Advertisement
ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನಾವು ಮತ್ತು ನಮ್ಮ ಆಹಾರ ಪದ್ಧತಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಅಡುಗೆ ಮನೆಗಳು ಔಷಧಾಲಯ ಗಳಿದ್ದಂತೆ ರುಚಿಗಿಂತ ಆರೋಗ್ಯಪೂರ್ಣ ಆಹಾರ ಸಿದ್ಧಪಡಿಸುವುದೇ ಪಾಕಶಾಲೆಯ ಮುಖ್ಯ ಉದ್ದೇಶ ಎಂದರು. ಜನರು ತಮ್ಮ ನಾಲಿಗೆಯ ರುಚಿಗೆ ದಾಸರಾಗಿದ್ದಾರೆ. ಅದು ಬಯಸಿದಂತೆ ಆಹಾರ ಸೇವಿಸುವುದರಿಂದಲೇ ಇಂದು ಅನೇಕ ರೋಗಗಳು ಬರುತ್ತವೆ ಎಂದು ತಿಳಿಸಿದರು.
Related Articles
Advertisement
ಶವದಂತೆ ನಿದ್ರಿಸಬೇಕು: ಬೆಳಿಗ್ಗೆಯಿಂದ ಎಷ್ಟೇ ಗೊಂದಲಗಳು ಇದ್ದರೂ ಸಹ ಅವುಗಳನ್ನು ದೂರಮಾಡಿ ನೆಮ್ಮದಿಯಿಂದ ನಿದ್ರಿಸಬೇಕು, ನಿದ್ರೆ ಮಾಡುವಾಗ ನಿಮ್ಮ ಮೊಬೆ„ಲ್ ಫೋನ್‌ಗಳನ್ನು ದೂರವಿಡಿ, ಹತ್ತಿರವಿಟ್ಟುಕೊಳ್ಳಬಾರದು, ಗಾಢವಾದ ನಿದ್ರೆಮಾಡುವುದರಿಂದ ಆರೋಗ್ಯ ವೃದ್ಧಯಾಗುತ್ತದೆ. ನೆಮ್ಮದಿಯಿಂದ ದಿನಚರಿಯನ್ನು ಪ್ರಾರಂಭಮಾಡಬಹುದು ನಿದ್ರೆ ಕಡಿಮೆಯಾದರೆ ಅನೇಕ ರೋಗಗಳು ಬರುತ್ತವೆ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಕೆ.ಎನ್.ಅರುಣ್, ವಾಸವಿ ಕ್ಲಬ್ ಉಪಾಧ್ಯಾಕ್ಷ ರಾಜೇಂದ್ರಗುಪ್ತ, ಕಾರ್ಯದರ್ಶಿ ಅವಿನಾಶ್, ಮುಖಂಡರಾದ ಗೋಕುಲ್, ಕೃಷ್ಣಮೂರ್ತಿ, ದಿನೇಶ್ ಆರ್ಯ ವೈಶ್ಯ ಮಂಡಳಿ ಹಾಗೂ ವಾಸವಿ ಕ್ಲಬ್ ಸದಸ್ಯರು ಭಾಗವಹಿಸಿದ್ದರು.
ಹೊಟ್ಟೆ ಕಸದ ಬುಟ್ಟಿಯಲ್ಲ: ಮನೆಯಲ್ಲಿ ಸಾಮಾನ್ಯವಾಗಿ ಯಾವುದೇ ಆಹಾರ ಪದಾರ್ಥಗಳು ಉಳಿದರೆ ಬಲವಂತದಿಂದ ಬಡಿಸುತ್ತಾರೆ. ಉಳಿದಿರುವ ಅಹಾರ ಪದಾರ್ಥಗಳನ್ನು ತಾಯಂದಿರುವ ಬಿಸಾಡಬೇಕಾಗುತ್ತದೆ ಎಂದು ತಾವು ತಿಂದು ಮುಗಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ. ಹೊಟ್ಟೆಯನ್ನು ನಾವು ಡೆಸ್ಟ್ ಬಿನ್ ತರಹ ತಿಳಿದುಕೊಂಡಿದ್ದೇವೆ. ಅದರಿಂದಲೇ ಅನೇಕ ರೋಗಗಳು ಬರುತ್ತವೆ. ಯಾವಾಗಲೂ ನಾವು ಹೊಟ್ಟೆ ತುಂಬಾ ತಿನ್ನಬಾರದು. ಹೊಟ್ಟೆಯಲ್ಲಿ ಒಂದು ಭಾಗ ಆಹಾರ, ಒಂದು ಭಾಗ ನೀರು ಮತ್ತೂಂದು ಭಾಗ ಗಾಳಿಯ ಉಸಿರಾಟಕ್ಕೆ ಖಾಲಿ ಇರುವಂತೆ ಊಟ ತಿಂಡಿಯನ್ನು ಮಾಡುವ ಪರಿಪಾಠ ರೂಢಿಸಿಕೊಳ್ಳಬೇಕೆಂದು ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಚೌಡಯ್ಯಕಟ್ನವಾಡಿ ಹೇಳಿದರು.
ನಾರು, ನೀರು ದೇಶಕ್ಕೆ ಅತ್ಯಗತ್ಯ: ದೇಶದ ಕರುಳನ್ನು ಶುದ್ಧೀಕರಿಸಲು ನಾರು ಮತ್ತು ನೀರು ಅತೀ ಅವಶ್ಯಕ. ನಾವು ಬೆಳಗ್ಗೆ ಎದ್ದು ನಮ್ಮ ಮನೆಯ ಬಾಗಿಲಿಗೆ ನೀರು ಹಾಕುವಂತೆಯೇ ನಮ್ಮ ದೇಹಕ್ಕೂ ನೀರು ಕುಡಿಸಬೇಕು. ಬೆಳಗಿನ ಹೊತ್ತು ಕಡಿಯುವ ನೀರು ಅಮೃತಕ್ಕೆ ಸಮಾನ, ಅದರ ಜೊತೆಗೆ ನಾರಿನ ಅಂಶ ಅದಿಕವಾಗಿರುವ ಹಸಿತರಕಾರಿ ಹಣ್ಣು ಸೊಪ್ಪುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು ಅದು ಜೀರ್ಣಾಂಗವನ್ನು ಶುದ್ಧಿಗೊಳಿಸುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ ಎಂದು ತಿಳಿಸಿದರು.