Advertisement

ಇ-ಶ್ರಮ್‌ ಯೋಜನೆಯಡಿ 79 ಲಕ್ಷ ಕಾರ್ಮಿಕರ ನೋಂದಣಿ

09:38 PM Sep 20, 2022 | Team Udayavani |

ವಿಧಾನ ಪರಿಷತ್ತು: ಇ-ಶ್ರಮ್‌ ಯೋಜನೆಯಡಿ ಅಸಂಘಟಿತ ಕಾರ್ಮಿಕರ ದತ್ತಾಂಶವನ್ನು ಕ್ರೋಢೀಕರಿಸುವ ಕೆಲಸ ನಡೆದಿದ್ದು ಇದುವರೆಗೂ 79 ಲಕ್ಷ ಕಾರ್ಮಿಕರು ಇ-ಶ್ರಮ್‌ ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ನಿಯಮ 330ರ ಅಡಿ ಕಾಂಗ್ರೆಸ್‌ ಸದಸ್ಯ ಪ್ರಕಾಶ್‌ ರಾಥೋಡ್‌, ನಾಗರಾಜ್‌ ಯಾದವ್‌ ಅವರ ಪ್ರಶ್ನೆಗೆ ಕಾರ್ಮಿಕರ ಸಚಿವರ ಪರವಾಗಿ ಉತ್ತರ ನೀಡಿದ ಅವರು, ಈಗಾಗಲೇ ಸರ್ಕಾರ ರಾಜ್ಯದಲ್ಲಿರುವ ಸಂಘಟಿತ ಕಾರ್ಮಿಕರನ್ನು ಗುರುತಿಸುವಿಕೆಯ ಕಾರ್ಯದಲ್ಲಿ  ಹೆಜ್ಜೆಯಿರಿಸಿದೆ ಎಂದರು.

ರಾಜ್ಯದಲ್ಲಿ ಸುಮಾರು 1.8 ಕೋಟಿ ಅಸಂಘಟಿಕ ಕಾರ್ಮಿಕರು ಇದ್ದಾರೆ ಎಂದು ಅಂದಾಜಿಸಲಾಗಿದೆ.ಜತೆಗೆ 379 ಅಸಂಘಟಿತ ವರ್ಗಗಳನ್ನು ಗುರುತಿಸಿ ಇ-ಶ್ರಮ್‌ ಕಾರ್ಡ್‌ ನೀಡಲಾಗುತ್ತಿದೆ. 16-59 ವರ್ಷ ವಯೋಮಾನದ ಇ.ಎಸ್‌.ಐ ಹಾಗೂ ಪಿ.ಎಫ್ ಹೊಂದಿರದ ಮತ್ತು ಆದಾಯ ತೆರಿಗೆ ಪಾವತಿದಾರರಲ್ಲದ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್‌ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾರ್ಮಿಕರ ಸಿಬ್ಬಂದಿ ಕೊರತೆ ಇದೆ ಎಂಬುವುದು ಸರ್ಕಾರದ ಗಮನಕ್ಕೆ ಬಂದಿದೆ. ಕಾರ್ಮಿಕರ ಸಮಸ್ಯೆಯನ್ನು ಇತ್ಯಾರ್ಥಗೊಳಿಸಲು ಈ ಸಂಬಂಧ ಶೀಘ್ರದಲ್ಲೆ  ಮುಖ್ಯಮಂತ್ರಿಗಳ ಮತ್ತು ಕಾರ್ಮಿಕರ ಇಲಾಖೆ ಸಚಿವರ ಸಭೆ ನಡೆಸಲಾಗುವುದು. ಆ ವೇಳೆ ಪ್ರತಿಪಕ್ಷದ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next