Advertisement

Eagle Vs Lal Salaam: ಮೊದಲ ದಿನದ ಬಾಕ್ಸ್‌ ಆಫೀಸ್‌ ಪೈಪೋಟಿಯಲ್ಲಿ ಯಾರು ಮುಂದೆ?

11:14 AM Feb 10, 2024 | Team Udayavani |

ಚೆನ್ನೈ/ಹೈದರಾಬಾದ್: ಕಾಲಿವುಡ್‌ ಹಾಗೂ ಟಾಲಿವುಡ್‌ ನಲ್ಲಿ ಶುಕ್ರವಾರ(ಫೆ.9 ರಂದು) ಎರಡು ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್‌ ಆಗಿದೆ. ಎರಡೂ ಸಿನಿಮಾಕ್ಕೆ ಮೊದಲ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾದರೆ ಬಾಕ್ಸ್‌ ಆಫೀಸ್‌ ನಲ್ಲಿ ಈ ಎರಡು ಸಿನಿಮಾಗಳ ಮೊದಲ ದಿನದ ಕಲೆಕ್ಷನ್‌ ನತ್ತ ಒಂದು ನೋಟ ಹಾಕಿ ಬರೋಣ.

Advertisement

ಲಾಲ್‌ ಸಲಾಂ: ಸೂಪರ್‌ ಸ್ಟಾರ್‌ ರಜಿನಿಕಾಂತಾ ಅವರ ಪುತ್ರಿ ಐಶ್ವರ್ಯಾ ರಜಿನಿಕಾಂತ್, ಬಹುತೇಕ ಎಂಟು ವರ್ಷದ ಬಳಿಕ ಡೈರೆಕ್ಷನ್‌ ಗೆ ಇಳಿದಿದ್ದಾರೆ. ಸ್ಪೋರ್ಟ್ಸ್‌ ಡ್ರಾಮಾ ಕಥೆಯಲ್ಲಿ ಸಾಮಾಜಿಕ ಸಂದೇಶವನ್ನು ಸಾರಿದ್ದು, ಹಿಂದೂ – ಮುಸ್ಲಿಂ ಧಾರ್ಮಿಕ ವಿಚಾರವನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

ಸಿನಿಮಾದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಪ್ರಾತಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಮಹತ್ವದ ಪಾತ್ರವನ್ನು ರಜಿನಿಕಾಂತ್‌ ಅವರು ನಿಭಾಯಿಸಿದ್ದಾರೆ. ಅವರ 40 ನಿಮಿಷದ ಪಾತ್ರ ಸಿನಿಮಾದಲ್ಲಿ ಎದ್ದು ಕಾಣುತ್ತದೆ.

ಮೊದಲ ದಿನ ಪ್ರೇಕ್ಷಕರಿಂದ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೊಡ್ಡಮಟ್ಟದ ಆರಂಭವನ್ನು ಪಡೆದುಕೊಳ್ಳುವ ಸಾಧ್ಯತೆಯಿದ್ದ ʼಲಾಲ್‌ ಸಲಾಂʼ ಆರಂಭಿಕ ಅಂದಾಜಿನ ಪ್ರಕಾರ  4.30 ಕೋಟಿ ರೂಪಾಯಿಯ ಗಳಿಕೆಯನ್ನು ಕಂಡಿದೆ.

ವಾರಾಂತ್ಯದಲ್ಲಿ ʼಲಾಲ್‌ ಸಲಾಂʼ ಕಲೆಕ್ಷನ್‌ ವಿಚಾರದಲ್ಲಿ ಸದ್ದು ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Advertisement

ಈಗಲ್: ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದ ರವಿತೇಜ ಅವರ ʼಟೈಗರ್ ನಾಗೇಶ್ವರ ರಾವ್ʼ ಅಷ್ಟಾಗಿ ಸದ್ದು ಮಾಡಿಲ್ಲ. ಇದೀಗ ಬಂದಿರುವ ಅವರ ʼಈಗಲ್‌ʼ ಸಿನಿಮಾದ ಮೇಲೂ ದೊಡ್ಡಮಟ್ಟದ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಕಾರ್ತಿಕ್ ಘಟ್ಟಮನೆನಿ ನಿರ್ದೇಶನದ ಈ ಸಿನಿಮಾದಲ್ಲಿ ರವಿತೇಜ ಸಖತ್‌ ಮಾಸ್‌ ಅವತಾರದಲ್ಲಿ‌ ಕಾಣಿಸಿಕೊಂಡಿದ್ದಾರೆ. ಮಾಸ್‌ ಮಹಾರಾಜ ರವಿತೇಜ ಅವರ ಸಿನಿಮಾಗಳು ಬಾಕ್ಸ್‌ ಆಫೀಸ್‌ ನಲ್ಲಿ ಉತ್ತಮ ಗಳಿಕೆ ಕಾಣುತ್ತದೆ ಎನ್ನುವುದು ʼಈಗಲ್‌ʼ ಕೂಡ ಸಾಬೀತು ಮಾಡಿದೆ. ಮೊದಲ ದಿನವೇ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ.

ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಆರಂಭಿಕ ಅಂದಾಜಿನ ಪ್ರಕಾರ 6 ಕೋಟಿ ರೂ.ಗಳಿಸಿದೆ. ಆ ಮೂಲಕ ಪಾಸಿಟಿವ್‌ ಸ್ಟಾರ್ಟ್‌ ಪಡೆದುಕೊಂಡಿದೆ.

‘ಈಗಲ್’ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್, ಕಾವ್ಯಾ ಥಾಪರ್, ನವದೀಪ್, ಶ್ರೀನಿವಾಸ್ ಅವಸರಲ ಮತ್ತು ಮಧುಬಾಲಾ ಮುಂತಾದವರು ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next