Advertisement

ಇ-ಸ್ಕೂಟರ್‌ಗೆ ಹೊಗೆ ತಪಾಸಣೆಯಾಗಿಲ್ಲವೆಂದು ದಂಡ!

12:51 PM Sep 11, 2022 | Team Udayavani |

ತಿರುವನಂತಪುರ: ಮಾಲಿನ್ಯವನ್ನು ಮಾಡದ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಹೊಗೆ ತಪಾಸಣೆ ಪತ್ರವಿಲ್ಲ ಎಂದು ದಂಡ ವಿಧಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.

Advertisement

ಮಲಪ್ಪುರಂ ಜಿಲ್ಲೆಯ ನೀಲಂಚೆರಿಯ ನಿವಾಸಿಯೊಬ್ಬರು ಅಥೆರ್‌ 450ಎಕ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಳಸುತ್ತಿದ್ದಾರೆ. ಇತ್ತೀಚೆಗೆ ಸಂಚಾರಿ ಪೊಲೀಸರು ಅವರಿಗೆ ಹೊಗೆ ತಪಾಸಣೆ ಪತ್ರವಿಲ್ಲವೆಂದು 250 ರೂ. ದಂಡ ವಿಧಿಸಿದ್ದಾರೆ. ದಂಡದ ರಶೀದಿ ಮತ್ತು ಸ್ಕೂಟರ್‌ನ ಫೋಟೋ ಎಲ್ಲೆಡೆ ಹರಿದಾಡಿದ್ದು, ನೆಟ್ಟಿಗರು ಪೊಲೀಸರಿಗೆ ಬೈಯಲಾಂಭಿಸಿದ್ದಾರೆ.

ಆದರೆ “ಸ್ಕೂಟರ್‌ ಓಡಿಸುತ್ತಿದ್ದ ವ್ಯಕ್ತಿ ಬಳಿ ಪರವಾನಗಿ ಇಲ್ಲದ ಹಿನ್ನೆಲೆ ದಂಡ ವಿಧಿಸಲಾಗಿದೆ. ಅಧಿಕಾರಿಗಳು ಟೈಪ್‌ ಮಾಡುವಾಗ ತಪ್ಪು ಟೈಪ್‌ ಮಾಡಿದ್ದರಿಂದ ಹೀಗಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next