸರ್ ಸೇರಿ ಇನ್ನಿತರ ನುರಿತ ತಜ್ಞ ವೈದ್ಯರನ್ನು ಆಮಂತ್ರಿಸಿ ಆರೋಗ್ಯ ತಪಾಸಣೆ
ಮತ್ತು ಚಿಕ್ಸಿತೆ ಕೊಡಲು ಮುಂದಾಗಲಾಗಿದೆ. ಜನರು ಇದರ ಲಾಭ ಪಡೆಯಬೇಕು ಎಂದರು.
Related Articles
ಉತ್ತರೋತ್ತರವಾಗಿ ಅರುಣಕುಮಾರ ಪಾಟೀಲ ಬೆಳೆದು ಜನ ಸೇವೆ ಮಾಡುವ ಶಕ್ತಿ ಬರಲಿ ಎಂದು ಹಾರೈಸಿದರು.
Advertisement
ಮಾಡಿಯಾಳ ಒಪ್ಪತ್ತೇಶ್ವರ ಮಠದ ಮರುಳಸಿದ್ಧ ಮಹಾಸ್ವಾಮೀಜಿ, ಮಾದನಹಿಪ್ಪರಗಾ ಮಠದ ಅಭಿನವ ಶಿವಲಿಂಗ ಮಹಾಸ್ವಾಮೀಜಿ ಮಾತನಾಡಿ, ಮುರುಘೇಂದ್ರ ಶ್ರೀಗಳ ಜನ್ಮದಿನದ ಅಂಗವಾಗಿ ಪಾಟೀಲ ಮೆಮೋರಿಯಲ್ ಟ್ರಸ್ಟ್‌ನಿಂದ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆಎಂದರು. ಕಲಬುರಗಿ ಎಚ್‌ಸಿಜಿ ಆಸ್ಪತ್ರೆಯ ವೈದ್ಯಕೀಯ ಅ ಧೀಕ್ಷಕ ಡಾ| ಶಾಂತಲಿಂಗ ನಿಗ್ಗುಡಗಿ ಮಾತನಾಡಿದರು. ಜೆಡಿಎಸ್ ರಾಜ್ಯ ಸಂಘಟನಾ ನೂತನ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ ಮದಗುಣಕಿ, ಮುಖಂಡ ಮಲ್ಲಿನಾಥ ನಿಂಬಾಳ, ಗ್ರಾಪಂ ಉಪಾಧ್ಯಕ್ಷ ಶ್ರೀಶೈಲ ಬಂಡೆ, ಇಟಗಾದ ಶ್ರೀ ಶಿವಾನಂದ ಸ್ವಾಮೀಜಿ, ಡಾ| ಶಿವಶಂಕರ ಚಾಕೂರ, ಡಾ| ರಾಮ ಮೋಹನ, ಚಂದ್ರಶೇಖರ ಪಾಟೀಲ, ಸಿದ್ದಣಗೌಡ ಪಾಟೀಲ
ಪಾಲ್ಗೊಂಡಿದ್ದರು. ಗಂಗಾಧರ ಕುಂಬಾರ ನಿರೂಪಿಸಿದರು. ಮಂಜುನಾಥ ಕಂದಗುಳೆ ವಂದಿಸಿದರು. ನಂತರ ಪಾಲ್ಗೊಂಡಿದ್ದ ಖಜೂರಿ ಸೇರಿ ಸುತ್ತಮುತ್ತಲಿನ ಗ್ರಾಮಗಳ 450 ಜನರಿಗೆ ವಿವಿಧ ರೋಗಳಿಗೆ ಆರೋಗ್ಯ ತಪಾಸಣೆ ಕೈಗೊಂಡು ಔಷಧ-ಮಾತ್ರೆ ವಿತರಿಸಲಾಯಿತು. 25ಕ್ಕೂ ಹೆಚ್ಚಿನ ನುರಿತ ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.