Advertisement

ದೇವಾಲಯಗಳಲ್ಲಿ ಇ-ಹುಂಡಿ ವ್ಯವಸ್ಥೆ: ಕೋಟ ಶ್ರೀನಿವಾಸ ಪೂಜಾರಿ

11:40 PM Aug 30, 2019 | Lakshmi GovindaRaj |

ಉಡುಪಿ: ರಾಜ್ಯದ ಎಲ್ಲ ದೇವಾಲಯಗಳ ಹುಂಡಿಯಲ್ಲಿ ಸಂಗ್ರಹವಾಗುವ ಮೊತ್ತವನ್ನು ಅತ್ಯಂತ ನಿಖರವಾಗಿ ಎಣಿಕೆ ಮಾಡುವ ಇ-ಹುಂಡಿ ವ್ಯವಸ್ಥೆಯನ್ನು ಇ ಗವರ್ನೆನ್ಸ್‌ ಇಲಾಖೆ ಮೂಲಕ ಜಾರಿಗೊಳಿಸಲಾಗುವುದು ಎಂದು ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

Advertisement

ದೇವಾಲಯದ ಹುಂಡಿಗಳಲ್ಲಿ ಭಕ್ತರು ಹಣ ಹಾಕಿದ ಕೂಡಲೇ ಅದರ ನಿರ್ದಿಷ್ಟ ಮೊತ್ತವನ್ನು ತೋರಿಸುವ ಹುಂಡಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಹಣ ಮಾತ್ರವಲ್ಲದೆ ಹುಂಡಿಯಲ್ಲಿ ಹಾಕುವ ಚಿನ್ನಾಭರಣಗಳ ತೂಕ ವನ್ನೂ ಸಹ ಇದರಲ್ಲಿ ಪರೀಕ್ಷಿಸ ಬಹುದಾಗಿದೆ. ಹುಂಡಿಯಲ್ಲಿ ಸಂಗ್ರಹ ವಾಗುವ ಮೊತ್ತ ನೇರ ವಾಗಿ ಸಂಬಂಧಪಟ್ಟ ದೇವಾಲಯದ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ. ಇದರಿಂದ ಭಕ್ತರು ನೀಡಿದ ಮೊತ್ತವನ್ನು ಅತ್ಯಂತ ಪಾರದರ್ಶಕವಾಗಿ ದೇಗುಲದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಲು ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ದೇವಾಲಯಗಳಲ್ಲಿ ವಿವಿಧ ಸೇವೆ ಗಳಿ ಗಾಗಿ ನೀಡುವ ರಸೀದಿಯನ್ನು ಏಕರೂಪದ ತಂತ್ರಾಂಶದ ಮೂಲಕ ನಿರ್ವಹಣೆ ಮಾಡಲು ನಿರ್ಧರಿಸಿದ್ದು, ಈಗಾಗಲೇ ಕೊಲ್ಲೂರು ಮುಂತಾದ ದೇವಾಲಯಗಳಲ್ಲಿ ಈ ವ್ಯವಸ್ಥೆ ಇದೆ. ಇದನ್ನು ರಾಜ್ಯದ ಎಲ್ಲ ದೇವಾಲಯಗಳಲ್ಲಿ ಅಳವಡಿಸಲಾಗುವುದು ಎಂದು ಸಚಿವರು ಹೇಳಿದರು. ರಾಜ್ಯದ ದೇವಾಲಯಗಳ ಕಾಮಗಾರಿ ಗಳ ಕುರಿತಂತೆ ಅಗತ್ಯ ಯೋಜನೆ ರೂಪಿಸಲು ಮತ್ತು ತಾಂತ್ರಿಕ ಅನು ಮೋದನೆ ನೀಡಲು ಪ್ರತ್ಯೇಕ ಎಂಜಿನಿಯರಿಂಗ್‌ ವಿಭಾಗ ತೆರೆಯಲು ಹಾಗೂ ಮುಜರಾಯಿ ಇಲಾಖೆಯಲ್ಲಿ 1,000 ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮುಜರಾಯಿ ಇಲಾಖೆಯಲ್ಲಿ 2 ಕೋಟಿ ರೂ.ವರೆಗಿನ ನಿರ್ಮಾಣ ಕಾಮಗಾರಿಗೆ ಮತ್ತು 1 ಕೋಟಿ ರೂ.ವರೆಗಿನ ಇತರ ಕಾಮ ಗಾರಿಗೆ ಅನುಮೋದನೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡುವ ಕುರಿತಂತೆ ಪರಿಶೀಲಿಸಲಾಗುವುದು ಮತ್ತು 25 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವ “ಬಿ’ ವರ್ಗದ ದೇವಸ್ಥಾನಗಳನ್ನು ತಕ್ಷಣವೇ “ಎ’ ವರ್ಗಕ್ಕೆ ಸೇರ್ಪಡೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ದೇವಾಲಯಗಳ ಮೂಲಕ ಗೋ ಸಂರಕ್ಷಣೆ: ರಾಜ್ಯದ “ಎ’ ವರ್ಗದ ದೇವಾಲಯ ಗಳ ಮೂಲಕ ಗೋ ಸಂರಕ್ಷಣೆ ಮಾಡುವ ಉದ್ದೇಶ ಹೊಂದಿದ್ದು, ಪ್ರಾಯೋಗಿಕವಾಗಿ ಕೊಲ್ಲೂರು ಮತ್ತು ಮಂದಾರ್ತಿ ದೇವಾಲಯಗಳಲ್ಲಿ ಗೋ ಸಂರಕ್ಷಣೆ ಕೇಂದ್ರ ಆರಂಭಿಸಲಾ ಗುತ್ತದೆ ಎಂದರು. ಈ ಕುರಿತಂತೆ ಕಂದಾಯ ಇಲಾಖೆಯ ಅಧಿಕಾರಿಗ ಳೊಂದಿಗೆ ಅಗತ್ಯ ಭೂಮಿಯನ್ನು ಗುರುತಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next