Advertisement

AAP;ಎಂಪಿ ಮೇಲೆ ಇಡಿ ದಾಳಿ: ಸೋಲಿಸಲಾಗದೆ ಮೋದಿ ಈ ರೀತಿ ಮಾಡುತ್ತಿದ್ದಾರೆ..

06:48 PM Oct 07, 2024 | Team Udayavani |

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಸಂಸದ ಸಂಜೀವ್ ಅರೋರಾ ಅವರನ್ನು ಗುರಿಯಾಗಿಸಿ ಸೋಮವಾರ(ಅ7) ಜಾರಿ ನಿರ್ದೇಶನಾಲಯ (ED) ಹಲವು ಕಡೆ ದಾಳಿ ನಡೆಸಿದ್ದು ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದೆ.

Advertisement

ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರು ಕಿಡಿ ಕಾರಿದ್ದು, ಇಂದು, ಆಮ್ ಆದ್ಮಿ ಪಕ್ಷ, ಅರವಿಂದ್ ಕೇಜ್ರಿವಾಲ್ ಮತ್ತು ನಮ್ಮ ನಾಯಕರನ್ನು ನಾಶಮಾಡುವ ಪ್ರಯತ್ನದಲ್ಲಿ, ಪ್ರಧಾನ ಮಂತ್ರಿಗಳ ಮುದ್ದಿನ ಸಂಸ್ಥೆ ಇಡಿ ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಅವರ ಮನೆಯ ಮೇಲೆ ದಾಳಿ ಮಾಡಿದೆ. ಮೋದಿ ಅವರು ತನಿಖಾ ಸಂಸ್ಥೆಗಳನ್ನು ರಾಜಕೀಯ ಸಾಧನಗಳಾಗಿ ಬಳಸುತ್ತಿದ್ದಾರೆ. ಚುನಾವಣೆಯಲ್ಲಿ ನಮ್ಮನ್ನು ಸೋಲಿಸಲು ಸಾಧ್ಯವಾಗದ ಕಾರಣ ಇಂತಹ ಕ್ರಮಗಳನ್ನು ಅನುಸರಿಸುತ್ತಿದ್ದಾರೆ” ಎಂದು ಕಿಡಿ ಕಾರಿದರು.

61 ರ ಹರೆಯದ ಅರೋರಾ ಮತ್ತು ಇತರರ ವಿರುದ್ಧ ಭೂ “ವಂಚನೆ” ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸೋಮವಾರ ಜಲಂಧರ್, ಲೂಧಿಯಾನ, ಗುರುಗ್ರಾಮ್ ಮತ್ತು ದೆಹಲಿಯಲ್ಲಿ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಲೂಧಿಯಾನ ಮತ್ತು ಗುರುಗ್ರಾಮ್‌ನಲ್ಲಿರುವ ಸಂಸದ ಅರೋರಾ ಅವರ ಮನೆಗಳು ಸೇರಿದಂತೆ ಸುಮಾರು 16-17 ಸ್ಥಳಗಳನ್ನು ಶೋಧಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಅರೋರಾ ಅವರು ತಮ್ಮ ಕಂಪನಿಯ ಹೆಸರಿನಲ್ಲಿ “ಕಾನೂನುಬಾಹಿರ” ರೀತಿಯಲ್ಲಿ ಕೈಗಾರಿಕಾ ಪ್ಲಾಟ್ ಅನ್ನು ವರ್ಗಾಯಿಸಿರುವ ಆರೋಪ ಕೇಳಿಬಂದಿದೆ. ಏತನ್ಮಧ್ಯೆ, ಅರೋರಾ ಅವರು ಎಕ್ಸ್‌ ಪೋಸ್ಟ್‌ನಲ್ಲಿ ದಾಳಿ ಹಿಂದಿನ ಕಾರಣದ ಬಗ್ಗೆ ನನಗೆ ಖಾತ್ರಿಯಿಲ್ಲ, ಆದರೆ ಏಜೆನ್ಸಿಯೊಂದಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next