ನವದೆಹಲಿ:ಇತ್ತೀಚೆಗೆ ಜಮ್ಮು ವಾಯುಪಡೆ ನೆಲೆ ಮೇಲೆ ಡ್ರೋನ್ ದಾಳಿ ನಡೆದ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರಾವಣೆ, ಡ್ರೋನ್ ಗಳ ಸುಲಭ ಲಭ್ಯತೆಯ ಕಾರಣಗಳಿಂದ ಭದ್ರತೆಗೆ ಸವಾಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಶಾಲೆಗಳಲ್ಲಿ ರಂಗ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಸುರೇಶ್ ಕುಮಾರ್ ಗೆ ಮನವಿ
ನಮ್ಮ ಸೇನೆಯು ಕೂಡಾ ಡ್ರೋನ್ ಗಳ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಬಳಕೆಯಲ್ಲಿ ಸಮರ್ಥವಾಗಿ ನಿಭಾಯಿಸುವ ನೈಪುಣ್ಯತೆ ಹೊಂದಿದೆ ಎಂದು ಹೇಳಿರುವ ನರಾವಣೆ, ಚಲನೆ ಮತ್ತು ಚಲನಾರಹಿತ ಎರಡೂ ವಿಧಾನಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಹೇಳಿದರು.
ಯಾವುದೇ ದೇಶಗಳ ಪ್ರಾಯೋಜಿತ ದಾಳಿಗಳನ್ನು ಎದುರಿಸುವ ಸಾಮರ್ಥ್ಯವನ್ನು ನಾವು ಹೆಚ್ಚಿಸಿಕೊಳ್ಳುತ್ತಿದ್ದೇವೆ. ಅಲ್ಲದೇ ಈಗಾಗಲೇ ಡ್ರೋನ್ ದಾಳಿಯನ್ನು ಎದುರಿಸಲು ವಿವಿಧ ರೀತಿಯ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ನರಾವಣೆ ವಿವರಿಸಿದರು.
ಇತ್ತೀಚೆಗಷ್ಟೇ ಜಮ್ಮುವಿನ ವಾಯುಪಡೆ ನೆಲೆ ಮೇಲೆ ಪಾಕಿಸ್ತಾನ ಮೂಲದ ಉಗ್ರರು ಡ್ರೋನ್ ಬಳಸಿ ಎರಡು ಬಾಂಬ್ ದಾಳಿ ನಡೆಸಿದ್ದ ಘಟನೆ ನಡೆದಿತ್ತು. ಆ ನಂತರವೂ ಸತತ ಎರಡು ದಿನಗಳ ಕಾಲ ಡ್ರೋನ್ ಪ್ರತ್ಯಕ್ಷವಾಗಿದ್ದು, ಸೇನೆ ಗುಂಡಿನ ದಾಳಿ ನಡೆಸಿದ ನಂತರ ಅವು ಕಣ್ಮರೆಯಾಗಿದ್ದವು.