ಮೈಸೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇಪಿ) ಕ್ರಾಂತಿಕಾರಕವಾಗಿದ್ದು, ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ತಾರತಮ್ಯವನ್ನುಇದು ಹೋಗಲಾಡಿಸಲಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ತಿಳಿಸಿದರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದಅವರು,ಸಂಶೋಧನೆಗೆ ಹೆಚ್ಚು ಒತ್ತು ನೀಡಲು ಈ ನೀತಿ ಸಹಕಾ ರಿಯಾಗಲಿದ್ದು , ಅಮೆರಿಕ, ಇಸ್ರೇಲ್, ಜರ್ಮನಿ ಹಾಗೂ ಜಪಾನ್ ದೇಶಗಳಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗಿದೆ. ಅದರಂತೆ ನಮ್ಮಲ್ಲಿಯೂ ಸಂಶೋಧನೆಗೆ ಒತ್ತು ನೀಡಿದರೆ ದೇಶದಲ್ಲಿ ಸಕಾರಾತ್ಮಕ ಪ್ರಗತಿ ಸಾಧ್ಯ ಎಂದರು.
ಸಿಎಸ್‌ಐಆರ್‌ಗೆ ನೇಮಕ: ಸಂಶೋಧನಾ ಕ್ಷೇತ್ರದ ಸಾಧನೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ನನ್ನನ್ನು ನವದೆಹಲಿಯ ಸಿಎಸ್‌ಐಆರ್‌ಗೆ ನೇಮಿಸಿದೆ. ವಿಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಸಂಶೋಧನೆ ಹಾಗೂ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ನವದೆಹಲಿಯಲ್ಲಿರುವ ಸಿಎಸ್‌ಐಆರ್(ಎಮೆರಿಟಸ್ ಸೈಂಟಿಸ್ಟ್ ಫ್ರಮ್ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್)ಗೆ ನೇಮಿಸಿದೆ. ಇದು ಮೈಸೂರು ವಿವಿಗೆ ಸಂದ ಗೌರವ. ಈ ನೇಮಕದಿಂದ ಮತ್ತಷ್ಟು ಗುಣಾತ್ಮಕ ಸಂಶೋಧನೆಯಲ್ಲಿ ನಡೆಸಲು ನನಗೆ ಅವಕಾಶ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಾಜೆಕ್ಟ್ಅರ್ಧಕ್ಕೆ ನಿಂತಿದೆ: ಕ್ಯಾನ್ಸರ್ ಸಂಬಂಧಿತ ಸಂಶೋಧನೆಗೆಚೀನಾ ದೇಶದ ಜೊತೆ ನಾನು ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರ ಹೇಳಿದರೆ ನಾನು ಮುಂದೆಯೂ ಅದನ್ನು ಯೋಜನೆಯನ್ನು ಮುಂದುವರಿಸುವುುದಿಲ್ಲ. ಆದರೆ ಕೇಂದ್ರ ಸರ್ಕಾರ ಯಾವ ಸಂದರ್ಭದಲ್ಲೂ ಈ ರೀತಿಮಾಡುವುದಿಲ್ಲ ಎಂಬ ನಂಬಿಕೆ ಇದೆ. ಭಾರತ-ಚೀನಾ ಗಡಿವಿವಾದಹಿನ್ನೆಲೆಭಾರತ ಮತ್ತು ಚೀನಾದ ಬಾಂಧವ್ಯ ಹದಗೆಟ್ಟಿದ್ದು, ಸುಮಾರು500ಕೋಟಿ ರೂ. ಪ್ರಾಜೆಕ್ಟ್ ಅರ್ಧಕ್ಕೆ ನಿಂತಿದೆ ಎಂದು ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.
ಎರಡು ತಿಂಗಳಲ್ಲಿ ಕೋವಿಡ್ ಲಸಿಕೆ ಲಭ್ಯ : ಯುಕೆಯ ಆಕ್ಸ್‌ಫರ್ಡ್ ವಿವಿಯ ಎಡ್ವರ್ಡ್ ಜನರಲ್ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ನಡೆದಿದೆ. ಸಂಶೋಧನೆ ಮೂರನೇ ಹಂತ ತಲುಪಿದೆ. ಅಲ್ಲಿಯ ಸಂಶೋಧಕರ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಸಂಶೋಧನೆ ತುಂಬಾ ಚೆನ್ನಾಗಿ ನಡೆದಿದೆ. ಇನ್ನೂ ಎರಡು ತಿಂಗಳಲ್ಲಿ ಕೋವಿಡ್ ಲಸಿಕೆ ಬರುವುದು ಖಚಿತವಾಗಿದೆ ಎಂದು ಪ್ರೊ.ಕೆ.ಎಸ್. ರಂಗಪ್ಪ ವಿಶ್ವಾಸವ್ಯಕ್ತಪಡಿಸಿದರು. ಮೂರನೇ ಹಂತದಲ್ಲಿ 6 ಸಾವಿರ ಜನರಿಂದ ಸಂಶೋಧನೆ ನಡೆಯುತ್ತಿದೆ. ಪ್ರಯೋಗಾತ್ಮಕವಾಗಿ ಈಗಾಗಲೇ ಹಲವರಿಗೆ ವ್ಯಾಕ್ಸಿನ್ ನೀಡಲಾಗಿದೆ. ಕೋವಿಡ್ ವ್ಯಾಕ್ಸಿನ್ 2 ಸಾವಿರ ರೂ.ಗಿಂತ ಕಡಿಮೆಗೆ ಸಿಗಲಿದೆ. ಯಾವುದೇ ಕಾರಣಕ್ಕೂ ಹೆಚ್ಚು ಬೆಲೆ ಆಗುವುದಿಲ್ಲ. ಏಕೆಂದರೆ ದೇಶದಲ್ಲಿ ಈಗಾಗಲೇ ನೂರಕ್ಕೂ ಹೆಚ್ಚುಕಂಪನಿಗಳು ಲಸಿಕೆ ತಯಾರಿಸಲು ತುದಿಗಾಲಲ್ಲಿ ನಿಂತಿವೆ. ಅನುಮತಿ ಸಿಕ್ಕ ತಕ್ಷಣ ಪೂರೈಕೆ ಹೆಚ್ಚುತ್ತದೆ. ಕೋವಿಡ್ ಹಳೆಯ ವೈರಸ್‌ಆಗಿದ್ದು, ಇದುದುರ್ಬಲವಾದುದು. ಸದ್ಯಕ್ಕೆ ಪ್ರಾಣಿಗಳಿಂದಈ ಸೋಂಕು ಕಾಣಿಸಿಕೊಂಡಿದ್ದು, ಪ್ರಯೋಗಾಲಯದಿಂದ ಮನುಷ್ಯನಿಗೆ ಹರಡಿದೆ ಎಂದರು.
ಸಾರ್ಸ್, ಎಬೋಲಾದಷ್ಟು ಕೋವಿಡ್ ಮಾರಕವಲ್ಲ : ಕೋವಿಡ್ ವೈರಾಣು ದುರ್ಬಲವಾಗಿದ್ದು, ಜನರು ಹೆಚ್ಚು ಭಯಭೀತರಾಗುವ ಅಗತ್ಯವಿಲ್ಲ. ಜೊತೆಗೆ ಗಾಳಿ ಹಾಗೂ ನೀರಿನ ಮೂಲಕ ಸೋಂಕು ಹರಡುವುದಿಲ್ಲ. ಒಂದು ವೇಳೆ ಸೋಂಕಿತ ವ್ಯಕ್ತಿ ಬಳಸಿದ ನೀರನ್ನು ಮತ್ತೂಬ್ಬ ಬಳಸಿದರೆ ಶೇ.1ರಷ್ಟು ಸೋಂಕು ಬರುವ ಸಾಧ್ಯತೆ ಇಲ್ಲ. ನಮ್ಮಲ್ಲಿ ಕೋವಿಡ್ ನಿಂದಲೇ ಜನರು ಸಾಯುತ್ತಿಲ್ಲ. ಬೇರೆ ಬೇರೆ ಆರೋಗ್ಯದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಹಾಗೂ ಇತರೆಕಾಯಿಲೆ ಇರುವವರು ಆದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಪ್ರೊ.ಕೆ.ಎಸ್. ರಂಗಪ್ಪ ಸಲಹೆ ನೀಡಿದರು.