Advertisement

ಒಂದು ಕೋಟಿ ಡುಪ್ಲಿಕೇಟ್‌ ಎಂಟ್ರಿ ಡಿಲೀಟ್‌: ಸಮಗ್ರ ಡಿಜಿಟಲ್‌ ದತ್ತಾಂಶ ರೂಪಿಸಲು ಕ್ರಮ

07:08 PM Aug 08, 2022 | Team Udayavani |

ನವದೆಹಲಿ: ಮತದಾರರ ಪಟ್ಟಿಯಲ್ಲಿ ಎರಡೆರಡು ಕಡೆ ನೋಂದಣಿಯಾಗಿರುವ ಮತದಾರರ ಹೆಸರನ್ನು ಅಳಿಸುವ ಪ್ರಕ್ರಿಯೆಗೆ ಚುನಾವಣಾ ಆಯೋಗ ವೇಗ ನೀಡಿದ್ದು, ಕಳೆದ 7 ತಿಂಗಳಲ್ಲಿ ಸುಮಾರು ಒಂದು ಕೋಟಿ ಡುಪ್ಲಿಕೇಟ್‌ ಎಂಟ್ರಿಗಳನ್ನು ಡಿಲೀಟ್‌ ಮಾಡಿದೆ.

Advertisement

ಒಬ್ಬರದೇ ಹೆಸರು ಅಥವಾ ಫೋಟೋ ಬೇರೆ ಬೇರೆ ಕಡೆ ಎಂಟ್ರಿಯಾಗಿದ್ದರೆ, ಅಂತಹ ಹೆಚ್ಚುವರಿ ನೋಂದಣಿಗಳನ್ನು ತೆಗೆದುಹಾಕಲಾಗಿದೆ. ಮತದಾರರ ಸಮಗ್ರ ಡಿಜಿಟಲ್‌ ದತ್ತಾಂಶವನ್ನು ಆಯೋಗವು ರೂಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಡುಪ್ಲಿಕೇಟ್‌ ಎಂಟ್ರಿಗಳನ್ನು ಅಳಿಸುವತ್ತ ಹೆಚ್ಚಿನ ಗಮನ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಜನಸಂಖ್ಯಾಧಾರಿತವಾಗಿ 11,91,191 ಡುಪ್ಲಿಕೇಟ್‌ ಎಂಟ್ರಿಗಳನ್ನು ಆಯೋಗವು ಪತ್ತೆಹಚ್ಚಿದ್ದು, ಈ ಪೈಕಿ 9,27,853 ಅನ್ನು ಡಿಲೀಟ್‌ ಮಾಡಲಾಗಿದೆ. ಒಂದೇ ರೀತಿಯ ಫೋಟೋಗಳನ್ನು ಹೊಂದಿರುವ 3.19 ಕೋಟಿ ನೋಂದಣಿಗಳು ಪತ್ತೆಯಾಗಿದ್ದು, ಆ ಪೈಕಿ 98 ಲಕ್ಷ ಎಂಟ್ರಿಗಳನ್ನು ಅಳಿಸಿಹಾಕಲಾಗಿದೆ.

ಇದನ್ನೂ ಓದಿ:ನೀರಿನ ಬಾಟಲ್‌ ಖರೀದಿ ವಿಚಾರಕ್ಕೆ ಜಗಳವಾಡಿದ್ದಕ್ಕೆ ರೈಲಿಂದಲೇ ಹೊರಕ್ಕೆಸೆದರು

ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ಈ ಪ್ರಕ್ರಿಯೆಯನ್ನು ನಡೆಸಿದ್ದಾರೆ. ಬೂತ್‌ ಮಟ್ಟದಲ್ಲೇ ಈ ಕುರಿತ ಪರಿಶೀಲನೆಗಳನ್ನು ನಡೆಸಿ, ಹೆಚ್ಚುವರಿ ನೋಂದಣಿಗಳನ್ನು ಅಳಿಸಿ ಹಾಕಲಾಗಿದೆಯೇ ವಿನಾ ನೇರವಾಗಿ ಮುಖ್ಯ ಚುನಾವಣಾ ಆಯೋಗ ಯಾವುದೇ ಎಂಟ್ರಿಗಳನ್ನು ಡಿಲೀಟ್‌ ಮಾಡಿಲ್ಲ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next