Advertisement

ಗುಜರಾತ್‌ನ ಹಲವೆಡೆ ನಾಲ್ಕು ಅಂಕ ತೀವ್ರತೆಯ ಭೂಕಂಪ; ಸಾವು-ನೋವು ಇಲ್ಲ

10:10 AM Jun 07, 2019 | Sathish malya |

ಅಹ್ಮದಾಬಾದ್‌ : ಗುಜರಾತ್‌ನ ಅನೇಕ ಭಾಗಗಳಲ್ಲಿ ನಿನ್ನೆ ಬುಧವಾರ ರಾತ್ರಿ 10.31ರ ಸುಮಾರಿಗೆ ನಾಲ್ಕು ಅಂಕಗಳ ತೀವ್ರತೆಯಲ್ಲಿ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ.

Advertisement

ಅಹ್ಮದಾಬಾದ್‌, ಸಬರ್‌ಕಾಂತಾ, ಬನಾಸ್‌ಕಾಂತಾ, ಅರಾವಳಿ ಮತ್ತು ಅಂಬಾಜಿ ಯಲ್ಲಿ ಭೂ ಕಂಪನಗಳು ಜನರ ಅನುಭವಕ್ಕೆ ಬಂದಿವೆ. ಯಾವುದೇ ಸಾವು ನೋವು, ನಾಶ ನಷ್ಟ ಉಂಟಾದ ವರದಿಗಳಿಲ್ಲ.

ಗುಜರಾತ್‌ನ ಬನಾಸ್‌ಕಾಂತಾದ ಪಾಲನ್‌ಪುರದಲ್ಲಿ ಮೊದಲಾಗಿ ಕಾಣಿಸಿಕೊಂಡ ಭೂಕಂಪದಿಂದ ಜನರು ಭೀತರಾದರು. ಅನೇಕರು ಒಡನೆಯೇ ಸಾಮಾಜಿಕ ಮಾಧ್ಯಮದಲ್ಲಿ ಭೂಮಿ ಕಂಪಿಸಿದ ಅನುಭವವನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next