ಮಂಡ್ಯ: ಹೆಣ್ಣು ಮಕ್ಕಳು ಹಾಗೂ ಗ್ರಾಮೀಣ ಮಹಿಳೆಯರು ಪೌಷ್ಟಿಕಾಂಶಗಳಿಂದ ಕೂಡಿರುವಸೊಪ್ಪು, ತರಕಾರಿ, ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ಎಂ.ಕೆ. ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ತಗ್ಗಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆವತಿಯಿಂದ ಪೋಷಣಾ ಅಭಿಯಾನ ಕುರಿತು ಬೀದಿ ನಾಟಕ ಪ್ರದರ್ಶನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಭಾಗ್ಯ ಮುಖ್ಯ: ಹೆಣ್ಣು ಮಕ್ಕಳು ಮತ್ತುಮಹಿಳೆಯರು ದೇಶದ ಶಕ್ತಿಯಾಗಿದ್ದಾರೆ.ಪುರುಷರಿಗೆ ಸರಿಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂಕೆಲಸವನ್ನು ಮಾಡುತ್ತಿದ್ದಾರೆ. ಮಹಿಳೆಯರು ತಮ್ಮಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ವಹಿಸಬೇಕು. ಸೊಪ್ಪು, ತರಕಾರಿಗಳು, ಹಣ್ಣು ಹಂಪಲು, ಹಾಲು,ಮೊಟ್ಟೆ, ಮೀನು, ಮಾಂಸ ಸೇರಿದಂತೆ ಮೊಳಕೆಕಾಲುಗಳನ್ನು ಹೆಚ್ಚಾಗಿ ಸೇವಿಸಿ ಪೌಷ್ಟಿಕಾಂಶಗಳನ್ನು ಹೆಚ್ಚಿಸಿಕೊಂಡು ರೋಗರುಜಿನ ಬರುವುದನ್ನುತಡೆದು ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಬೇಕು. ಆರೋಗ್ಯ ಭಾಗ್ಯಕ್ಕಿಂತಮಿಗಿಲಾದ ಭಾಗ್ಯವು ವಿಶ್ವದಲ್ಲೇ ಯಾವುದು ಇಲ್ಲ ಎಂದು ತಿಳಿಸಿದರು.
ಸಮಾನತೆ ನೀಡಬೇಕು: ತಗ್ಗಹಳ್ಳಿ ಗ್ರಾಪಂ ಅಧ್ಯಕ್ಷ ರವಿ ಮಾತನಾಡಿ, ಇಂದು ಸಮಾಜದಲ್ಲಿ ಲಿಂಗಅಸಮಾನತೆಯು ಎದ್ದು ಕಾಣುತ್ತಿದೆ. ಹೆಣ್ಣು ಭ್ರೂಣಹತ್ಯೆ ಮಾಡುವ ಪಾಪದ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪೋಷಕರು ಹೆಣ್ಣು ಮಗು ಹುಟ್ಟಿತೆಂದು ಚಿಂತಿಸದೇ ಗಂಡು ಮಕ್ಕಳಿಗೆ ನೀಡುವಂತೆಶಿಕ್ಷಣದ ಜ್ಞಾನವನ್ನು ಹೆಣ್ಣು ಮಕ್ಕಳಿಗೂ ನೀಡುವಮೂಲಕ ಸಮಾನತೆ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಹನಿಯಂಬಾಡಿ ಎನ್. ಶೇಖರ್ ನೇತೃತ್ವದ ಸೌಹಾರ್ದ ಸಾಂಸ್ಕೃತಿಕ ಕಲಾಸಂಘದಿಂದ ಬಾಲ್ಯ ವಿವಾಹ, ಗಂಡು ಮತ್ತು ಹೆಣ್ಣಿನ ತಾರತಮ್ಯ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಹಾಡುಗಳು ಮತ್ತು ನಾಟಕಗಳ ಮೂಲಕ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಿದರು.
ಎಸಿಡಿಪಿಒ ಕೆ.ಎನ್.ಅಂಬಿಕಾ, ಮೇಲ್ವಿಚಾರಕಿಶಕುಂತಲಾ ಎಸ್.ಬಡಿಗೇರಿ, ಆರೋಗ್ಯ ಸಹಾಯಕಈಶ್ವರಪ್ಪ, ಸಬ್ಬನಹಳ್ಳಿ ಕುಮಾರ್, ಕಲಾವಿದರಾದಸೌಹಾರ್ದ ತಂಡದ ನಾಯಕರಾದ ಹನಿಯಂಬಾಡಿಎನ್.ಶೇಖರ್, ವೈರಮುಡಿ, ಮುತ್ತುರಾಜ್,ಶ್ರೀನಿವಾಸ್, ಗೀತಾನಾಗರಾಜ್, ಶಿವರಾಜ್, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು,ಸ್ತ್ರೀಶಕ್ತಿ ಸಂಘದ ಸದಸ್ಯರು ಇದ್ದರು.