Advertisement

19ರಂದು ಮೆಗಾ ಇ–ಲೋಕ್‌ ಅದಾಲತ್

07:14 PM Sep 11, 2020 | Team Udayavani |

ಚಿತ್ರದುರ್ಗ: ಉಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಸೆ. 19 ರಂದು ಮೆಗಾ ಇ–ಲೋಕ್‌ ಅದಾಲತ್‌ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಎಸ್‌. ಚೇಗರೆಡ್ಡಿ ತಿಳಿಸಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 31,042 ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ 15,090 ಸಿವಿಲ್‌ ಪ್ರಕರಣಗಳು ಹಾಗೂ 15,952 ಕ್ರಿವಿನಲ್‌ ಪ್ರಕರಣಗಳಿರುತ್ತವೆ. ಮೆಗಾ ಈ-ಲೋಕ್‌ ಅದಾಲತ್‌ನಲ್ಲಿ 4087 ಪ್ರಕರಣಗಳನ್ನು ಇತ್ಯರ್ಥಗೊಳಿಸಲು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

4087 ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳಬಹುದಾದ ಅಪರಾಧ ಪ್ರಕರಣಗಳು-617, ಚೆಕ್‌ಬೌನ್ಸ್‌ ಪ್ರಕರಣಗಳು-589, ಬ್ಯಾಂಕ್‌ ಪ್ರಕರಣಗಳು-187, ಹಣ ವಸೂಲಿ-230, ಅಪಘಾತ ಪ್ರಕರಣಗಳು-285, ಕಾರ್ಮಿಕ-6, ವಿದ್ಯುತ್‌ ಸಂಬಂ ಧಿತ ಪ್ರಕರಣಗಳು-40, ಎಂಎಂಡಿಆರ್‌ ಪ್ರಕರಣಗಳು-130, ಜೀವನಾಂಶ ಪ್ರಕರಣಗಳು-117 ಹಾಗೂ ಇತರೆ ಸಿವಿಲ್‌-783 ಪ್ರಕರಣಗಳು ಮತ್ತು ಕಿರುಕುಳ ಅರ್ಜಿ, ಜನನ ಮರಣ ನೊಂದಣಿ ಕಾಯ್ದೆ ಸೇರಿ 1103 ಪ್ರಕರಣಗಳು ಸೇರಿದಂತೆ ಒಟ್ಟ 4087 ಪ್ರಕರಣಗಳನ್ನು ಇತ್ಯರ್ಥಕ್ಕೆ ತೆಗೆದುಕೊಂಡಿದ್ದು, ಈ-ಲೋಕ್‌ ಅದಾಲತ್‌ ಮೂಲಕ ಇತ್ಯರ್ಥಪಡಿಸಲಾಗುವುದು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ. ಗಿರೀಶ ಮಾತನಾಡಿ, ಲೋಕ ಅದಾಲತ್‌ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇಚ್ಛಿಸಿದ್ದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಆನ್‌ಲೈನ್‌, ವಿಡಿಯೋ ಕಾನ್ಫರೆನ್ಸ್‌, ಈ-ಮೇಲ್‌, ಎಸ್‌ಎಂಎಸ್‌, ವಾಟ್ಸ್‌ಆ್ಯಪ್‌, ಎಲೆಕ್ಟ್ರಾನಿಕ್‌ ಮೋಡ್‌ ಮುಖಾಂತರ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬೇಕು. ಆ ಪ್ರಕರಣಗಳನ್ನು ತೆಗೆದುಕೊಂಡು ಕಕ್ಷಿದಾರರೊಂದಿಗೆ ವೀಡಿಯೋ ಕಾನ್ಫರೆನ್ಸ್‌ನೊಂದಿಗೆ ವ್ಯವಹರಿಸಿ ರಾಜಿಯಾಗುವ ಸಂದರ್ಭಬಂದಾಗ ಅವುಗಳನ್ನು ರಾಜಿ ಮಾಡಿಸಲಾಗುವುದು ಎಂದು ತಿಳಿಸಿದರು.

ಹೊಳಲ್ಕೆರೆಯಲ್ಲೂ ಈ-ಲೋಕ್‌ ಅದಾಲತ್‌ :  ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸೆ. 19 ರಂದು ಮೆಗಾ ಈ ಲೋಕ ಅದಾಲತ್‌ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯಿಂದ ಆಯೋಜಿಸಲಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೇಮಾ ವಸಂತ ರಾವ್‌ ಪವಾರ್‌ ತಿಳಿಸಿದ್ದಾರೆ. ಈ-ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇಚ್ಛಿಸಿದಲ್ಲಿ ಜಿಲ್ಲಾ ಮತ್ತು ತಾಲೂಕು ಸೇವೆಗಳ ಪ್ರಾಧಿಕಾರ ಸೇವೆಗಳ ಸಮಿತಿಗಳಿಗೆ ಆನ್‌ಲೈನ್‌, ವೀಡಿಯೋ ಕಾನ್ಫರೆನ್ಸ್‌,

Advertisement

ಈ-ಮೇಲ್‌, ಎಸ್‌ಎಂಎಸ್‌, ವಾಟ್ಸ್‌ಆ್ಯಪ್‌, ಎಲೆಕ್ಟ್ರಾನಿಕ್‌ ಮೋಡ್‌ ಮೂಲಕ ಮಾಹಿತಿ ಪಡೆದುಕೊಳ್ಳಬೇಕು. ಮೆಗಾ ಈ-ಲೋಕ ಅದಾಲತ್‌ನಲ್ಲಿ ಸಿವಿಲ್‌ ನ್ಯಾಯಾಲಯದ ನ್ಯಾಯಾ ಧೀಶ ರವಿಕುಮಾರ್‌, ನ್ಯಾಯಾ ಧೀಶ ನಾಗೇಶ್‌, ವಕೀಲರ ಸಂಘದ ಅಧ್ಯಕ್ಷ ಜಿ.ಈ. ರಂಗಸ್ವಾಮಿ, ಉಪಾಧ್ಯಕ್ಷ ಎಸ್‌.ಜಗದೀಶ್‌, ಕಾರ್ಯದರ್ಶಿ ಪ್ರದೀಪ್‌ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next