Advertisement

Ediga ಸಮಾವೇಶ;ದಾರಿ ತಪ್ಪಿಸುವವರ ಮಾತು ಕೇಳುತ್ತಿರುವ ಸಿದ್ದರಾಮಯ್ಯ:ಶ್ರೀನಾಥ್

05:47 PM Dec 09, 2023 | Team Udayavani |

ಗಂಗಾವತಿ: ರಾಜ್ಯದ ಅತ್ಯಂತ ಹಿಂದುಳಿದ ಸಮಾಜವಾಗಿರುವ ಈಡಿಗರ ಸಮಾಜದ ಸಮಾವೇಶ ಹಾಗೂ ಐಕ್ಯತೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾರಿ ತಪ್ಪಿಸುವವರ ಮಾತು ಕೇಳುತ್ತಿದ್ದು ಇದರಿಂದ ಮುಂಬರುವ ಲೋಕಸಭಾ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದ್ದು, ಮುಖ್ಯಮಂತ್ರಿಗಳು ಈಡಿಗ ಸಮಾಜದ ಹಿರಿಯ ಮುಖಂಡರ ಮಾರ್ಗದರ್ಶನ ಪಡೆಯುವಂತೆ ವಿಧಾನಪರಿಷತ್ ಮಾಜಿ ಸದಸ್ಯ, ಈಡಿಗ ಸಮಾಜದ ರಾಜ್ಯ ಮುಖಂಡ ಎಚ್.ಆರ್.ಶ್ರೀನಾಥ ಒತ್ತಾಯಿಸಿದ್ದಾರೆ.

Advertisement

ಸಿದ್ದರಾಮಯ್ಯನವರಿಗೆ ಎರಡು ಭಾರಿ ಮುಖ್ಯಮಂತ್ರಿ ಸ್ಥಾನ ಸಿಗಲು ಈಡಿಗ ಸಮುದಾಯದ ಕೊಡುಗೆ ಇದೆ. ಈಡಿಗ ಸಮಾಜದ ಹಿರಿಯರಾದ ಎಚ್.ಜಿ.ರಾಮುಲು, ಬಿ.ಕೆ.ಹರಿಪ್ರಸಾದ ಸೇರಿ ಹಲವರ ಪರಿಶ್ರಮದ ಫಲವಾಗಿ ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರುವಂತಾಗಿದೆ. ಇದೀಗ ಬೆಂಗಳೂರು ಸುತ್ತಮುತ್ತಲಿನ ಕೆಲ ಸ್ವಾರ್ಥ ಈಡಿಗ ಸಮಾಜದವರು ಸಿದ್ದರಾಮಯ್ಯನವರಿಗೆ ದಾರಿ ತಪ್ಪಿಸುತ್ತಿದ್ದು ಸಮಾಜದ ಜಗದ್ಗುರು ಪ್ರಣವಾನಂದಸ್ವಾಮೀಜಿಯವರನ್ನು ನಿರ್ಲಕ್ಷ್ಯ ಮಾಡಿ ಡಿ.10 ರಂದು ಬೆಂಗಳೂರಿನಲ್ಲಿ ಈಡಿಗರ ಸಮಾವೇಶ ಏರ್ಪಡಿಸಿರಿವುದು ಖಂಡನೀಯವಾಗಿದೆ ಎಂದರು.

ಸಮಾಜವನ್ನು ಇಬ್ಬಾಗ ಮಾಡುವ ಶಕ್ತಿಗಳ ಮಾತನ್ನು ಸಿಎಂ ಸಿದ್ದರಾಮಯ್ಯ ಕೇಳಬಾರದು. ಒಬ್ಬ ಹಿಂದುಳಿದ ನಾಯಕರಾಗಿ ಸರ್ವ ಹಿಂದುಳಿದ ಜನಾಂಗದವರ ಹಿತ ಕಾಯುವ ಕಾರ್ಯ ಸಿದ್ದರಾಮಯ್ಯ ಮಾಡಬೇಕು. ಡಿ.10 ರಂದು ಗಂಗಾವತಿಯಲ್ಲಿ ಈಡಿಗ ಸಮಾಜದ ಗುರುಗಳಾದ ಪ್ರಣವಾನಂದ ಸ್ವಾಮೀಜಿ ಸೇರಿ ಇತರೆ ಹಿಂದುಳಿದ ಸಮಾಜಗಳ ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈಗಲೂ ಕಾಲ ಮಿಂಚಿಲ್ಲ ಸಿದ್ದರಾಮಯ್ಯನವರು ಹಿತಶತ್ರುಗಳ ಮಾತು ಕೇಳದೇ ಈಡಿಗ ಸಮಾಜದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಹಿಂದುಳಿದವರ ಹಿತ ಕಾಪಾಡುವ ಕೆಲಸ ಮಾಡುವಂತೆ ಶ್ರೀನಾಥ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next