Advertisement
ರಿಕ್ಟರ್‌ಮಾಪಕದಲ್ಲಿ ಅದರ ಪ್ರಮಾಣ 5.3ರಷ್ಟು ದಾಖಲಾಗಿದೆ.
Related Articles
Advertisement
ರಾಜಧಾನಿ ಐಜ್ವಾಲ್, ಛಂಪೈ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಇದರಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಮನೆಗಳು, ರಸ್ತೆಗಳು ಬಿರುಕು ಬಿಟ್ಟಿವೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಝೊರಾಮ್‌ತಾಂಗ ಜತೆಗೆ ಮಾತುಕತೆ ನಡೆಸಿ ಕೇಂದ್ರ ಸರಕಾರದಿಂದ ಅಗತ್ಯವಿರುವ ನೆರವು ನೀಡುವ ವಾಗ್ಧಾನ ಮಾಡಿದ್ದಾರೆ. ನಾಗಾಲ್ಯಾಂಡ್‌ನಲ್ಲಿಯೂ ರಿಕ್ಟರ್‌ಮಾಪಕದಲ್ಲಿ 2.8ರಷ್ಟು ದಾಖಲಾ ಗಿರುವ ಅಲ್ಪ ಪ್ರಮಾಣ ಭೂಕಂಪ ಸಂಭವಿಸಿದೆ.
ಅದರ ಕೇಂದ್ರ ಸ್ಥಾನ ಕೊಹಿಮಾದಿಂದ 44 ಕಿಮೀ ದೂರದಲ್ಲಿ ದಾಖಲಾಗಿದೆ. ರವಿವಾರ ಮೇಘಾಲಯ ಮತ್ತು ಮಣಿಪುರಗಳಲ್ಲಿ ರಿಕ್ಟರ್ ಮಾಪಕದಲ್ಲಿ 5.1ರಷ್ಟು ದಾಖಲಾಗಿರುವ ಭೂಕಂಪ ಸಂಭವಿಸಿತ್ತು.