Advertisement

ಭೂಕಂಪವೋ, ಅಣ್ವಸ್ತ್ರವೋ?

07:05 AM Sep 24, 2017 | |

ಬೀಜಿಂಗ್‌/ಟೆಹರಾನ್‌: ಕೆಲ ದಿನಗಳ ಹಿಂದೆ ಅಮೆರಿಕ ಸೇನಾ ನೆಲೆ ಸಮೀಪದ ವರೆಗೆ ಕ್ಷಿಪಣಿ ಉಡಾಯಿಸಿದ್ದ ಉತ್ತರ ಕೊರಿಯಾ ಶನಿವಾರ ಮತ್ತೂಮ್ಮೆ ಪರಮಾಣು ಪರೀಕ್ಷೆ ನಡೆಸಿದೆ ಎಂದು ಹೇಳಲಾಗತ್ತಿದೆ. ಆದರೆ ಉತ್ತರ ಕೊರಿಯಾ ಮತ್ತು ಅದರ ಬೆಂಬಲಿಗ ರಾಷ್ಟ್ರ ಚೀನಾ ಈ ಬೆಳವಣಿಗೆಯನ್ನು ನಿರಾಕರಿಸಿದೆ. ಚೀನಾದ ಹವಾಮಾನ ಸಂಸ್ಥೆ ನೀಡಿರುವ ಹೇಳಿಕೆ ಪ್ರಕಾರ ಉತ್ತರ ಕೊರಿಯಾದ ರಹಸ್ಯ ಸ್ಥಳವೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದ ರಿಂದ  ಅಲ್ಪ ಪ್ರಮಾಣದ ಕಂಪನ ಉಂಟಾಗಿದೆ. ರಿಕ್ಟರ್‌ ಮಾಪಕದಲ್ಲಿ ಅದು 3.4ರಷ್ಟು ದಾಖಲಾಗಿತ್ತು ಎಂದು ತಿಳಿಸಿದೆ. 

Advertisement

ಈ ನಡುವೆ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಂತೆ ಕಂಡುಬಂದಿರುವ ಚೀನಾ, ತನ್ನ ಪರಮಾಪ್ತ ರಾಷ್ಟ್ರಕ್ಕೆ ಜವಳಿ, ತೈಲೋತ್ಪನ್ನಗಳ ರಫ‌¤ನ್ನು ನಿಯಂತ್ರಿಸಲು ಮುಂದಾಗಿದೆ. ವಿಶ್ವ ಸಂಸ್ಥೆ ಆ ದೇಶದ ಮೇಲೆ ಕಠಿಣಾತಿಕಠಿಣ ಆರ್ಥಿಕ  ದಿಗ½ಂಧನಗಳನ್ನು ವಿಧಿಸಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ ಕಲ್ಲಿ ದ್ದಲು, ಕಬ್ಬಿಣದ ಅದಿರು, ಸಮುದ್ರೋತ್ಪನ್ನಗಳ ರಫ್ತು ಮಾಡುವುದನ್ನು ನಿಲ್ಲಿಸಲಾಗಿದೆ.ಇರಾನ್‌ ಕ್ಷಿಪಣಿ ಪರೀಕ್ಷೆ: ಮತ್ತೂಂದೆಡೆ ಅಮೆರಿಕದ ಎಚ್ಚರಿಕೆ ಹೊರತಾಗಿಯೂ ಕ್ಷಿಪಣಿ ಪರೀಕ್ಷೆ ನಡೆಸಿರು ವುದಾಗಿ ಇರಾನ್‌ ಹೇಳಿ ಕೊಂಡಿದೆ. ಈ ಮೂಲಕ ಅಣ್ವಸ್ತ್ರ ಅಭಿವೃದ್ಧಿ ಕಾರ್ಯಕ್ರಮ ನಡೆಸುವುದಿಲ್ಲ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳ ಜತೆ ಮಾಡಿಕೊಂಡ ಒಪ್ಪಂದವನ್ನು ಮುರಿಯುವಂಥ ಪರೋಕ್ಷ ಎಚ್ಚರಿಕೆಯನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next