Advertisement

ದ ಹಂಡ್ರೆಡ್‌ ಕ್ರಿಕೆಟ್‌: ಇಸಿಬಿ ಸ್ಪಷ್ಟನೆ

06:00 AM Jul 26, 2018 | Team Udayavani |

ಲಂಡನ್‌: ತೀವ್ರ ಕುತೂಹಲ ಹುಟ್ಟಿಸಿರುವ 100 ಎಸೆತಗಳ ವಿನೂತನ ಮಾದರಿಯ ಕ್ರಿಕೆಟ್‌ (ದ ಹಂಡ್ರೆಡ್‌) ಪಂದ್ಯದ ಬಗ್ಗೆ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಮೊದಲ ಸಲ ಪ್ರಕಟನೆ ನೀಡಿದೆ. ಈ ಕುರಿತು ಇನ್ನೂ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ, ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಬರೀ ಊಹಾಪೋಹ ಮಾತ್ರ ಎಂದಿದೆ. 

Advertisement

ಇದೇ ಸೆಪ್ಟಂಬರ್‌ನಲ್ಲಿ ನೂತನ ಮಾದರಿಯ ಕ್ರಿಕೆಟ್‌ ಪಂದ್ಯಗಳನ್ನು ಪ್ರಾಯೋಗಿಕವಾಗಿ ಆಡಿಸಿ, ಇದರ ಫ‌ಲಿತಾಂಶವನ್ನು ಪರಿಶೀಲಿಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳ ಲಾಗುವುದು ಎಂದು ಇಸಿಬಿ ಸ್ಪಷ್ಟಪಡಿಸಿದೆ. ಇದು ಜಾರಿಗೆ ಬರುವುದೇನಿದ್ದರೂ 2020ರಲ್ಲಿ ಎಂಬುದಾಗಿಯೂ ತಿಳಿಸಿದೆ.

ಮಂಗಳವಾರ “ದ ಹಂಡ್ರೆಡ್‌’ ಕ್ರಿಕೆಟ್‌ ಕುರಿತು ವರದಿ ಮಾಡಿದ ಬ್ರಿಟನ್ನಿನ “ಡೈಲಿ ಟೆಲಿಗ್ರಾಫ್’ ಪತ್ರಿಕೆ, ಇಸಿಬಿ ಬದಲಿ ಆಟಗಾರನನ್ನು ಆಡಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಉಲ್ಲೇಖೀಸಿತ್ತು. “ದಿ ಟೈಮ್ಸ್‌’ ಕೂಡ ವರದಿ ಮಾಡಿ, ಇದು ತಲಾ 15 ಸದಸ್ಯರ ತಂಡವಾಗಿದ್ದು, 4 ಬದಲಿ ಕ್ರಿಕೆಟಿಗರ ಪ್ರಯೋಗಕ್ಕೆ ಮುಂದಾ ಗಲಿದೆ ಎಂದಿತ್ತು. ಆದರೆ ಈ ಎಲ್ಲ ವರದಿಗಳನ್ನು ಇಸಿಬಿ ಆಧಾರ ರಹಿತ ಎಂದು ತಳ್ಳಿಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next