Advertisement

EC; ಕಿವುಡ, ಕುಂಟ, ಹುಚ್ಚ ಪದಗಳನ್ನು ಬಳಸುವಂತಿಲ್ಲ: ರಾಜಕಾರಣಿಗಳು, ಅಭ್ಯರ್ಥಿಗಳಿಗೆ ಸೂಚನೆ

12:50 AM Dec 22, 2023 | Team Udayavani |

ಹೊಸದಿಲ್ಲಿ: ರಾಜಕಾರಣಿಗಳು, ಅಭ್ಯರ್ಥಿಗಳು ಅಂಗವಿಕಲರಿಗೆ (ಶಾರೀರಿಕ ನ್ಯೂನತೆ ಉಳ್ಳವರು) ಅವಮಾನ ಉಂಟಾಗುವಂತಹ ಪದ/ವಾಕ್ಯಗಳನ್ನು ಸಾರ್ವಜನಿಕ ಭಾಷಣಗಳಲ್ಲಿ ಬಳಸಬಾರದು. ಹಾಗೊಂದು ವೇಳೆ ಬಳಸಿದರೆ ಅದನ್ನು ಅಂಗವಿಕಲರಿಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗುವುದು ಎಂದು ಚುನಾವಣ ಆಯೋಗ ಎಚ್ಚರಿಕೆ ನೀಡಿದೆ.

Advertisement

ದೇಶದ ಎಲ್ಲ ರಾಜಕೀಯ ಪಕ್ಷಗಳು, ರಾಜಕಾರಣಿಗಳಿಗೆ ಈ ಮೂಲಕ ಸಭ್ಯ ಭಾಷೆಯನ್ನು ಬಳಸಬೇಕೆಂದು ಎಚ್ಚರಿಕೆ ನೀಡಿದೆ. ಒಂದು ವೇಳೆ ಬಳಸಿದರೆ “ಅಂಗವೈಕಲ್ಯಗಳನ್ನುಳ್ಳ ವ್ಯಕ್ತಿಗಳ ಹಕ್ಕು ಕಾಯ್ದೆಯ 92ರ ವಿಧಿಯನ್ವಯ’ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ತಿಳಿಸಿದೆ.

ರಾಜಕೀಯ ಪಕ್ಷಗಳು ಅಂಗವಿಕಲರನ್ನು ಪಕ್ಷದ ಸದಸ್ಯರು, ಕಾರ್ಯಕರ್ತರನ್ನಾಗಿ ತೆಗೆದುಕೊಳ್ಳಬೇಕು. ಆ ಮೂಲಕ ಅವರ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೆಗೆದು ಹಾಕಬೇಕು, ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ಎಲ್ಲ ಪ್ರಚಾರ ಸಾಮಗ್ರಿಗಳನ್ನು (ಭಾಷ ಣಗಳು, ಸಾಮಾಜಿಕ ತಾಣಗಳಲ್ಲಿನ ಪೋಸ್ಟ್‌ ಗಳು, ಜಾಹೀರಾತು, ಮಾಧ್ಯಮ ಪ್ರಕ‌ಟನೆ ಗಳು) ಮೊದಲು ಆಂತರಿಕ ಪರಿಶೀಲನೆಗೊಳಪಡಿಸಬೇಕು ಎಂದು ಆಯೋಗ ಹೇಳಿದೆ.

ಯಾವ್ಯಾವ ಪದಗಳಿಗೆ ನಿರ್ಬಂಧ?: ಎಲ್ಲ ಕಡೆ ಸಾಮಾನ್ಯವಾಗಿ ಬಳಸುವಂತಹ ಮೂಗ, ಹುಚ್ಚ, ಕುರುಡ, ಕಿವುಡ, ಕುಂಟ… ಈ ರೀತಿಯ ಪದಗಳನ್ನು ಬಳಸ ಬಾರದೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next