Advertisement
ಸಹಾಯಕಾರಿ ಸಂದೇಶ: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಡೆಂ à ಜ್ವರದ ಪ್ರಮಾಣ ಅಧಿಕವಾಗುತ್ತಿದೆ. ಬೆಂಗಳೂರು, ಮೈಸೂರು, ಚಾಮರಾಜನಗರ ಮೊದಲಾದ ಜಿಲ್ಲೆಗಳಲ್ಲಿ ಡೆಂ à ಜ್ವರದಿಂದ ಸಾವು ಕೂಡ ಸಂಭವಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಡೆಂ àಗೆ ಅಲೋಪಥಿ ಔಷಧಕ್ಕಿಂತ ಆಯುರ್ವೇದ ಔಷಧವೇ ಉತ್ತಮ ಮತ್ತು ಜನರು ಸುಲಭವಾಗಿ ಇದನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ನಿತ್ಯವೂ ಹೊಸ ಸಂಶೋಧನೆಗೆ ಮುಂದಾಗುತ್ತಿದೆ.
ಈಗಲೂ ಅದನ್ನೇ ಅನುಸರಿಸುವುದು ತಪ್ಪಲ್ಲ. ಈರುಳ್ಳಿ ಬೆಲ್ಲದ ಕಾಂಬಿನೇಷನ್: ಬೆಲ್ಲವನ್ನು ಹಸಿಯಾದ ಸಣ್ಣ ಈರುಳ್ಳಿಯೊಂದಿಗೆ ಸೇವಿಸುವು ದರಿಂದ ಡೆಂ à ಜ್ವರ ನಿಯಂತ್ರಣ ಮಾಡಬಹುದು. ಆಯುರ್ವೇದ ಸೇರಿದಂತೆ ಎಲ್ಲಾ ರೀತಿಯ ಪರೀಕ್ಷೆಗೆ ಒಳಪಡಿಸಿದ ನಂತರ ಬಂದಿರುವ ಫಲಿತಾಂಶದ ಆಧಾರದಲ್ಲಿ ಆರೋಗ್ಯ ಇಲಾಖೆ ಈ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 1400ಕ್ಕೂ ಅಧಿಕ ಆಯುಷ್ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿತ್ಯವೂ ಈ ಸಂಬಂಧ ಹೊಸ ಸಂಶೋಧನೆ ನಡೆಯುತ್ತಲೇ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Related Articles
ಆಯುಷ್ ಇಲಾಖೆಯು ಡೆಂ à ಜ್ವರದ ಬಗ್ಗೆ ಹೊರಡಿಸಿರುವ ಮಾಹಿತಿ ಪತ್ರದಲ್ಲಿ, ಡೆಂ à ಜ್ವರಕ್ಕೆ ಮನೆಯ ಸುತ್ತಮುತ್ತಲು
ಬೆಳೆಯುವ ಗಿಡಮೂಲೀಕೆಗಳಿಂದಲೇ ಚಿಕಿತ್ಸೆ ಮಾಡಿಕೊಳ್ಳಬಹುದು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖೀಸಿದ್ದಾರೆ. ಬೇವಿನ ಚಕ್ಕೆ, ಹೂವರಿಸಿಯ ಚಕ್ಕೆ, ಅರಿಶಿನ, ಬಿಳಿಸಾಸಿವೆ, ಹೊಂಗೆಚಕ್ಕೆ, ಬೆಳ್ಳುಳ್ಳಿ ಸಿಪ್ಪೆ ಇವುಗಳನ್ನು ಒಣಗಿಸಿ ಪುಡಿಮಾಡಿ, ಕರ್ಪೂರ ಹಾಗೂ ನೀಲಗಿರಿ ಎಣ್ಣೆಯಲ್ಲಿ ಸೇರಿಸಿ ಸೊಳ್ಳೆ ಓಡಿಸಲು ಧೂಪ ಹಾಕಬಹುದು. ಹಾಗೆಯೇ
ಪರಂಗಿ ಎಲೆಯ ಕಷಾಯ, ಅಮೃತ ಬಳ್ಳಿಯ ಕಾಂಡ, ಸೊಗದೆ ಬೇರು, ಕೊನ್ನಾರಿ ಗಡ್ಡೆ, ಲಾವಂಚ ಮತ್ತು ಒಣ ಶುಂಠಿ ಸೇರಿಸಿ ಕಷಾಯ ಮಾಡಿ ಕುಡಿಯುವ ಬಗ್ಗೆಯೂ ತಿಳಿಸಿದ್ದಾರೆ.
Advertisement