Advertisement

ಹೈನುಗಾರಿಕೆಯಿಂದ ಆರ್ಥಿಕ ಅಭಿವೃದ್ಧಿ

06:09 PM Jan 18, 2021 | Team Udayavani |

ಬೀದರ: ಜನವಾಡಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಹೈನುಗಾರಿಕೆ ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮ ನಡೆಯಿತು. ತರಬೇತಿಯಲ್ಲಿ ಹೆಚ್ಚು ಹಾಲು ಕೊಡುವ ಸಾಮರ್ಥ್ಯವುಳ್ಳ ವಿವಿಧ ಆಕಳು ಮತ್ತು ಎಮ್ಮೆ ತಳಿಗಳು, ಗರ್ಭ ಧರಿಸಿದ ಹೈನು ರಾಸುಗಳ ಮತ್ತು ಕರುಗಳ ಪಾಲನೆ, ಜಾನುವಾರುಗಳ ಆರೋಗ್ಯ ನಿರ್ವಹಣೆಯಲ್ಲಿ ಸಮತೋಲನ ಪಶು ಆಹಾರದ ಮಹತ್ವ, ಜಾನುವಾರುಗಳಲ್ಲಿ ಬರುವ ರೋಗಗಳು ಹಾಗೂ ಹತೋಟಿ ಕ್ರಮಗಳು, ವೈಜ್ಞಾನಿಕ ಕೊಟ್ಟಿಗೆ ನಿರ್ಮಾಣ, ಸುಧಾರಿತ ಮೇವಿನ ಬೆಳಗಳ ಉತ್ಪಾದನೆ, ದನಗಳ ವಿಮೆ, ಶುದ್ಧ ಹಾಲು ಉತ್ಪಾದನೆ ಮಹತ್ವ, ಹಾಲಿನಲ್ಲಿರುವ ಘಟಕಗಳು ಮತ್ತು ಹಾಲಿನ ಮೌಲ್ಯವರ್ಧನೆ ಮತ್ತು ಹಾಲಿನಿಂದ ಬರುವ ವಿವಿಧ ಉತ್ಪನ್ನಗಳು ಮತ್ತು ಅವುಗಳ ಮಹತ್ವ ಮುಂತಾದ ವಿಷಯಗಳ ಕುರಿತು ತಜ್ಞ ವಿಜ್ಞಾನಿ ಹಾಗೂ ಅನುಭವಿ ರೈತರಿಂದ ತರಬೇತಿ ನೀಡಲಾಯಿತು. ಕೆಎಂಫ್‌ ಮತ್ತು ಮಾದರಿಡೈರಿ ಫಾರ್ಮ್ ಕ್ಷೇತ್ರ ಭೇಟಿ ನೀಡಿ ಮಾಹಿತಿ
ನೀಡಲಾಯಿತು.

Advertisement

ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್‌ ಡಾ| ಡಿ. ದಿಲೀಪಕುಮಾರ ಕಾರ್ಯಕ್ರಮ ಉದ್ಘಾಟಿಸಿ, ಕೃಷಿಯೊಂದಿಗೆ ರೈತರು ಹೈನುಗಾರಿಕೆ
ಅಳವಡಿಸಿಕೊಂಡಲ್ಲಿ ಆರ್ಥಿಕ ಬೆಳವಣಿಗೆ ಸಾಧ್ಯ. ಇಂಥ ತರಬೇತಿಗಳಿಂದ ರೈತರಿಗೆ ಅಗತ್ಯ ಮಹತ್ವದ ವಿಷಯ ತಿಳಿಸಲು ಸಾಧ್ಯವಾಗುತ್ತದೆ ಎಂದರು.

ಶಿಬಿರಾರ್ಥಿ ಜಗದೀಶ ಬುಟ್ಟೆ ಮಾತನಾಡಿ,ವೈಜ್ಞಾನಿಕವಾಗಿ ಹೈನುಗಾರಿಕೆ ಮಾಡಿದ್ದಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದರು. ಹಬೀಬ್‌ ಮಿಯ್ನಾ ಮಾತನಾಡಿ, ಎಂಬಿಎ ಪದವಿ ಪಡೆದಿರುವ ತಾವು ಲಾಕ್‌ಡೌನ್‌ನಿಂದ ಕೆಲಸ  ಕಳೆದುಕೊಂಡಿದ್ದೆ. ತರಬೇತಿಯಿಂದ ನನಗೂ ಹೈನುಗಾರಿಕೆ ಘಟಕ ಪ್ರಾರಂಭಿಸಲು ಆಸಕ್ತಿ ಬೆಳೆದಿದೆ ಎಂದರು. ಶರಣಬಸಪ್ಪಾ ಅನುಭವ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next