Advertisement

‘ಶ್ರೀಮಂತ ಕುಟುಂಬದಲ್ಲಿ ವಿಚ್ಛೇದನಗಳು ಹೆಚ್ಚು’

09:46 AM Feb 18, 2020 | Hari Prasad |

ಅಹಮದಾಬಾದ್‌: ವಿಚ್ಛೇದನ ಪ್ರಕರಣಗಳು ಹೆಚ್ಚು ಶಿಕ್ಷಣ ಪಡೆದವರಲ್ಲಿ ಮತ್ತು ಶ್ರೀಮಂತ ಕುಟುಂಬದವರಲ್ಲಿ ಹೆಚ್ಚು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಅಭಿಪ್ರಾಯ ಪಟ್ಟಿದ್ದಾರೆ. ಅಹಮದಾಬಾದ್‌ನಲ್ಲಿ ರವಿವಾರ ಆರ್‌ಎಸ್‌ಎಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

Advertisement

ವಿದ್ಯಾಭ್ಯಾಸ ಹಾಗೂ ಶ್ರೀಮಂತಿಕೆಯು ಕುಟುಂಬ ವರ್ಗಗಳಲ್ಲಿ ಅಹಂಕಾರ ಹೆಚ್ಚಿಸುತ್ತದೆ. ಇದರಿಂದಾಗಿ ಕುಟುಂಬ ವ್ಯವಸ್ಥೆಗೆ ಹಿನ್ನಡೆ ಉಂಟಾಗುತ್ತದೆ ಎಂದಿದ್ದಾರೆ. ಸ್ವಯಂ ಸೇವಕರು ಸಂಘದಲ್ಲಿ ತಾವು ನಡೆಸುವ ಕಾರ್ಯ ಚಟುವಟಿಕೆಗಳ ಬಗ್ಗೆ ಕುಟುಂಬ ಸದಸ್ಯರಿಗೆ ವಿವರಿಸಬೇಕು.

ಮಹಿಳೆಯರನ್ನು ಮನೆಯಲ್ಲೇ ಉಳಿಸಬೇಕು ಎಂಬ ನಿಯಮವೇ ಸಮಾಜವು ಸದ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರಣ ಎಂದು ಹೇಳಿದ್ದಾರೆ. ಹಿಂದೂ ಸಮಾಜ ಸದ್ಗುಣಶೀಲವಾಗಿರಬೇಕು ಮತ್ತು ಸಂಘಟಿತವಾಗಬೇಕು. ಸಮಾಜ ಎಂದರೆ ಕೇವಲ ಪುರುಷರು ಮಾತ್ರವಲ್ಲ. ಸಮಾಜವೆಂದರೆ ಎಲ್ಲರನ್ನೂ ಒಳಗೊಂಡ ಒಂದು ವ್ಯವಸ್ಥೆಯಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next