Advertisement

ಶೀಘ್ರ ಪಾಸ್‌ಪೋರ್ಟ್‌ 2.0 ಆರಂಭ: ಸಚಿವ ಜೈಶಂಕರ್‌

09:12 PM Jun 24, 2023 | Team Udayavani |

ನವದೆಹಲಿ: ಹೊಸ ಮತ್ತು ಮೇಲ್ದರ್ಜೆಗೇರಿಸಲಾದ ಇ-ಪಾಸ್‌ಪೋರ್ಟ್‌ಗಳನ್ನು ಒಳಗೊಂಡಿರುವ ಪಾಸ್‌ಪೋರ್ಟ್‌ ಸೇವಾ ಯೋಜನೆಯ ಎರಡನೇ ಹಂತವನ್ನು (ಪಿಎಸ್‌ಪಿ-ವರ್ಷನ್‌ 2.0) ಭಾರತ ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಘೋಷಿಸಿದ್ದಾರೆ.

Advertisement

“ಪಾಸ್‌ಪೋರ್ಟ್‌ ಸೇವಾ ದಿನ’ದ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಕಾಲಿಕ, ವಿಶ್ವಾಸಾರ್ಹ, ಪಾರಾದರ್ಶಕ ಮತ್ತು ದಕ್ಷ ರೀತಿಯಲ್ಲಿ ಪಾಸ್‌ಪೋರ್ಟ್‌ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಅಧಿಕಾರಿಗಳು ಒದಗಿಸಬೇಕು’ ಎಂದರು.

“ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ, ನಾಗರಿಕರಿಗೆ ಸುಧಾರಿತ ಪಾಸ್‌ಪೋರ್ಟ್‌ ಸೇವೆ, ಡಿಜಿಟಲ್‌ ಪರಿಸರ ವ್ಯವಸ್ಥೆ, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸೇವೆ, ಚಿಪ್‌ ಆಧಾರಿತ ಇ-ಪಾಸ್‌ಪೋರ್ಟ್‌ ಬಳಸಿ ಸುಗಮ ಸಾಗರೋತ್ತರ ಪ್ರಯಾಣ ಮತ್ತು ಸುಧಾರಿತ ಡೇಟಾ ಸುರಕ್ಷತೆ ಒದಗಿಸಲು ಅಧಿಕಾರಿಗಳು ಶ್ರಮಿಸಬೇಕು’ ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next