Advertisement

ವಿಜಯಪುರದಲ್ಲಿ ಲಘು ಭೂಕಂಪ : ಭಯಪಡುವ ಅಗತ್ಯವಿಲ್ಲ

07:46 PM Oct 01, 2021 | Vishnudas Patil |

ವಿಜಯಪುರ:  ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ರಿಕ್ಟರ್ ಮಾಪಕದಲ್ಲಿ 2.5 ತೀವ್ರತೆಯ ಲಘು ಭೂಕಂಪನ ನಡೆದಿರುವ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

Advertisement

ಬಸವನ ಬಾಗೇವಾಡಿ ತಾಲ್ಲೂಕಿನ ಮಸೂತಿ ಗ್ರಾಮ ಪಂಚಾಯಿತಿಯ 2.5 ಕಿಮೀ ದೂರದಲ್ಲಿ 1 ಗಂಟೆ 47 ನಿಮಿಷ 06 ಸೆಕೆಂಡ್ ಗೆ ಸರಿಯಾಗಿ ಭೂಕಂಪ ಸಂಭವಿಸಿದೆ ಎಂದು ಕೆಎಸ್‌ಎನ್‌ಡಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ.

ಜನರು ಯಾವುದೇ ರೀತಿಯಲ್ಲಿ ಭಯಪಡುವ ಅಗತ್ಯವಿಲ್ಲ. ಭೂಕಂಪದ ತೀವ್ರತೆಯು ತೀರಾ ಕಡಿಮೆ ಇತ್ತು ಮತ್ತು ವಿನಾಶಕಾರಿಯಾಗಿರಲಿಲ್ಲ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next