Advertisement

ವಿಜಯಪುರ ಜಿಲ್ಲೆಯಲ್ಲಿ 24 ಗಂಟೆಯೊಳಗೆ ಮೂರು ಬಾರಿ ಲಘು ಭೂಕಂಪ  

09:43 PM Oct 02, 2021 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನ ಸಂಭಿಸಿರುವುದು ದಾಖಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

ಆಲಮಟ್ಟಿ ಹಾಗೂ ಕಲಬುರಗಿಯಲ್ಲಿರುವ ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವಂತೆ ಜಿಲ್ಲೆಯಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಧಿಕೃತ ಮಾಹಿತಿ ಎಂದು  ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸದರಿ ಸಂಭವಿಸಿದ ಭೂಕಂಪನ ಅಪಾಯಕಾರಿ ಅಲ್ಲದ ಕಾರಣ ಜಿಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ ಎಂದೂ ಜಿಲ್ಲಾಡಳಿತ ಸಾರ್ವಜನಿಕರಿಗೆ ಧೈರ್ಯ ಹೇಳಿದೆ.

ತಿಕೋಟಾ ತಾಲೂಕಿನ‌ ಬಿಜ್ಜರಗಿ ಗ್ರಾಮದ 2.9 ಕಿ.ಮೀ. ಅಂತರದಲ್ಲಿ ಈಶಾನ್ಯ ಭಾಗದಲ್ಲಿ ಅ.2ರಂದು ಬೆಳಗ್ಗೆ. 8-31 ಗಂಟೆಗೆ ಲಘು ಭೂಕಂಪನ‌ ಸಂಭವಿಸಿದೆ. 10 ಕಿ.ಮೀ. ಆಳದಲ್ಲಿ ಸಂಭವಿಸಿದ ಭೂಕಂಪನ 2 ಪ್ರಮಾಣದಷ್ಟಿತ್ತು. ಇದಲ್ಲದೇ ಅ.1 ರಂದು ಬಸವನಬಾಗೇಬಾಡಿಯ ಮಸೂತಿ ಬಳಿ 15 ಕಿ.ಮೀ ಆಳದಲ್ಲಿ 2.5 ಅಂತರಲ್ಲಿ ಮಧ್ಯಾಹ್ನ 1.47 ಕ್ಕೆ 2.5 ಪ್ರಮಾಣದ ಭೂಕಂಪ ಸಂಭವಿರುವುದು ದಾಖಲಾಗಿದೆ. ಅ.1 ರಂದೇ ಮಧ್ಯಾಹ್ನ 4.10 ಕ್ಕೆ ವಿಜಯಪುರ ನಗರದ ನೈರುತ್ಯ ಭಾಗದಲ್ಲಿ10 ಕಿ.ಮೀ. ಅಂತರದಲ್ಲಿ 10 ಕಿ.ಮೀ. ಆಳದಲ್ಲಿ 2.2 ಪ್ರಮಾಣದಷ್ಟು ಭೂಕಂಪ ಸಂಭವಿಸಿರುವುದು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next