Advertisement

ಇಯರ್‌ಫೋನ್‌ಗಳು ಸಂಗೀತವಾ ಹಾಡಿವೆ..!

06:00 AM Dec 24, 2018 | |

ಮೊಬೈಲ್‌ ಬಾಕ್ಸ್‌ನಲ್ಲಿ ಇಯರ್‌ ಫೋನ್‌ ಇದ್ದರೂ ಅದನ್ನು ಸಂಗೀತ ಹಾಡು ಕೇಳಲು ಬಳಸಬೇಡಿ. ಮಾರುಕಟ್ಟೆಯಲ್ಲಿ ಕನಿಷ್ಠ 600 ರೂ. ನಿಂದ ಆರಂಭವಾಗಿ ಸಾವಿರಾರು ರೂ.ಗಳವರೆಗೆ ಉತ್ತಮ ಇಯರ್‌ಫೋನ್‌ ದೊರಕುತ್ತವೆ. ಅವನ್ನು ಕೊಂಡು ಬಳಸಿ. ಆಗ, ಮೊಬೈಲ್‌ ನೊಂದಿಗೆ ಉಚಿತವಾಗಿ ಸಿಕ್ಕಿದ ಇಯರ್‌ ಫೋನ್‌ ಗೂ ಖರೀದಿಸಿದ ಇಯರ್‌ ಫೋನ್‌ಗೂ ಇರುವ ವ್ಯತ್ಯಾಸ ನಿಮಗೇ ತಿಳಿಯುತ್ತದೆ. 

Advertisement

ಆನ್‌ ಲೈನ್‌ ಮೂಲಕ ದೊರಕುವ ಬಹುತೇಕ ಮೊಬೈಲ್‌ ಫೋನ್‌ ಬಾಕ್ಸ್‌ಗಳಲ್ಲಿ ಇಯರ್‌ ಫೋನ್‌ ನೀಡಿರುವುದಿಲ್ಲ. ಮಾರುಕಟ್ಟೆಯಲ್ಲಿ (ಆಫ್ಲೈನ್‌) ಮಾರಾಟ ಮಾಡುವ ದರಕ್ಕಿಂತ ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ಮೊಬೈಲ್‌ಗ‌ಳನ್ನು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮೂಲಕ ಹಲವರು ಕಂಪೆನಿಗಳು ಈಗ ಮಾರಾಟ ಮಾಡುತ್ತಿವೆ. ಕೇವಲ ಆಫ್ಲೈನ್‌ನಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದ ಕಂಪೆನಿಗಳೂ ಕೂಡ ಈಗ ಆನ್‌ಲೈನ್‌ ಗೆಂದೇ ಪ್ರತ್ಯೇಕ ಬ್ರಾಂಡ್‌ ಮಾಡಿ ಮಾರಾಟ ಮಾಡುತ್ತಿವೆ. (ಉದಾಹರಣೆಗೆ ವಿವೋ, ಒಪ್ಪೋ ಕಂಪೆನಿಯ  ರಿಯಲ್‌ಮಿ.) ಹೀಗಾಗಿ ಮೊಬೈಲ್‌ ಅನ್ನೇ ಸ್ಪರ್ಧಾತ್ಮಕ ದರದಲ್ಲಿ ನೀಡುತ್ತಿರುವುದರಿಂದ ಅದರ ಜೊತೆ ಇಯರ್‌ಫೋನ್‌ ಸಹ ನೀಡಿದರೆ ಮೊಬೈಲ್‌ ಫೋನ್‌ದರವನ್ನು ಹೆಚ್ಚಳ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಒನ್‌ಪ್ಲಸ್‌, ಶಿಯೋಮಿ, ಆನರ್‌ ಮತ್ತಿತರ ಕಂಪೆನಿಗಳು ತಮ್ಮ ಬಾಕ್ಸ್‌ನಲ್ಲಿ ಇಯರ್‌ ಫೋನ್‌ ನೀಡುವುದಿಲ್ಲ. ಇದು ಆನ್‌ಲೈನ್‌ನಲ್ಲಿ ಮೊದಲ ಬಾರಿಗೆ ಕೊಂಡ ಗ್ರಾಹಕರಿಗೆ ಗೊತ್ತಿರುವುದಿಲ್ಲ. ಅವರೆಲ್ಲ ಅಮೆಜಾನ್‌ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರ ಅಭಿಪ್ರಾಯ ಬರೆಯುವಾಗ, ಮೊಬೈಲೇನೋ ಚೆನ್ನಾಗಿದೆ. ಆದರೆ ನನಗೆ ಬಂದ ಬಾಕ್ಸ್‌ನಲ್ಲಿ ಇಯರ್‌ಫೋನ್‌ ಮಿಸ್ಸಾಗಿದೆ ಎಂದು ಆರೋಪ ಹೊರಿಸಿ, ಮೊಬೈಲ್‌ಗೆ ನಾಲ್ಕು ಸ್ಟಾರ್‌ ರೇಟಿಂಗ್‌ ನೀಡುವ ಕಡೆ ಒಂದೋ ಎರಡೋ ರೇಟಿಂಗ್‌ ನೀಡಿಬಿಡುತ್ತಾರೆ!

ಇನ್ನೊಂದು ವಿಷಯ: ಮೊಬೈಲ್‌ ಬಾಕ್ಸ್‌ ಜೊತೆ ಕೆಲವು ಕಂಪೆನಿಗಳು ನೀಡುವ ಇಯರ್‌ಫೋನ್‌ ನ ಗುಣಮಟ್ಟ ಅಷ್ಟಕ್ಕಷ್ಟೆ. ಸಾಧಾರಣ 200-250 ರೂ. ಬೆಲೆಯ ಇಯರ್‌ಫೋನ್‌ ನೀಡುತ್ತಾರೆ. ಎಷ್ಟೇ ಒಳ್ಳೆಯ ಮೊಬೈಲ್‌ ಇದ್ದರೂ, ಅದರಲ್ಲಿ ಉತ್ತಮ ಆಡಿಯೋ ಇಂಜಿನ್‌ ಇದ್ದರೂ ಇಯರ್‌ಫೋನ್‌ ಕಡಿಮೆ ದರ್ಜೆಯದಾದ್ದರಿಂದ ಸಂಗೀತ ಹಿತಾನುಭವ ನೀಡುವುದಿಲ್ಲ. 

ಆದ್ದರಿಂದ ನನ್ನ ಸಲಹೆ ಏನೆಂದರೆ, ಮೊಬೈಲ್‌ ಬಾಕ್ಸ್‌ನಲ್ಲಿ ಇಯರ್‌ ಫೋನ್‌ ಇದ್ದರೂ ಅದನ್ನು ಸಂಗೀತ ಹಾಡು ಕೇಳಲು ಬಳಸಬೇಡಿ. ಮಾರುಕಟ್ಟೆಯಲ್ಲಿ ಕನಿಷ್ಠ 600 ರೂ. ನಿಂದ ಆರಂಭವಾಗಿ ಸಾವಿರಾರು ರೂ.ಗಳವರೆಗೆ ಉತ್ತಮ ಇಯರ್‌ಫೋನ್‌ ದೊರಕುತ್ತವೆ. ಅವನ್ನು ಕೊಂಡು ಬಳಸಿ. ಆಗ, ಮೊಬೈಲ್‌ ನೊಂದಿಗೆ ಉಚಿತವಾಗಿ ಸಿಕ್ಕಿದ ಇಯರ್‌ ಫೋನ್‌ ಗೂ ಖರೀದಿಸಿದ ಇಯರ್‌ ಫೋನ್‌ಗೂ ಇರುವ ವ್ಯತ್ಯಾಸ ನಿಮಗೇ ತಿಳಿಯುತ್ತದೆ. ನೀವು ಸಂಗೀತ ಪ್ರಿಯರಾಗಿದ್ದು ಹಾಡುಗಳನ್ನು ಕೇಳುವ ಹವ್ಯಾಸ ಹೊಂದಿದ್ದರೆ 1500-2000 ರೂ.ವರೆಗೂ ಬಜೆಟ್‌ ವಿಸ್ತರಿಸಿಕೊಂಡು ಉತ್ತಮ ಕ್ವಾಲಿಟಿಯ ಇಯರ್‌ ಫೋನ್‌ ಕೊಳ್ಳಿ. 
ಇಲ್ಲಿ ಕೆಲವು ಉತ್ತಮ ಇಯರ್‌ಫೋನ್‌ಗಳ ಬಗ್ಗೆ ಪುಟ್ಟ ಮಾಹಿತಿ  ಇದೆ. ಇಯರ್‌ಪೋನ್‌ಗಳ ಬಗ್ಗೆ ಮಾತ್ರ ಇಲ್ಲಿ ಹೇಳಲಾಗಿದೆ.  ಹೆಡ್‌ ಫೋನ್‌ಗಳ ಕುರಿತು ಅಲ್ಲ.  ಹೆಡ್‌ಫೋನ್‌ ಎಂದರೆ ದಪ್ಪಕ್ಕಿರುವ ಕಿವಿಯನ್ನೂ ಪೂರ್ತಿ ಆವರಿಸುವ ದಪ್ಪ ಕುಷನ್‌ಗಳಿರುವಂಥವು. ಗಾಯಕರು ರೆಕಾರ್ಡಿಂಗ್‌ ರೂಮ್‌ನಲ್ಲಿ ಹಾಡುವಾಗ ಕಿವಿಯಲ್ಲಿ ಹಾಕಿಕೊಂಡಿರುತ್ತಾರೆ ನೋಡಿ ಅಂಥದ್ದು. ಇಯರ್‌ ಫೋನ್‌ ಎಂದರೆ ನಿಮ್ಮ ಕಿವಿಯ ಕಿಂಡಿಯೊಳಗೆ ಕೂರಿಸುವಂಥದ್ದು. ಇದರಲ್ಲಿ ನಿಮಗೆ ಉತ್ತಮ ಬಾಸ್‌, ಸಣ್ಣಪುಟ್ಟ ಸಂಗೀತದ ಶಬ್ದಗಳೂ ಸಹ ಚೆನ್ನಾಗಿ ಕೇಳಿಸುತ್ತದೆ. 

ಸೋನಿ ಎಂಡಿಆರ್‌ ಎಕ್ಸ್‌ಬಿ 55:  ಸಂಗೀತ ಕೇಳುವಾಗ ಇಯರ್‌ಫೋನ್‌ನಲ್ಲಿ ಬಾಸ್‌ ಇರದಿದ್ದರೆ ಅಷ್ಟೊಂದು ಮಜಾ ಇರುವುದಿಲ್ಲ. ಉತ್ತಮ ಬಾಸ್‌ ಮತ್ತು ಟ್ರೆಬಲ್‌ ಹಾಗೂ ಆಡಿಯೋ ಇರುವ ಇಯರ್‌ಫೋನ್‌ ಬೇಕೆನ್ನುವವರಿಗೆ ಈ ಮಾಡೆಲ್‌ ಉತ್ತಮ ಆಯ್ಕೆ.  ಇದರ ದರ ಅಮೆಜಾನ್‌.ಇನ್‌ ನಲ್ಲಿ 1500 ರೂ. ಇದರಲ್ಲಿ ಮೈಕ್‌ ಇರುವುದಿಲ್ಲ. ಅಂದರೆ ಕರೆ ಬಂದಾಗ ನೀವು ಈ ಇಯರ್‌ಫೋನ್‌ ಮೂಲಕ ಮಾತನಾಡಲಾಗುವುದಿಲ್ಲ.  ಇದೇ ಇಯರ್‌ಫೋನ್‌ ಸೋನಿ ಎಂಡಿಆರ್‌ ಎಕ್ಸ್‌ಬಿ 55 ಎಪಿ ಎಂಬ ಹೆಸರಿನಲ್ಲಿ ಮೈಕ್‌ ಸೌಲಭ್ಯದ ಜೊತೆ ಬರುತ್ತದೆ. ಇದರ ದರ 1950 ರೂ. 

Advertisement

ಸೆನ್‌ಹೈಸರ್‌ ಸಿಎಕ್ಸ್‌ 275 ಎಸ್‌: ಇಯರ್‌ಫೋನ್‌ ವಿಷಯಕ್ಕೆ ಬಂದರೆ ಸೋನಿ, ಸೆನ್‌ಹೈಸರ್‌, ಸ್ಕಲ್‌ಕ್ಯಾಂಡಿ ಬ್ರಾಂಡ್‌ಗಳಿಗೆ ಉತ್ತಮ ಹೆಸರಿದೆ. ಶಿಯೋಮಿ ಕೂಡ ಕಡಿಮೆ ದರದಲ್ಲಿ ಉತ್ತಮ ಇಯರ್‌ಫೋನ್‌ಗಳನ್ನು ನೀಡುತ್ತಿದೆ. ಸೆನ್‌ಹೈಸರ್‌ನಲ್ಲಿ ಸಿಎಕ್ಸ್‌ 275 ಎಸ್‌ ಮಾಡೆಲ್‌ ಉತ್ತಮ ಹೆಸರು ಮಾಡಿದೆ. ಈ ಉತ್ಪನ್ನದ ಬಗ್ಗೆ ಅಮೆಜಾನ್‌ನಲ್ಲಿ 8500 ಜನರ ರಿವ್ಯೂ ಇದೆ. ಉತ್ತಮ ರೇಟಿಂಗ್‌ ಇದೆ. ಗುಣಮಟ್ಟದ ಧ್ವನಿ, ಬಾಸ್‌ ಮತ್ತು ಟ್ರೆಬಲ್‌ನ ಹದವಾದ ಮಿಶ್ರಣ ಇದರಲ್ಲಿದೆ. ಜೊತೆಗೆ ಮೈಕ್‌ ಸೌಲಭ್ಯ ಕೂಡ ಇದೆ. ದರ

ಅಮೆಜಾನ್‌ನಲ್ಲಿ 1575 ರೂ.
ಎಂಐ ಇಯರ್‌ಫೋನ್‌ಗಳು
: ಬರೀ ಸಾವಿರದ ದರದಲ್ಲೇ ಹೇಳುತ್ತಿದ್ದೀರಿ. 500-600ರೂ.ಗಳಲ್ಲಿ ಯಾವುದಾದರೂ ಇದ್ದರೆ ಹೇಳಿ ಅಂತ ಹಲವರಾದರೂ ಅಂದುಕೊಳ್ಳುತ್ತೀರಿ. ಮೊಬೈಲ್‌ ಫೋನ್‌ಗಳಲ್ಲಿ ಕಡಿಮೆ ದರದ ಸ್ಪರ್ಧೆ ನೀಡಿದ ಶಿಯೋಮಿ ಬೇರೆ ರೀತಿಯ ಅಕ್ಸೆಸರೀಸ್‌ಗಳನ್ನೂ ನೀಡುತ್ತಿದೆ. ಅದರಲ್ಲಿ ಎಂಐ ಇಯರ್‌ಫೋನ್‌ಗಳೂ ಸೇರಿವೆ. ಮಿ ಇಯರ್‌ಫೋನ್‌ ಬೇಸಿಕ್‌ ಎಂಬ ಮಾಡೆಲ್‌ 399 ರೂ.ಗೆ ದೊರಕುತ್ತದೆ. ಈ ಬೆಲೆಗೆ ಇದೊಂದು ಉತ್ತಮ ಇಯರ್‌ಫೋನ್‌. ಇದು ಮೈಕ್‌ ಸೌಲಭ್ಯದೊಡನೆ ಬರುತ್ತದೆ. 1500 ರೂ. ಬೆಲೆಯ ಇಯರ್‌ಫೋನ್‌ನಷ್ಟಲ್ಲದಿದ್ದರೂ ಒಂದು ಲೆವಲ್‌ಗೆ ಚೆನ್ನಾಗಿದೆ. ಇನ್ನು ಎಂಐ ಇಯರ್‌ಫೋನ್‌ ಎಂಬ 699 ರೂ. ಗೆ ದೊರಕುತ್ತದೆ. ಇದು ಮಿತವ್ಯಯದ ದರ ಉತ್ತಮ ಇಯರ್‌ ಫೋನ್‌. ಬಾಸ್‌ ಟ್ರೆಬಲ್‌ ಎಲ್ಲವೂ ಬ್ಯಾಲೆನ್ಸ್‌$x ಆಗಿದೆ. ಬೇಸಿಕ್‌ ಬೇಡ, ದುಬಾರಿಯೂ ಬೇಡ ಎನ್ನುವವರಿಗೆ ಇದು ಉತ್ತಮ ಆಯ್ಕೆ. ಎಂಐ ಇಯರ್‌ಫೋನ್‌ ಅಮೆಜಾನ್‌, ಫ್ಲಿಪ್‌ಕಾರ್ಟ್‌, ಎಂಐ ಆನ್‌ಲೈನ್‌ ಸ್ಟೋರ್‌ ಮೂಲಕ ದೊರಕುತ್ತದೆ.

ಬೋಟ್‌ ಬಾಸ್‌ಹೆಡ್ಸ್‌ 225
ಈ ಮಾಡೆಲ್‌ ಅಮೆಜಾನ್‌ನಲ್ಲಿ 500 ರೂ.ಗೆ ದೊರಕುತ್ತಿದ್ದು, ಇದು ಸಹ ಜನಪ್ರಿಯ ಇಯರ್‌ ಫೋನ್‌ ಆಗಿದೆ. ಮೈಕ್ರೋಫೋನ್‌ ಸಹ ಇದ್ದು, ಇದು ಅಧಿಕ ಬಾಸ್‌ಗೆ ಹೆಸರಾಗಿದೆ. ಆದರೆ ನಾನು ಬಳಸಿನೋಡಿದಾಗ ಬಾಸ್‌ ತುಂಬಾ ಹೆಚ್ಚಾಯಿತು ಅನಿಸಿತು. ಆಡಿಯೋ ಗುಣಮಟ್ಟ ಪರವಾಗಿಲ್ಲ. 500 ರೂ.ಗೆ ಇದು ಸಹ ಉತ್ತಮ ಆಯ್ಕೆಯೇ. 

ಇನ್ನೂ ಹಲವಾರು ಇಯರ್‌ಫೋನ್‌ಗಳು ಇವೆ. ಇಲ್ಲಿ ನಾನು ಬಳಸಿ ನೋಡಿ ಚೆನ್ನಾಗಿದೆ ಅನ್ನಿಸಿದ ಇಯರ್‌ಫೋನ್‌ಗಳ ಬಗ್ಗೆ ಮಾತ್ರ ಬರೆದಿದ್ದೇನೆ. ಜೆಬಿಎಲ್‌, ಸ್ಕಲ್‌ಕ್ಯಾಂಡಿ, ಕ್ರಿಯೇಟಿವ್‌ ಬ್ರಾಂಡ್‌ಗಳಲ್ಲೂ ಉತ್ತಮ ಇಯರ್‌ಫೋನ್‌ಗಳಿವೆ. ನೀವು ಅಮೆಜಾನ್‌ ಅಥವಾ ಫ್ಲಿಪ್‌ಕಾರ್ಟ್‌ಗೆ ಹೋಗಿ, ನಿಮ್ಮ ಬಜೆಟ್‌ಗನುಗುಣವಾಗಿ ಇಯರ್‌ಫೋನ್‌ ಸೆಕ್ಷನ್‌ನಲ್ಲಿ ಹೆಚ್ಚು ರಿವ್ಯೂ ಮತ್ತು ಅದರಲ್ಲಿ ಹೆಚ್ಚು ರೇಟಿಂಗ್‌ ಇರುವುದನ್ನು ಆರಿಸಿಕೊಳ್ಳಬಹುದು.  ಅದಕ್ಕೆಲ್ಲ ಸಮಯವಿಲ್ಲ ಎನಿಸಿದರೆ ಇಲ್ಲಿ ಸೂಚಿಸಿರುವುದರಲ್ಲಿ ನಿಮ್ಮ ಬಜೆಟ್‌ಗೆ ಹೊಂದುವುದನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು.

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next