Advertisement
ಗುತ್ತಿಗೆದಾರರ ಸುಮಾರು 1 ಸಾವಿರ ಕೋಟಿ ಬಾಕಿ ಕೊಡಬೇಕಿದೆ. ಮೂರು ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ 5,700 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಕಾಮಗಾರಿ ಸ್ಥಗಿತಗೊಳ್ಳದೆ ಪೂರ್ಣವಾಗಲು ಹಣ ಹೊಂದಿಸ ಲಾಗುವುದು ಎಂದರು. ಇಲಾಖೆಯ ವಲಯವಾರು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
Related Articles
Advertisement
ನೆರೆ ಪರಿಹಾರಕ್ಕೆ 500 ಕೋಟಿ: ನೆರೆ ಪರಿಹಾರ ಕಾಮಗಾರಿಗಳಿಗಾಗಿ 500 ಕೋಟಿ ರೂ. ವಿನಿಯೋಗಿ ಸುತ್ತಿದ್ದು, 1816 ಕಾಮಗಾರಿಗಳ ಗುರಿಯನ್ನು ಹೊಂದ ಲಾಗಿದೆ. ಅದರದಲ್ಲಿ 733 ಕಾಮಗಾರಿಗಳನ್ನು ಪೂರ್ಣ ಗೊಳಿ ಸಲಾಗಿದೆ. ನೆರೆಪರಿಹಾರ ಕಾಮಗಾರಿಗಳಡಿ 2ನೇ ಹಂತದಲ್ಲಿ 250 ಕೋಟಿ ರೂ. ಮೊತ್ತದಲ್ಲಿ ಗುಂಡಿ ಮುಚ್ಚುವುದರ ಜೊತೆಗೆ ರಸ್ತೆ ನಿರ್ವಹಣೆ, ರಸ್ತೆಗಳ ಇಕ್ಕೆಲೆಗಳಲ್ಲಿ ಚರಂಡಿಗಳ ನಿರ್ವಹಣೆಗೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಫೆಬ್ರವರಿಯಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.
ಕೆಶಿಪ್ ಯೋಜನೆಗಳು: ಕೆಶಿಪ್-3 ಹಾಗೂ ಎಡಿಬಿ-2ರಡಿ 5334 ಕೋಟಿ ರೂ.ವೆಚ್ಚದಲ್ಲಿ 418 ಕಿಮೀ ಉದ್ದದ 5 ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ. ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜನವರಿ 2020ರ ಅಂತ್ಯಕ್ಕೆ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಕರಾರಿನಂತೆ 2 ವರ್ಷಗಳ ಅವಧಿಯಲ್ಲಿ ಕಾಮಗಾರಿ ಗಳನ್ನು ಪೂರ್ಣಗೊಳಿಸಬೇಕಿದೆ ಎಂದರು.
ಬೆಂಗಳೂರು ರಸ್ತೆಗೆ 2095 ಕೋಟಿ ರೂ.: ಕೆಆರ್‌ಡಿಸಿಎಲ್ ವತಿಯಿಂದ ಬೆಂಗಳೂರು ಸುತ್ತಮುತ್ತ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು 155 ಕಿಮೀ ಉದ್ದದ 4 ರಸ್ತೆಗಳ ಅಭಿವೃದ್ಧಿಯನ್ನು 10 ಪ್ಯಾಕೇಜ್‌ಗಳಲ್ಲಿ 2095 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದ್ದು, ಇದರಲ್ಲಿ 545 ಕೋಟಿ ರೂ. ಮೊತ್ತವನ್ನು ಭೂಸ್ವಾಧೀನಕ್ಕಾಗಿ ಮೀಸಲಿಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಿಗಮದ ವತಿಯಿಂದ 217 ಸೇತುವೆಗಳ ನಿರ್ಮಾಣವನ್ನು 1395 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದರು. ಲೋಕೋಪಯೋಗಿ ಇಲಾಖೆಯ ಸಮಗ್ರ ವಿವರಗಳು ವೆಬ್‌ಸೈಟ್‌ಗೆ ತುಂಬಲಾಗುತ್ತಿದ್ದು, ಇಲಾಖೆ ಪ್ರಾರಂಭವಾದ ದಿನದಿಂದ ಈವರೆಗಿನ ಮಾಹಿತಿ ಜ. 15ರಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದರು.