ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯದಿಂದ (ಇಡಿ) ಏಳನೇ ಸಮನ್ಸ್ ಸ್ವೀಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಫೆಬ್ರವರಿ 26 ರಂದು ತನಿಖಾ ಸಂಸ್ಥೆಯ ಮುಂದೆ ಹಾಜರಾಗುವಂತೆ ಕೇಜ್ರಿವಾಲ್ ಅವರನ್ನು ಕೇಳಲಾಗಿದೆ.
ಕಳೆದ ಫೆಬ್ರವರಿ 14 ರಂದು ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರಿಗೆ ಆರನೇ ಬಾರಿಗೆ ಸಮನ್ಸ್ ನೀಡಿ ಫೆಬ್ರವರಿ 19 ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು ಆದರೆ ಕೇಜ್ರಿವಾಲ್ ವಿಚಾರಣೆಯಿಂದ ಹಿಂದೆ ಸರಿದಿದ್ದು ಇದೊಂದು ಕಾನೂನು ಬಾಹಿರ ಪ್ರಕ್ರಿಯೆ ಎಂದು ಪಕ್ಷ ಹೇಳಿದ್ದು ಈಗಾಗಲೇ ಈ ವಿಚಾರ ನ್ಯಾಯಾಲಯದಲ್ಲಿದ್ದು ತನಿಖಾ ಸಂಸ್ಥೆ ನಾಟಕವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದರ ಬೆನ್ನಲ್ಲೇ ದೆಹಲಿ ಅಬಕಾರಿ ನೀತಿ 2021-22 ಪ್ರಕರಣದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಏಳನೇ ಸಮನ್ಸ್ ಜಾರಿ ಮಾಡಿದ್ದು ಮುಂದಿನ ಫೆಬ್ರವರಿ 26 ರಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ.
ಇದನ್ನೂ ಓದಿ: ಸತ್ಯಜಿತ್ ಸುರತ್ಕಲ್ ಗೆ ಲೋಕಸಭೆ ಟಿಕೆಟ್ ನೀಡಲು ಒತ್ತಾಯಿಸಿ ಫೆ.25ರಂದು ಜನಾಗ್ರಹ ಸಮಾವೇಶ