Advertisement
ಫ್ಲಾಟ್‌ನ ಬಾಗಿಲಿಗೆ ಬೀಗ ಹಾಕಿದ್ದರಿಂದ ಹಾಗೂ ಅದರ ಕೀಲಿ ಕೈ ಸಿಗದೇ ಇದ್ದುದರಿಂದ ಕೇಂದ್ರ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ.
ಈ ನಡುವೆ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಟಿಎಂಸಿ ಮುಖಂಡ ಪಾರ್ಥ ಚಟರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಾರೆ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ. ವೈದ್ಯಕೀಯ ಪರೀಕ್ಷೆಯ ಬಳಿಕ ಮಾತನಾಡಿದ ಅವರು, “ಟಿಎಂಸಿ ನನ್ನ ವಿರುದ್ಧ ಕೈಗೊಂಡ ಕ್ರಮ ಸರಿಯೋ ತಪ್ಪೋ ಎನ್ನುವುದನ್ನು ಸಮಯವೇ ನಿರ್ಧರಿಸಲಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Related Articles
ಅರ್ಪಿತಾ ಮುಖರ್ಜಿಗೆ ಸೇರಿದ ಮೂರು ಕಂಪನಿಗಳು ಮತ್ತು ಅವುಗಳ ಮೂಲಕ ನಡೆಸಲಾಗಿದೆ ಎಂದು ಹೇಳಲಾಗಿರುವ ವಹಿವಾಟಿನ ಬಗ್ಗೆ ಇ.ಡಿ.ತನಿಖೆ ಶುರು ಮಾಡಿದೆ. ಅರ್ಪಿತಾ ಮುಖರ್ಜಿಯನ್ನು 2011ರ ಮಾ.21ರಂದು ಕಂಪನಿಯ ನಿರ್ದೇಶಕಿಯನ್ನಾಗಿ ನೇಮಕ ಮಾಡಲಾಗಿತ್ತು. ಅದೇ ವರ್ಷದ ಜು.1ರಂದು ನಟಿಯ ಸಹೋದರನನ್ನೂ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ದಾಖಲೆಗಳಲ್ಲಿ ಉಲ್ಲೇಖಗೊಂಡ ಮಾಹಿತಿಯಂತೆ ಆ ಕಂಪನಿ ವಿವಿಧ ರೀತಿಯ ಸರಕುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದೆ.
Advertisement
ಬಲವಂತದಿಂದ ವೈದ್ಯಕೀಯ ಪರೀಕ್ಷೆಟಿಎಂಸಿ ಶಾಸಕ ಪಾರ್ಥ ಚಟರ್ಜಿ ನಿಕಟವರ್ತಿ ಅರ್ಪಿತಾ ಮುಖರ್ಜಿ ಕೋರ್ಟ್ ಆದೇಶದಂತೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿದ ಘಟನೆ ನಡೆದಿದೆ. ಕೋಲ್ಕತಾದ ಜೋಕಾ ಎಂಬಲ್ಲಿರುವ ಆಸ್ಪತೆಗೆ ಕಾರ್‌ನಲ್ಲಿ ಮುಖರ್ಜಿಯನ್ನು ಇ.ಡಿ.ಅಧಿಕಾರಿಗಳು ಕರೆ ತಂದಾಗ ಇಳಿಯಲು ನಿರಾಕರಿಸಿದರು. ಎಷ್ಟೇ ಮನವೊಲಿಸಿದರೂ, ಆಕೆ ಅತ್ತು ರಂಪ ಮಾಡಿ, ಕಾರಿನಲ್ಲೇ ಕೈ ಕಾಲುಗಳನ್ನು ಬಡಿದಿದ್ದಾರೆ. ಭದ್ರತಾ ಸಿಬ್ಬಂದಿ ಎತ್ತಿಕೊಂಡು ಹೋಗಲು ಪ್ರಯತ್ನಿಸಿದಾಗ ಆಕೆ ರಸ್ತೆಯಲ್ಲೇ ಕುಳಿತಳು. ಇದರ ಹೊರತಾಗಿಯೂ ಕೋರ್ಟ್ ಆದೇಶ ಪಾಲನೆ ಮಾಡುವ ನಿಟ್ಟಿನಲ್ಲಿ ಮುಖರ್ಜಿಯನ್ನು ಬಲವಂತವಾಗಿ ಆಸ್ಪತ್ರೆಯ ಒಳಕ್ಕೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಈವರೆಗೆ ರೈಡ್‌ನಲ್ಲಿ ಸಿಕ್ಕಿದ್ದೇನು?
ಮೊದಲ ದಾಳಿ- 21.90 ಕೋಟಿ ರೂ. (56 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ, 76 ಲಕ್ಷ ರೂ. ಮೌಲ್ಯದ ಚಿನ್ನ) ಒಟ್ಟು 23.22 ಕೋಟಿ ರೂ.
ಎರಡನೇ ದಾಳಿ- 27.9 ಕೋಟಿ ರೂ. 5 ಕೆಜಿ ಚಿನ್ನ (4.3 ಕೋಟಿ ರೂ. ಮೌಲ್ಯ)
ಮೂರನೇ ದಾಳಿ – 28 ಕೋಟಿ ರೂ. ಪತ್ತೆ.