Advertisement
2020 ಎಪ್ರಿಲ್‌ನಲ್ಲಿ ಕೇಂದ್ರ ಸರಕಾರವು ಸ್ವಾಮಿತ್ವ ಯೋಜನೆ ಆರಂಭಿಸಿತು. ಈ ಯೋಜನೆಯಡಿ ತಂತ್ರಜ್ಞಾನದ ಸಹಾಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ಮ್ಯಾಪಿಂಗ್ ಸಮೀಕ್ಷೆ ಆರಂಭಿಸಿ ಇ-ಪೋರ್ಟಲ್ ಪ್ರಮಾಣಪತ್ರ ನೀಡುವ ಕಾರ್ಯ ದೇಶದೆಲ್ಲೆಡೆ ಪ್ರಗತಿಯಲ್ಲಿದೆ.
Related Articles
Advertisement
ಪಿಎಂ ಸ್ವಾಮಿತ್ವ ಯೋಜನೆಯಡಿ ಡ್ರೋನ್ ಮ್ಯಾಪಿಂಗ್ ಮಾಡಲಾಗುತ್ತದೆ. ಭೂಮಿಯ ನಿಜವಾದ ಮಾಲಕರಿಗೆ ಅದರ ಹಕ್ಕು ದೊರೆಕಿಸ ಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಮನೆ/ಕೃಷಿ ಸಾಲ ಸುಲಭವಾಗಿ ದೊರೆ ಯಲು ಆ ಆಸ್ತಿಗೆ ಸಂಬಂಧಿಸಿದ ಡಿಜಿಟಲ್ ಕಾರ್ಡ್‌ಗಳನ್ನು ರೈತರಿಗೆ ವಿತರಿ ಸುವುದು ಈ ಯೋಜನೆಯ ಉದ್ದೇಶ.
ಅರ್ಜಿ ಪ್ರಕ್ರಿಯೆ ಹೇಗೆ?
ಪಿಎಂ ಸ್ವಾಮಿತ್ವ ಯೋಜನೆಯ ಅಧಿ ಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ಫಾರ್ಮ್ನಲ್ಲಿರುವ ಮಾಹಿತಿ ಭರ್ತಿ ಮಾಡಬೇಕು. ಸಮೀಕ್ಷೆ ಮುಗಿದು ಇ- ಪ್ರಾಪರ್ಟಿ ಆದ ಬಳಿಕ ಆಸ್ತಿಯ ಮಾಲಕರ ಮೊಬೈಲ್‌ಗೆ ಸಂದೇಶ ಬರುತ್ತದೆ. ಪ್ರಾಪರ್ಟಿ ಕಾರ್ಡ್‌ಗಳನ್ನು ಕಂದಾಯ ಇಲಾಖೆ ಮೂಲಕ ಆಯಾ ಆಸ್ತಿ ಮಾಲಕರಿಗೆ ಹಂಚಲಾಗುತ್ತಿದೆ.
ಏನು ಲಾಭ?
ಇ-ಪ್ರಾಪರ್ಟಿ ಕಾರ್ಡ್ ಅನ್ನು ಪಡೆಯುವುದರಿಂದ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಅನುಕೂಲವಾಗುತ್ತದೆ. ಇತರ ಹಣಕಾಸು ಸೌಲಭ್ಯ ಪಡೆಯಲು ಕೂಡ ಇದನ್ನು ದಾಖಲಾತಿಯಾಗಿ ಬಳಸಿಕೊಳ್ಳಬಹುದು. ಅನೇಕ ಮಂದಿಗೆ ಈಗಲೂ ತಮ್ಮದೇ ಭೂಮಿಯಾದರೂ, ಮಾಲಕತ್ವ ಕುರಿತ ದಾಖಲಾತಿ ಇಲ್ಲದೆ ಅನೇಕ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ಗಳಿಂದಲೂ ಸಾಲ ಪಡೆಯಲು ದಾಖಲಾತಿಗಳ ಕೊರತೆ ಉಂಟಾಗುತ್ತಿದೆ. ಸ್ವಾಮಿತ್ವ ಯೋಜನೆಯಿಂದ ಈ ಸಮಸ್ಯೆ ನೀಗಲಿದೆ.
ಮುಂದುವರಿದ ಸರ್ವೇ
ದ.ಕ. ಜಿಲ್ಲೆಯಲ್ಲಿ ಸ್ವಾಮಿತ್ವ ಯೋಜನೆಯಡಿ 8 ಸಾವಿರ ಸರ್ವೇ ನಡೆದಿದ್ದು 1,500 ಮಂದಿಗೆ ಇ-ಪ್ರಾಪರ್ಟಿ ಕಾರ್ಡ್ ವಿತರಿಸಲಾಗಿದೆ. ಸರ್ವೇ ಕಾರ್ಯ ಮುಂದುವರಿದಿದೆ. –ಡಾ| ಕುಮಾರ್, ಸಿಇಒ ದ.ಕ. ಜಿ.ಪಂ.
ಕಿರಣ್ ಪ್ರಸಾದ್ ಕುಂಡಡ್ಕ