Advertisement

ಇಮೋಜಿ ಹುಡುಕೋದಿನ್ನು ಸುಲಭ

03:45 AM Jul 01, 2017 | Team Udayavani |

ವಾಷಿಂಗ್ಟನ್‌: ಇನ್ನು ಮುಂದೆ ನೀವು ಗೆಳೆಯರೊಂದಿಗೆ ಚಾಟ್‌ ಮಾಡುವಾಗ ಇಮೋಜಿಗಾಗಿ ಸ್ಕ್ರೋಲ್‌ ಮಾಡುತ್ತಾ ಹುಡುಕಬೇಕಾ ಗಿಲ್ಲ. ಯಾವ ಇಮೋಜಿ ಬೇಕೆಂದು ಟೈಪ್‌ ಮಾಡಿದೊಡನೆ ಅದು ಪ್ರತ್ಯಕ್ಷವಾಗುತ್ತದೆ.

Advertisement

ಹೌದು, ಸಂಭಾಷಣೆ ಸುಲಭವಾಗಿ ಹಾಗೂ ವೇಗವಾಗಿ ಆಗುವಂತೆ ಮಾಡಲು ವಾಟ್ಸ್‌ಆ್ಯಪ್‌ ಸಂಸ್ಥೆಯು ಇದೀಗ ತನ್ನ ಹೊಸ ಆ್ಯಂಡ್ರಾಯ್ಡಗಳಲ್ಲಿ ಇಮೋಜಿಗಳನ್ನು ಸರ್ಚ್‌ ಮಾಡುವ ಆಯ್ಕೆಯನ್ನು ಪರಿಚಯಿಸಿದೆ. ಈಗ ಇದು ಆ್ಯಂಡ್ರಾಯ್ಡ ಬಳಕೆದಾರರಿಗೆ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಸದ್ಯದಲ್ಲೇ ಇದು ಸ್ಟೇಬಲ್‌ ವರ್ಷನ್‌ನಲ್ಲೂ ಸಿಗಲಿದೆ.

ಏನಿದು ಹೊಸ ಆಯ್ಕೆ?: ಈಗ ನೀವು ವಾಟ್ಸ್‌ ಆ್ಯಪ್‌ನಲ್ಲಿ ಇಮೋಜಿಯನ್ನು ಕಳುಹಿಸಬೇಕೆಂದಿದ್ದರೆ, ಇಮೋಜಿ ಗುಂಡಿಯನ್ನು ಒತ್ತಿ, ಸ್ಕ್ರೋಲ್‌ ಮಾಡುತ್ತಾ ನಿಮಗೆ ಬೇಕಾದ ಇಮೋಜಿಯನ್ನು ಹುಡುಕಬೇಕಾಗಿತ್ತು. ಆದರೆ, ಇನ್ನು ಈ ಕಷ್ಟದ ಕೆಲಸಕ್ಕೆ ಮುಕ್ತಿ ಸಿಗಲಿದೆ. ಹೇಗೆಂದರೆ, ನೀವು ಸರ್ಚ್‌ ಐಕಾನ್‌ನಲ್ಲಿ ನಿಮಗೆ ಬೇಕಿರುವ ಇಮೋ ಜಿಯ ಕೀವರ್ಡ್‌ ಅನ್ನು ಬರೆದ ಕೂಡಲೇ, ಅದಕ್ಕೆ ಸಂಬಂಧಿಸಿದ ಇಮೋಜಿಗಳಷ್ಟೇ ಸ್ಕ್ರೀನ್‌ನಲ್ಲಿ ಕಾಣುತ್ತವೆ. ಉದಾಹರಣೆಗೆ- ಹ್ಯಾಂಡ್‌ ಎಂದು ಟೈಪ್‌ ಮಾಡಿದೊಡನೆ, ಕೈಗಳಿರುವ ಎಲ್ಲ ಇಮೋಜಿಗಳೂ ಕಾಣುತ್ತವೆ. ಅದರಲ್ಲಿ ನಿಮಗೆ ಬೇಕಿದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಸದ್ಯದಲ್ಲೇ ಈ ಆಪ್ಶನ್‌ ನಿಮ್ಮ ಆ್ಯಂಡ್ರಾಯ್ಡ ಗಳಲ್ಲಿ ಸಿಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next