Advertisement
ಡಿ.ಕೆ.ಸುರೇಶ್ (ಬೆಂಗಳೂರು ಗ್ರಾಮಾಂತರ) ಗೆಲುವಿನಲ್ಲಿ ಪಾತ್ರ: ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರ ವೈಯಕ್ತಿಕ ವರ್ಚಸ್ಸು ಹಾಗೂ ಕ್ಷೇತ್ರದಲ್ಲಿ ಹೊಂದಿರುವ ಹಿಡಿತದಿಂದ. ಜೆಡಿಎಸ್ ಜತೆ ಮೈತ್ರಿಯಾಗದೆ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದಾಗಲೂ ಎರಡು ಬಾರಿ ಸುರೇಶ್ ಗೆದ್ದಿದ್ದರು.
ಗೆಲುವಿನಲ್ಲಿ ಪಾತ್ರ: ಯಾವುದೇ ಪಕ್ಷದ ಅಧಿಕೃತ ಅಭ್ಯರ್ಥಿಯೂ ಆಗದೆ ಬೃಹತ್ ಮತ ಪಡೆದು ದಿ.ಪತಿ ಅಂಬರೀಶ್ ಅವರ ನಾಮಬಲ, ಅಭಿಮಾನಿಗಳ ಬೆಂಬಲ, ಅನುಕಂಪ, ಕಾಂಗ್ರೆಸ್ ಹಾಗೂ ರೈತ ಸಂಘದ ನಾಯಕರ ಬೆಂಬಲದಿಂದಲೇ ಗೆದ್ದು ತೋರಿಸಿದ್ದಾರೆ. ಸರ್ಕಾರದ ವಿರುದ್ಧವೇ ಸೆಡ್ಡು ಹೊಡೆದು ಜಯ ದಕ್ಕಿಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ (ಹಾಸನ)
ಗೆಲುವಿನಲ್ಲಿ ಪಾತ್ರ: ಹಾಸನ ಜೆಡಿಎಸ್ ಭದ್ರಕೋಟೆಯಾದರೂ ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ, ಕಳೆದ ಬಾರಿ ದೇವೇಗೌಡರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಣ ನೀಯ ಮತ ಪಡೆದಿದ್ದ ಎ.ಮಂಜು ಬಿಜೆಪಿ ಅಭ್ಯರ್ಥಿಯಾಗಿ ದ್ದರು. ಹೀಗಾಗಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಭ್ಯ ರ್ಥಿಯಾಗಿ ಕಣಕ್ಕಿಳಿದು ಜಯ ಸಾಧಿಸಿದ್ದಾರೆ. ಇಲ್ಲಿ ಯಾವುದೇ ಪ್ರತಿರೋಧ ಇಲ್ಲದೆ ಕಾಂಗ್ರೆಸ್ ಬೆಂಬಲ ಪ್ರಜ್ವಲ್‌ಗೆ ದೊರೆಯಿತು.
Related Articles
ಅಭೂತಪೂರ್ವ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಜನರು ತೀರ್ಪು ನೀಡಿದ್ದಾರೆ. ಮೋದಿಯ ವರು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಕೆಲಸ ಮಾಡು ತ್ತಾರೆ ಎನ್ನುವ ನಂಬಿಕೆ ಇದೆ. ಈ ಸೋಲಿನಿಂದ ಎಲ್ಲ ಪ್ರತಿಪಕ್ಷಗಳು ಪಾಠ ಕಲಿಯಬೇಕು. ಅನಗತ್ಯ ವಿರೋಧ ವ್ಯಕ್ತಪಡಿಸು ವುದರ ಬದಲು ಸಮೃದ್ಧ ದೇಶ ಕಟ್ಟಲು ಎಲ್ಲರಿಗೂ ಒಳ್ಳೆಯ ಸಮಯ.
-ರೋಷನ್ ಬೇಗ್, ಕಾಂಗ್ರೆಸ್ ಶಾಸಕ.
Advertisement