Advertisement

ಇರಾನ್‌ ಅಧ್ಯಕ್ಷೀಯ ಚುನಾವಣೆಗೆ ಧುಮುಕಿದ ಇಬ್ರಾಹಿಂ ರೈಸಿ

09:48 PM May 15, 2021 | Team Udayavani |

ದುಬೈ: 1988ರಲ್ಲಿ ಇರಾನ್‌ ಸಾವಿರಾರು ಕೈದಿಗಳನ್ನು ಸಾಮೂಹಿಕ ಹತ್ಯೆಗೈದಿದ್ದ ಆರೋಪ ಹೊತ್ತಿರುವ, ಇರಾನ್‌ನ ಬಲಿಷ್ಠ ನಾಯಕ ಎಂದೇ ಗುರುತಿಸಲ್ಪಟ್ಟಿರುವ ಇಬ್ರಾಹಿಂ ರೈಸಿ (60) ಸದ್ಯದಲ್ಲೇ ಆ ದೇಶದ ಅಧ್ಯಕ್ಷರ ಚುನಾವಣೆಗಾಗಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

Advertisement

ಹಾಲಿ ಅಧ್ಯಕ್ಷ ಅಯಾತೊಲ್ಲಾ ಅಲಿ ಖಮಿನೆನಿ (82) ಅವರಿಗೆ ಮುಪ್ಪು ಆವರಿಸಿದ್ದು ಅವರ ಉತ್ತರಾಧಿಕಾರಿಯಾಗಿ ಇಬ್ರಾಹಿಂ ಅವರೇ ಆಯ್ಕೆಯಾಗಲಿದ್ದಾರೆಂಬ ಅನಿಸಿಕೆ ಇರಾನ್‌ನ ರಾಜಕೀಯ ವಲಯದಲ್ಲಿದೆ. ಆದರೂ, ಅವರು ಜನಾಭಿಪ್ರಾಯಕ್ಕೆ ಮುಂದಾಗಿದ್ದಾರೆ.

ಖಮಿನೆನಿ ಅವರಿಗೆ ಆಪ್ತರಾಗಿರುವುದು ಹಾಗೂ ಇರಾನ್‌ನ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯಲ್ಲಿ ಅವರು ಯಶಸ್ವಿಯಾಗಿರುವ ಅಂಶಗಳು ಅವರಿಗೆ ಚುನಾವಣೆ ಗೆಲ್ಲುವಲ್ಲಿ ನೆರವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

ಇದನ್ನೂ ಓದಿ :ಕಾಳಸಂತೆಯಲ್ಲಿ ರೆಮ್‌ ಡೆಸಿವಿಯರ್‌ ಮಾರಾಟ-ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next