Advertisement

ಸೌಂದರ್ಯಕ್ಕೆ ಭಂಗು ಬಂದಾಗ…

06:27 PM Nov 26, 2019 | mahesh |

ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳು ಮುಖದ ಮೇಲೆ ನೇರವಾಗಿ, ಸತತವಾಗಿ ಬಿದ್ದಾಗ ಕಪ್ಪು ಮತ್ತು ಕಂದು ಕಲೆಗಳು ಉಂಟಾಗುತ್ತವೆ. ಅದನ್ನು ಭಂಗು (ಪಿಗ್ಮಂಟೇಶನ್‌) ಎನ್ನುತ್ತೇವೆ. ಅಷ್ಟೇ ಅಲ್ಲದೆ, ಯಾವುದಾದರೂ ಔಷಧದ ಅಡ್ಡ ಪರಿಣಾಮದಿಂದ ಅಥವಾ ಹಾರ್ಮೋನಿನ ಏರುಪೇರಿನಿಂದಲೂ ಮುಖದ ಮೇಲೆ ಭಂಗು ಕಾಣಿಸಿಕೊಳ್ಳಬಹುದು. ಚರ್ಮದ ಈ ಸಮಸ್ಯೆಗೆ ಮನೆಮದ್ದಿನಲ್ಲಿ ಪರಿಹಾರ ಅಡಗಿದೆ.

Advertisement

-ಆಲೂಗಡ್ಡೆಯನ್ನು ತುರಿದು ಅದರ ರಸಕ್ಕೆ ಸಕ್ಕರೆ ಸೇರಿಸಿ ಕಲೆಯ ಮೇಲೆ ಹಚ್ಚಿ, ವೃತ್ತಾಕಾರದಲ್ಲಿ ಮಸಾಜ್‌ ಮಾಡಿ ಅಥವಾ ಆಲೂಗಡ್ಡೆಯ ತುಣುಕನ್ನು ನೇರವಾಗಿ ಉಜ್ಜಿ. -ಎರಡು ಚಮಚ ಅಕ್ಕಿ ಹಿಟ್ಟಿಗೆ ಒಂದು ಚಮಚ ಆಲೂಗಡ್ಡೆ ರಸ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ತೆಳುವಾದ ಪೇಸ್ಟ್‌ ಮಾಡಿ ನಿಯಮಿತವಾಗಿ ಮುಖಕ್ಕೆ ಹಚ್ಚಿ.

– ಒಣ ಚರ್ಮದವರು ಕೊಬ್ಬರಿ ಎಣ್ಣೆ ಮತ್ತು ಆಲೂಗಡ್ಡೆ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಹತ್ತು ನಿಮಿಷ ಮಸಾಜ್‌ ಮಾಡಬೇಕು. ಎಣ್ಣೆ ಚರ್ಮದವರು, ಅಲೋವೆರ ಜೆಲ್‌ ಜೊತೆ ಆಲೂ ರಸ ಬೆರೆಸಿ ಮಸಾಜ್‌ ಮಾಡಬೇಕು. ಸಾಮಾನ್ಯ ಚರ್ಮದವರು ಆಲೂ ರಸದೊಂದಿಗೆ ಲಿಂಬೆ ರಸ ಬೆರೆಸಿ ಮಸಾಜ್‌ ಮಾಡಬೇಕು. ಮೊಸರು ಮತ್ತು ಆಲೂ ರಸವನ್ನು ಕೂಡಾ ಬಳಸಬಹುದು.

-ಕಲೆಗಳು ಇರುವಲ್ಲಿ ಈರುಳ್ಳಿ ರಸ ಹಚ್ಚಿ ಹದಿನೈದು ನಿಮಿಷ ಬಿಟ್ಟು ತೊಳೆಯಬೇಕು.

– ಕಡಲೆಹಿಟ್ಟಿನ ಜೊತೆ ತುಸು ಅರಿಶಿಣ, ಲಿಂಬೆರಸ ಹಾಗೂ ಕೆನೆ ಸೇರಿಸಿ ಫೇಸ್‌ಪ್ಯಾಕ್‌ ಮಾಡಿ, ಹಚ್ಚಿಕೊಳ್ಳಿ.

Advertisement

-ಆಲಿವ್‌ ಎಣ್ಣೆ ಹಾಗೂ ಲಿಂಬೆರಸವನ್ನು ಸಮಪ್ರಮಾಣದಲ್ಲಿ ಸೇರಿಸಿ, ಭಂಗು ಇರುವ ಜಾಗಕ್ಕೆ ದಿನಾಲೂ ಹಚ್ಚಿ ಮಸಾಜ್‌ ಮಾಡಿ.

-ನಾಲ್ಕು ಚಮಚ ನೀರಿಗೆ ಎರಡು ಹನಿ ಆ್ಯಪಲ್‌ ಸಿಡರ್‌ ವಿನೇಗರ್‌ ಸೇರಿಸಿ ಮುಖಕ್ಕೆ ಹಚ್ಚಿ ಹತ್ತು ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ.

-ಎರಡು ಚಮಚ ಮೆತ್ತಗೆ ಕಿವುಚಿದ ಬಾಳೆಹಣ್ಣಿಗೆ, ಹಸಿಹಾಲು, ಶ್ರೀಗಂಧದ ಪುಡಿ ಮಿಶ್ರಣ ಮಾಡಿ ಹಚ್ಚಿ.

-ಪೇರಲ ಹಣ್ಣಿನ ತಿರುಳಿನ ಭಾಗವನ್ನಷ್ಟೇ ಮುಖಕ್ಕೆ ಹಚ್ಚಿ, ಅರ್ಧ ಗಂಟೆಯ ನಂತರ ತೊಳೆಯಬೇಕು.

-ಜೀರಿಗೆಯನ್ನು ನುಣ್ಣಗೆ ಅರೆದು, ನೀರಿನಲ್ಲಿ ಬೆರೆಸಿ ಆ ನೀರಿನಿಂದ ಮುಖ ತೊಳೆಯುತ್ತಿದ್ದರೆ ಕಲೆ ಮಾಯವಾಗುತ್ತದೆ.

– ಶಿವಲೀಲಾ ಸೊಪ್ಪಿಮಠ

Advertisement

Udayavani is now on Telegram. Click here to join our channel and stay updated with the latest news.

Next