ಮುಂಬಯಿ: ಗ್ರಾಹಕರ ವಿಶ್ವಾಸದ ಸ್ಫೂರ್ತಿಯಿಂದ ಲಾಜಿಸ್ಟಿಕ್ ಸೇವೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವೀ ಸಾಧಕವೆನಿಸಿಕೊಂಡ ತುಳು-ಕನ್ನಡಿಗರ “ಭವಾನಿ ಗ್ರೂಪ್ ಆಫ್ ಕಂಪೆನೀಸ್’ಇದರ ಪ್ರತಿಷ್ಠಿತ “ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಲಿಮಿಟೆಡ್’ ಸಂಸ್ಥೆಗೆ ಈ ಬಾರಿಯ “ಎಕನೋಮಿಕ್ ಟೈಮ್ಸ್ ಬಿಜಿನೆಸ್ ಐಕಾನ್ಸ್ -2019 ಲೀಡಿಂಗ್ ಮಲ್ಟಿಮೋಡಲ್ ಲಾಜಿಸ್ಟಿಕ್ ಕಂಪೆನಿ ಪ್ರಶಸ್ತಿ’ ಲಭಿಸಿದೆ.
ಇತ್ತೀಚೆಗೆ ಲೋವರ್ ಪರೇಲ್‌ನ ಹೊಟೇಲ್ ಸೈಂಟ್ ರೇಗಿಸ್ ಸಭಾಗೃಹದಲ್ಲಿ ನಡೆದ ವರ್ಣರಂಜಿತ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶೈನಾ ಎಸ್. ಸಿ. ಇವರು ಭವಾನಿ ಗ್ರೂಪ್ ಆಫ್ ಕಂಪೆನೀಸ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕುಸುಮೋದರ ಡಿ. ಶೆಟ್ಟಿ ಚೆಲ್ಲಡ್ಕ (ಕೆ. ಡಿ. ಶೆಟ್ಟಿ), ನಿರ್ದೇಶಕರಾದ ಜೀಕ್ಷಿತ್ ಶೆಟ್ಟಿ, ಅನಿಲ್ ದೇವಿÉ ಇವರಿಗೆ ಪ್ರಶಸ್ತಿ ಪ್ರದಾನಿಸಿ ಶುಭಹಾರೈಸಿದರು.
2007 ನೇ ಸಾಲಿನಲ್ಲಿ ಆರಂಭಗೊಂಡ ‘ಭವಾನಿ ಗ್ರೂಪ್’ ಸಂಸ್ಥೆಯ ಅತೀ ವೇಗದ ಗತಿಗೆ ತಂತ್ರಜ್ಞಾನ, ಗ್ರಾಹಕರನ್ನು ತೃಪ್ತಿಪಡಿಸುವ ಮೋಡಿ, ಲಾಜಿಸ್ಟಿಕ್ ನೆಟ್‌ವರ್ಕ್ ಸೇವೆಯೇ ಸಾಕ್ಷಿಯಾಗಿದೆ. ಕೇವಲ ಎರಡು ಟ್ರೈಲರ್ ಮತ್ತು ಮೂವರು ಸಿಬಂದಿಗಳನ್ನು ಹೊಂದಿದ್ದ ಈ ಸಂಸ್ಥೆಯು ಇಂದು ಸುಮಾರು 100 ಟ್ರೈಲರ್ ಹಾಗೂ 11 ಕಂಟೇನೆರ್ ಡಿಪೋಗಳನ್ನು ಹೊಂದುವಲ್ಲಿ ಯಶಸ್ವಿಯಾಗಿದೆ.
ಅತ್ಯುಚ್ಚ ಮಟ್ಟದ ಸೇವೆಯ ಮೂಲಕ ಗ್ರಾಹಕರನ್ನು ತನ್ನೆಡೆಗೆ ಸೆಳೆದಿರುವ ಭವಾನಿ ಗ್ರೂಪ್, ಶಿಪ್ಪಿಂಗ್ ಟ್ರಾನ್ಸ್‌ಪೊàರ್ಟ್, ಲಾಜಿಸ್ಟಿಕ್, ಪೋರ್ಟ್ ಹಾಗೂ ಫ್ತೈಟ್ ಮ್ಯಾನೇಜ್‌ಮೆಂಟ್ ಸೇವೆಗಳಲ್ಲಿ ಗ್ಲೋಬಲ್ ಮಟ್ಟದಲ್ಲಿ ಯಶಸ್ಸು ಪಡೆದಿದೆ. ಪ್ಲೀಟ್ ಮ್ಯಾನೇಜ್‌ಮೆಂಟ್‌ನಲ್ಲಿ ತನ್ನದೇ ಆದ ಕೊಡುಗೆ ಸಲ್ಲಿಸುತ್ತಿರುವ ಭವಾನಿ ಗ್ರೂಪ್ ನಾನ್-ವೆಸಲ್ ಆಪರೇಟಿಂಗ್ ಕಾಮನ್ ಕ್ಯಾರಿಯರ್ (ಎನ್‌ವಿಓಸಿಸಿ) ನಲ್ಲಿ ಸುಮಾರು 3500 ಕಂಟೇನರ್‌ಗಳನ್ನು ಒಂದೇ ಬಾರಿಗೆ ಸಾಗಿಸುವ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಹೊಂದಿದೆ. ಇದರಲ್ಲಿ ರೆಫ್ರಿಜರೇಟರ್ ಕ್ಯಾರಿಯರ್, ಐಎಸ್‌ಓ ಟ್ಯಾಂಕ್ಸ್ (ಲಿಕ್ವಿಡ್, ಕೆಮಿಕಲ್ಸ್) ಗಳೂ ಸೇರಿವೆ.
‘ಭವಾನಿ ಗ್ರೂಪ್’ ಇದೀಗ ತನ್ನ ಸೇವೆಯನ್ನು ಕಾಮನ್‌ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (ಸಿಐಎಸ್) ರಾಷ್ಟ್ರಗಳಿಗೂ ವಿಸ್ತರಿಸಿದೆ. ಭವಾನಿ ಸಿಬ್ಬಂದಿಗಳು ಓಶಿಯನ್ ಕಾರ್ಗೋ ಲಾಜಿಸ್ಟಿಕ್ ಆಪರೇಶನ್ ಟಾಪ್ ನಾಚ್ ಸ್ಕಿಲ್ ಮೂಲಕ ನಡೆಯುತ್ತಿದೆ. ಯಾವುದೇ ರಾಷ್ಟ್ರಗಳಿಗೆ ನೆಟ್‌ವರ್ಕ್ ಮೂಲಕ ಶಿಪ್‌ಮೆಂಟ್ ಮಾಹಿತಿಯನ್ನು ಕ್ಲಪ್ತ ಸಮಯದಲ್ಲಿ ನೀಡಲಾಗುತ್ತಿದೆ. ಭವಾನಿ ಗ್ರೂಪ್ ಭಾರತ ಸರಕಾರದ ಮೇಕ್ ಇನ್ ಇಂಡಿಯಾ ಯೋಜನೆಯ ದೂರದೃಷ್ಟಿತ್ವದಲ್ಲಿ ಹೆಚ್ಚಿನ ನಂಬಿಕೆಯನ್ನು ಇಟ್ಟಿದ್ದು, ಭವಾನಿ ಗ್ರೂಪ್ ವುಡನ್ ಪ್ಯಾಲೆಟ್, ಪ್ಯಾಕೇಜಿಂಗ್, ಉತ್ಪಾದನೆ ಸ್ಟೋರಿಂಗ್‌ನಿಂದ ಹಿಡಿದು ಟ್ರಾನ್ಸ್‌ಪೊàರ್ಟ್‌ವರೆಗಿನ ಎಲ್ಲಾ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುವಲ್ಲಿ ಯಶಸ್ವಿಯಾಗಿ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಜೊತೆಗೆ ದೊಡ್ಡ ಉದ್ಯಮಗಳಿಗೂ ಪ್ಯಾಕೇಜಿಂಗ್ ಸೌಲಭ್ಯ ಒದಗಿಸಿ ಶಿಪ್ಪಿಂಗ್ ಉದ್ಯಮದಲ್ಲಿ ಸುಪೀರಿಯರ್ ಲಾಜಿಸ್ಟಿಕಲ್ ಸರ್ವಿಸಸ್ ಹೆಸರನ್ನು ಉಳಿಸಿಕೊಂಡಿದೆ.
ಬಾಲ್ಯದಲ್ಲಿ ಹಲವಾರು ಕಷ್ಟವನ್ನು ಅನುಭವಿಸಿ ಮುಂಬಯಿಗೆ ಬಂದು ತಾಯಿ ಹಾಗೂ ದೈವ-ದೇವರ ಅನುಗ್ರಹದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎನ್ನಲು ಸಂತೋಷವಾಗುತ್ತಿದೆ. ಸಂಸ್ಥೆಯ ಈ ಯಶಸ್ಸಿಗೆ ನಾನೋರ್ವ ಕಾರಣನಲ್ಲ. ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಪಾಲು ಇದರಲ್ಲಿ ಮಹತ್ತರವಾಗಿದೆ. ಕೇವಲ ಉದ್ಯಮದಲ್ಲಿ ಮಾತ್ರವಲ್ಲ, “ಭವಾನಿ ಫೌಂಡೇಷನ್’ ಮುಖಾಂತರ ತಾಯ್ನಾಡು ಮತ್ತು ಕರ್ಮಭೂಮಿ ಮರಾಠಿ ನೆಲದಲ್ಲೂ ಹಲವಾರು ಸಮಾಜಪರ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಗಳಿಕೆಯ ಅರ್ಧದಷ್ಟನ್ನು ಬಡ-ಬಗ್ಗರಿಗೆ ನೀಡಿದಾಗ ಜೀವನ ಪಾವನವಾಗುತ್ತದೆ ಎಂಬ ಮಾತನ್ನು ನಂಬಿದವನು ನಾನು. ಈ ದಾರಿಯಲ್ಲೇ ಧರ್ಮನಿಷ್ಠೆಗೆ ಅನುಗುಣವಾಗಿ ಸಾಗುತ್ತಿದ್ದೇನೆ. ಇದೆಲ್ಲಾ ದೈವ ಇಚ್ಛೆಯಾಗಿದೆ. ನನ್ನ ಸಮಾಜಪರ ಕಾರ್ಯಗಳಿಗೆ ಹಿತೈಷಿಗಳು ಹಾಗೂ ಸಂಸ್ಥೆಯ ಸಿಬಂದಿಯ ಪ್ರೋತ್ಸಾಹ, ಸಹಕಾರ ಪ್ರೇರಣೆಯಾಗಿದೆ .
ಕೆ. ಡಿ. ಶೆಟ್ಟಿ , ಕಾರ್ಯಾಧ್ಯಕ್ಷರು, ಭವಾನಿ ಗ್ರೂಪ್ ಆಫ್ ಕಂಪೆನೀಸ್
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು