Advertisement
ಈ ಯೋಜನೆ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಹರಿಯಾಣಗಳಲ್ಲಿ ಯಶಸ್ವಿಯಾಗಿ ಅನು ಷ್ಠಾನಗೊಂಡಿದೆ. ಇ-ಕೋರ್ಟ್ ಹಾಗೂ ಭೂ ದಾಖಲೆಗಳು ಮತ್ತು ನೋಂದಣಿ ದತ್ತಾಂಶ ಗಳ ಜೋಡಣೆಯಿಂದ ಅಕ್ರಮ ಭೂವ್ಯವಹಾರಗಳು ಕಡಿಮೆ ಯಾಗ ಲಿದ್ದು, ಭೂವಿವಾದ ಪರಿಹಾರ ಸುಲಭ ವಾಗಲಿದೆ, ನ್ಯಾಯಾಲಯಗಳ ಮೇಲೆ ದಾವೆಗಳ ಹೊರೆಯೂ ತಗ್ಗಲಿದೆ ಎಂದು ಸರಕಾರ ಪ್ರತಿಪಾದಿಸಿದೆ.
ಕೇಂದ್ರ ಕಾನೂನು ಸಚಿವಾಲಯವು ಎಲ್ಲ ರಾಜ್ಯ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಗಳಿಗೆ ಪತ್ರ ಬರೆದು ಆಸ್ತಿಗಳ ನೋಂದಣಿ ದಾಖಲೆಗಳನ್ನು ಇ- ಕೋರ್ಟ್ ದಾಖಲೆಗಳೊಂದಿಗೆ ಮತ್ತು ರಾಷ್ಟ್ರೀಯ ನ್ಯಾಯಾಂಗ ದಾಖಲೆಗಳ ಗ್ರಿಡ್ (ಎನ್‌ಜೆಡಿಜಿ) ದಾಖಲೆಗಳೊಂದಿಗೆ ವಿಲೀನಗೊಳಿಸಲು ಎಲ್ಲ ರಾಜ್ಯ ಸರಕಾರಗಳಿಗೆ ಅನುಮತಿ ನೀಡಬೇಕು ಎಂದು ಸೂಚಿಸಿದೆ. ಭೂ ವ್ಯಾಜ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಆಸ್ತಿ ಖರೀದಿ ವೇಳೆ ಯಾರಿಗೂ ಕಾನೂನಾತ್ಮಕ ಅಡೆತಡೆಗಳು, ತೊಂದರೆಗಳು ಉಂಟಾಗದೆ ಸುಲಲಿತ ವ್ಯವಹಾರ ನಡೆಸಲು ಅನುಕೂಲ ವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
Related Articles
Advertisement
ವಿಶ್ವಸಂಸ್ಥೆಯ ಸಲಹೆಯ ಅನ್ವಯ ಜಾರಿಜಗತ್ತಿನ ಎಲ್ಲ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆಹಾರ, ನೈರ್ಮಲ್ಯ, ಲಿಂಗ ಸಮಾನತೆ, ಶಿಕ್ಷಣ ಮತ್ತಿತರ ಸುಮಾರು 17 ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವಂತೆ ವಿಶ್ವಸಂಸ್ಥೆ ಸುಸ್ಥಿರ ಗುರಿಗಳನ್ನು ನೀಡಿದೆ. ಅದರಲ್ಲೊಂದು ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ. ಅದಕ್ಕಾಗಿ ಆಸ್ತಿ ನೋಂದಣಿ ವ್ಯವಸ್ಥೆಯನ್ನು ಪಾರದರ್ಶಕವಾಗಿಸುವಂತೆ ವಿಶ್ವಸಂಸ್ಥೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ.