Advertisement
ಸಿಬಿಐ ಸಲ್ಲಿಕೆ ಮಾಡಿದ್ದ ಎಫ್ಐಆರ್ ಆಧಾರದಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ. ಆರೋಪಿಗಳಿಗೆ ಆದಷ್ಟು ಬೇಗ ಸಮನ್ಸ್ ಜಾರಿ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ. ಕೆಲವು ಸಚಿವರು, ಶಾಸಕರು ಮತ್ತು ಸಂಸದರು ಹಣ ಸ್ವೀಕರಿಸುತ್ತಿರುವ ದೃಶ್ಯಗಳು 2016ರ ಚುನಾವಣೆಗೆ ಮುನ್ನ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದ್ದವು. ಅನಂತರ, ಇದು ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಕೇಂದ್ರದ ನರೇಂದ್ರ ಮೋದಿ ಸರಕಾರ ಸೇಡಿನ ರಾಜಕೀಯಕ್ಕೆ ಇದನ್ನು ಬಳಕೆ ಮಾಡಿಕೊಂಡು ನಮ್ಮ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದರು. ಇದು ರಾಜ್ಯ, ಕೇಂದ್ರದ ನಡುವೆ ವಾಕ್ಸಮರಕ್ಕೂ ದಾರಿ ಮಾಡಿಕೊಟ್ಟಿತ್ತು. Advertisement
ಟಿಎಂಸಿ 13 ನಾಯಕರ ವಿರುದ್ಧ ಪ್ರಕರಣ
01:46 AM Apr 29, 2017 | Karthik A |
Advertisement
Udayavani is now on Telegram. Click here to join our channel and stay updated with the latest news.