Advertisement
ಸ್ಮಾರ್ಟ್‌ಫೋನ್ ಯುಗ ಪ್ರಾರಂಭವಾದ ಬಳಿಕವಂತೂ ಬೆರಳ ತುದಿಯಲ್ಲೇ ಇಡೀ ಜಗತ್ತಿನ ಸಮಾಚಾರವನ್ನು ತಿಳಿಯುತ್ತಿದ್ದ ನಾವು ಈಗ ಕಿವಿಗಳಿಗೆ ಕೆಲಸ ನೀಡಿದಂತಾಗಿದೆ. ಕೈ ಬೆರಳು ಮೊಬೈಲ್ ಟಚ್‌ಸ್ಕ್ರೀನಲ್ಲಿ ಓಡಿದರೆ, ಕಿವಿಯಲ್ಲಿ ಇಯರ್‌ಫೋನ್ ನೇತಾಡುತ್ತಿರುತ್ತದೆ. ಯುವ ಜಮಾನವನ್ನು ಆಕರ್ಷಿಸುವ ಸಲುವಾಗಿ ಮೊಬೈಲ್ ಕಂಪೆನಿಗಳೂ ಹೊಸ ಹೊಸ ಇಯರ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿವೆ. ಸಾಮಾನ್ಯ ಇಯರ್‌ಫೋನ್‌ನಿಂದ ಹಿಡಿದು ಬೆಲೆಬಾಳುವ ಬ್ಲೂಟೂಥ್ ಕನೆಕ್ಷನ್, ಏರ್‌ಡಾಟ್ಸ್, ಏರ್‌ಪೋಡ್ಸ್…
Related Articles
ಇಯರ್‌ಪೋಡ್ಸ್ ಅತ್ಯಂತ ಬೇಡಿಕೆ ಪಡೆದುಕೊಂಡಿರುವ ಆಧುನಿಕ ಶಬ್ದ ಆಲಿಕೆ ಮಾಧ್ಯಮವೆಂದರೆ ತಪ್ಪಾಗದು. ಪ್ರಸ್ತುತ ಯುವ ಸಮುದಾಯವು ಮಾರುಕಟ್ಟೆಯಲ್ಲಿ ಬೇಡಿಕೆ ಇಡುವುದೇ ಇಯರ್‌ಪೋಡ್ಸ್‌ಗಾಗಿ.
Advertisement
ಟಚ್ ಮೂಲಕವೇ ಮಾತನಾಡಲು, ಸಂಗೀತ ಆಲಿಸಲು ಸೌಲಭ್ಯ ಇರುವ ಅತ್ಯುತ್ತಮ ಏರ್‌ಪೋಡ್ಸ್ ಆಗಿದ್ದು, ವಾಹನ ಚಾಲಕರಿಗೆ ಹೇಳಿ ಮಾಡಿಸಿದ ಸಾಧನ ಎಂದರೆ ತಪ್ಪಾಗದು. ಆದರೆ, ಮೊಬೈಲ್‌ನಂತೆಯೇ ಇದನ್ನು ಕೂಡ ಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಇದರ ಜತೆಗೆ ಏರ್‌ಡಾಟ್ಸ್ ಎಂಬ ಇನ್ನೊಂದು ಮಾದರಿಯ ಇಯರ್‌ಫೋನ್ ಕೂಡ ಮಾರುಕಟ್ಟೆಯಲ್ಲಿ ಬೇಡಿಕೆ ಗಿಟ್ಟಿಸಿಕೊಂಡಿದ್ದು, ಕೇವಲ 5.8 ಗ್ರಾಂ ತೂಕ, ಸುಧಾರಿತ ಸೌಂಡ್ ಸಿಸ್ಟಂ, ವಾಟರ್ ರೆಸಿಸ್ಟೆಂಟ್, ಅಟೋಮ್ಯಾಟಿಕ್ ಡಿಸ್ಕನೆಕ್ಟ್ ಸೌಲಭ್ಯ, 10 ಗಂಟೆ ತನಕ ಚಾರ್ಜ್ ನಿಲ್ಲಬಲ್ಲ ಸಾಮರ್ಥ್ಯ ಹೊಂದಿ ರುವುದರಿಂದ ಜನ ಖರೀದಿಗೆ ಒಲವು ತೋರುತ್ತಿದ್ದಾರೆ ಎನ್ನುತ್ತಾರೆ ಶೋರೂಂ ಸಿಬಂದಿ.
ಬೆಲೆ ಜಾಸ್ತಿ: ಸಾಮಾನ್ಯ ಇಯರ್‌ಫೋನ್‌ಗಳು 100-200 ರೂ.ಗಳಲ್ಲಿ ಲಭ್ಯವಾದರೆ, ಇಯರ್‌ಪೋಡ್‌ಗಳ ಬೆಲೆಯಲ್ಲಿ ಯಾವುದೇ ಚೌಕಾಶಿ ಇರುವುದಿಲ್ಲ. ಅಧಿಕ ಬೆಲೆ ಬಾಳುವ ಮೊಬೈಲ್‌ಗಳನ್ನೇ ತಯಾರಿಸುವ ಕಂಪೆನಿಗಳೇ ಈ ಏರ್‌ಪೋಡ್ಸ್‌ಗಳನ್ನೂ ತಯಾರಿಸುತ್ತಿರು ವುದರಿಂದ ಅದರ ಬೆಲೆ ತುಸು ಜಾಸ್ತಿಯೇ ಇರುತ್ತದೆ. ಸದ್ಯ ಭಾರತದಲ್ಲಿ ಈ ಏರ್‌ಪೋಡ್ಸ್‌ಗಳ ಬೆಲೆ 4 ಸಾವಿರ ರೂ.ಗಳಿಂದ 12 ಸಾವಿರ ರೂ.ಗಳಷ್ಟು ಇದೆ. ಆದರೆ, ಬೆಲೆ ಗರಿಷ್ಠವಾದರೂ, ಅದರ ಉಪಯೋಗವೂ ಗರಿಷ್ಠವಾ ಗಿಯೇ ಇರುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಉಪಯುಕ್ತಏರ್ಪೋಡ್ಸ್ನಿಂದ ಉಪಯೋಗ ಹಲವು. ನಾನು ಕಳೆದ ಕೆಲ ದಿನಗಳ ಹಿಂದಷ್ಟೇ ಖರೀದಿಸಿದ್ದೇನೆ. ದ್ವಿಚಕ್ರ ವಾಹನದಲ್ಲಿ ನಿತ್ಯ ಕೆಲಸಕ್ಕೆ ತೆರಳುವಾಗ ಇದರ ಉಪಯೋಗ ಜಾಸ್ತಿ. ಕರೆ ಬಂದಾಗ ಸ್ವೀಕರಿಸಲು ಮೊಬೈಲ್ ಕಿಸೆಯಿಂದ ತೆಗೆಯಬೇಕೆಂದಿಲ್ಲ. ಹಾಗಾಗಿ ಇದು ತುಂಬಾ ಪ್ರಯೋಜನಕಾರಿಯಾಗಿದ್ದು, ಪ್ರತಿಯೊಬ್ಬರಿಗೂ ಉಪಯುಕ್ತ.
– ಮೋಹನ್, ಮುಡಿಪು ಮಂಗಳೂರಲ್ಲಿ ಬೇಡಿಕೆ
ಇಯರ್‌ಪೋಡ್ಸ್‌ಗಳು ಹೆಚ್ಚಾಗಿ ದ್ವಿಚಕ್ರ ವಾಹನ ಸವಾರರಿಗೆ ಉಪಯೋಗಕ್ಕೆ ಬರುತ್ತದೆ. ಬೈಕ್ ಚಾಲನೆ ಮಾಡುವಾಗ ಕರೆ ಸ್ವೀಕರಿಸಲು ನೇರವಾಗಿ ಬಟನ್ ಅದುಮಿದರೆ ಆಯಿತು. ಹಾಗಾಗಿ ಮಂಗಳೂರಿನಲ್ಲಿಯೂ ಇದಕ್ಕೆ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ಮೊಬೈಲ್ ಶೋರೂಂವೊಂದರ ಸಿಬಂದಿ ಪ್ರೀತಂ. ಏರ್‌ಪೋಡ್ಸ್‌ಗಳನ್ನು ಕಿವಿಗಳಲ್ಲಿ ಸಿಕ್ಕಿಸಿಕೊಂಡರೆ ಮೊಬೈಲ್‌ನ್ನು ಪದೇಪದೆ ಬ್ಯಾಗ್, ಕಿಸೆಯಿಂದ ಹೊರ ತೆಗೆಯಬೇಕಾದ ಪ್ರಮೇಯವೇ ಬರುವುದಿಲ್ಲ. ಕರೆ ಸ್ವೀಕರಿಸಲು, ಹಾಡು ಕೇಳಲು ಉದ್ದನೆಯ ವಯರ್ ಹೊಂದಿರುವ ಇಯರ್ ಫೋನ್‌ಗಳನ್ನು ಕಿವಿಗೆ ಸಿಕ್ಕಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಹಾಗಾಗಿ ಅಟೋಮ್ಯಾಟಿಕ್ ಸಂಪರ್ಕ ಸಾಧಿಸಿ ಕಿವಿಗೆ ಶಬ್ದವನ್ನು ಕೇಳಿಸುವ ಇಯರ್‌ಪೋಡ್ಸ್‌ಗಳೇ ಯುವಕರ ನೆಚ್ಚಿನ ಆಯ್ಕೆಯಾಗುತ್ತಿವೆ ಎಂಬುದು ಅವರ ಅಭಿಪ್ರಾಯ. ಧನ್ಯಾ ಬಾಳೆಕಜೆ