Advertisement
ಉಡುಪಿ ಜಿಲ್ಲೆಯಲ್ಲಿ 37,612 ಹಾಗೂ ದ.ಕ.ದಲ್ಲಿ 38,737 ಮಂದಿ ರೈತರು ಇ-ಕೆವೈಸಿ ಮಾಡಿಸದಿರುವುದು ಕಂಡು ಬಂದಿದೆ.
ನೋಂದಣಿ ಮಾಡಿಸಿ ಕೊಂಡಿರುವ ರೈತರು ವಾರ್ಷಿಕ 10 ಸಾವಿರ ರೂ. ಪಡೆಯುತ್ತಿದ್ದು, ಇನ್ನು ಅದಕ್ಕೆ ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಮಾಡಿಸಿಕೊಳ್ಳದವರಿಗೆ ಮುಂದೆ ಸೌಲಭ್ಯ ದೊರೆಯುವುದಿಲ್ಲ. ಎಲ್ಲಿ ಮಾಡಿಸಬಹುದು?
ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಒಟಿಪಿ ಮೂಲಕ ಇ-ಕೆವೈಸಿ ಮಾಡಿಸಬಹುದು. ಅಥವಾ ಫಲಾನುಭವಿಯೇ ಸ್ವತಃ ಪಿಎಂ ಕಿಸಾನ್ ಪೋರ್ಟಲ್ ಮೂಲಕ ಮೊಬೈಲ್‌ಗೆ ಒಟಿಪಿ ಪಡೆದು ಮಾಡಬಹುದು. ಹತ್ತಿರದ ಅಂಚೆ ಕಚೇರಿಯಲ್ಲಿ ಪೋಸ್ಟಲ್ ಅಕೌಂಟ್ ತೆರೆಯುವ ಮೂಲಕವೂ, ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಅನ್ನು ಪ್ಲೇ ಸ್ಟೋರ್‌ನಲ್ಲಿ ಡೌನ್ ಲೋಡ್ ಮಾಡಿಕೊಂಡು ಆ್ಯಪ್ ಮೂಲಕ ಫಲಾನುಭವಿ ತನ್ನ ಮುಖ ಚಹರೆಯನ್ನು ತೋರಿಸುವ ಮೂಲಕವೂ ಮಾಡಿಕೊಳ್ಳಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement