ಯಾದಗಿರಿ: ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಇ-ಜನ್ಮ ತಂತ್ರಾಂಶ ಅತ್ಯಂತ ಉಪಯುಕ್ತವಾಗಿದ್ದು,
ತರಬೇತಿ ಸದುಪಯೋಗ ಪಡೆದುಕೊಳ್ಳುವಂತೆ ಡಿಸಿ ಡಾ| ರಾಗಪ್ರಿಯ. ಆರ್ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶುಕ್ರವಾರ ಹಮ್ಮಿಕೊಂಡ ಜನನ-ಮರಣ ನೋಂದಣಿ ನಿಯಮಗಳು ಮತ್ತು ಇ-ಜನ್ಮ ತಂತ್ರಾಂಶ ನಿರ್ವಹಣೆ ಕುರಿತು ಪುನಃಶ್ಚೇತನ ತರಬೇತಿ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಜಾರಿಯಲ್ಲಿದ್ದ ನೋಂದಣಿ ಪ್ರಕ್ರಿಯೆಗಿಂತಲೂ ಇ-ಜನ್ಮ ತಂತ್ರಾಂಶದ ಮೂಲಕ ನಿರ್ವಹಿಸಲಾಗುವ ಜನನ-ಮರಣ ನೋಂದಣಿ ಪ್ರಕ್ರಿಯೆ ಸರಳವಾಗಿದೆ.
ಕಾರಣ ಜನನ-ಮರಣ ನೋಂದಣಿ ಪತ್ರಗಳಿಗಾಗಿ ಬರುವ ನಾಗರಿಕರಿಗೆ ಕೂಡಲೇ ದಾಖಲಾತಿ ನೀಡಬಹುದಾಗಿದೆ ಎಂದರು. ನೋಂದಣಿಗಾಗಿ ಗ್ರಾಮಲೆಕ್ಕಿಗರಲ್ಲಿ ಬರುವ ಸಾರ್ವಜನಿಕರಲ್ಲಿ ಇ-ಜನ್ಮ ತಂತ್ರಾಂಶದ ಮೂಲಕ ನೀಡುವ ಪತ್ರಗಳ ಕುರಿತು ಜಾಗೃತಿ ಮೂಡಿಸಬೇಕು.
ಕಂದಾಯ, ಆರೋಗ್ಯ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ವಿಳಂಬಕ್ಕೆ ಆಸ್ಪದವಿದಲ್ಲದಂತೆ ಈ ಪ್ರಮಾಣ ಪತ್ರಗಳನ್ನು ನೀಡುವ ಸೂಕ್ತ ತಾಂತ್ರಿಕ ಸಮಸ್ಯೆ, ನ್ಯೂನ್ಯತೆಗಳ ಬಗ್ಗೆ ತಿಳಿದುಕೊಂಡು ಇ-ಜನ್ಮ ಅನುಷ್ಠಾನದಲ್ಲಿ ಯಾವುದೇ ಕೊರತೆಯಾಗದಂತೆ ಎಚ್ಚರವಹಿಸುವಂತೆ ಕಿವಿಮಾತು ಹೇಳಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ್, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ್, ಇ-ಜನ್ಮ
ಸಾಫ್ಟ್‌ವೇರ್‌ನ ಪ್ರಾಜೆಕ್ಟ್ ಮ್ಯಾನೇಜರ್ ಮಧುಕರ್ ಮಾತನಾಡಿದರು. ಜಿಲ್ಲಾ ಸಾಂಖೀಕ ಅ ಧಿಕಾರಿ ಹಾಗೂ ಅಪರ ಜಿಲ್ಲಾ ಜನನ-ಮರಣ ನೋಂದಣಾ ಧಿಕಾರಿ ಗೋಪಾಲ್ ವಂಟಿ, ಗ್ರಾಮಲೆಕ್ಕಿಗರು, ಆರೋಗ್ಯ ಇಲಾಖೆ, ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ತರಬೇತಿಯಲ್ಲಿ ಭಾಗವಹಿಸಿದ್ದರು