ರೋಮಾಂಚನ, ಸಂತೋಷದ ಅನುಭವವನ್ನು ಇಂದಿನ ದಿನಗಳಲ್ಲಿ ಕಾಣಲಾರೆವು.
Advertisement
ಇಂದಿನ ಇ-ಮೇಲ್ ಮೊಬೈಲ್ ಪ್ರವಾಹ ದಲ್ಲಿ ವ್ಯಕ್ತಿಯ ಸ್ವ-ಹಸ್ತಾಕ್ಷರದಲ್ಲಿರುತ್ತಿದ್ದ ಪತ್ರಗಳ ಓದಿನ ಸಂಭ್ರಮವೆಲ್ಲ ಕೊಚ್ಚಿ ಹೋಗಿದೆ. ಇಂದು ವಿದ್ಯಾವಂತರ ಸಂಖ್ಯೆಯೇನೋ ಹಿಂದಿಗಿಂತ ಹೆಚ್ಚಿದೆ. ಆದರೆ ಪತ್ರ ಬರೆಯುವವರ ಸಂಖ್ಯೆ ಮಾತ್ರ ಬಹಳಷ್ಟು ಕಡಿಮೆಯಾಗಿದೆ. ಕೆಲವರಿಗೆ ಪತ್ರ ಬರೆಯು ವುದೆಂದರೇನೇ ಅದೇನೋ ಅಲರ್ಜಿ, ಪತ್ರ ಬರೆಯುವುದಕ್ಕೆ ಪುರುಸೊತ್ತಾದರೂ ಎಲ್ಲಿದೆ ಎಂಬುದೇ ಬಹುತೇಕ ಮಂದಿಯ ಪ್ರಶ್ನೆ. ಒಂದೊಮ್ಮೆ ಪತ್ರ ಬರೆದರೂ ಅದನ್ನು ಪಡೆದವರಿಗೆ ಓದುವುದಕ್ಕೆ ಪುರುಸೊತ್ತು, ತಾಳ್ಮೆ, ಸಮಯಬೇಕಲ್ಲ! ಅಂತೂ ಪತ್ರ ಬರೆಯುವ ಹವ್ಯಾಸವೇ ಇಂದು ಜನಮನದಿಂದ ಕಾಣೆಯಾಗುತ್ತಿದೆ.
ಪತ್ರವು ಪರಿಣಾಮಕಾರೀ ಸಂವಹನ ಮಾಧ್ಯ ಮವಾಗಿದ್ದು, ಗೆಳೆತನವನ್ನು ಪ್ರೋತ್ಸಾಹಿಸಲು, ಏಕಾಂಗಿತನವನ್ನು ಹೋಗಲಾಡಿಸಲು, ಪರಸ್ಪರ ಅಭಿಪ್ರಾಯ, ತಿಳಿವಳಿಕೆ, ಭಾವನೆಗಳನ್ನು ಹಂಚಿ ಕೊಳ್ಳಲು ಇದು ಬಹುಮುಖ್ಯ ಸಾಧನವಾಗಿದೆ. ಸ್ವ ಹಸ್ತಾಕ್ಷರದಲ್ಲಿರುತ್ತಿದ್ದ ಪತ್ರಗಳಿಗೂ ಯಾಂತ್ರಿ ಕವಾಗಿ ಟೈಪಿಸಿದ ಪತ್ರಗಳಿಗೂ ಬಹಳಷ್ಟು ವ್ಯತ್ಯಾ ಸವಿದೆ. ಪತ್ರ ಬರವಣಿಗೆಯಿಂದ ಅಕ್ಷರಜ್ಞಾನ, ಬರವಣಿಗೆಯ ಅಂದ ಸ್ಪಷ್ಟತೆ ಹೆಚ್ಚುತ್ತದೆ. ಸೃಜನ ಶೀಲತೆ ಬೆಳೆಯುತ್ತದೆ. ತನ್ನ ಅಭಿಪ್ರಾಯ, ನಿಲು ವನ್ನು ಸ್ಪಷ್ಟವಾಗಿ ತಿಳಿಸಲು ಪತ್ರ ಬರವಣಿಗೆಯು ನೆರವಾಗುತ್ತದೆ. ಒಬ್ಬ ವ್ಯಕ್ತಿಯನ್ನು ಆತನ ಮಿತ್ರ ರಿಂದಷ್ಟೇ ಅಲ್ಲದೇ ಆತ ಬರೆದ ಪತ್ರಗಳಿಂದಲೂ ತಿಳಿದುಕೊಳ್ಳಬಹುದು. ಪತ್ರಲೇಖನವು ಬರೆ ಯುವವರಿಗೂ, ಓದುವವರಿಗೂ ಸಂತಸ ನೀಡುವ ಕಲೆಯಾಗಿದೆ. ಪ್ರೇಮ ಪತ್ರಗಳಿ ರಬಹುದು, ಸಾರ್ವಜನಿಕ ಹಿಸಾಸಕ್ತಿಯ ಪತ್ರ ಗಳಿರಬಹುದು, ಕಚೇರಿಗಳಿಗೆ ಬರೆದ ಪತ್ರಗಳಿರ ಬಹುದು, ಪ್ರತಿಯೊಂದು ಬಗೆಯ ಪತ್ರಗಳಿಗೂ ಅದರದ್ದೇ ಆದ ವೈವಿಧ್ಯ, ವೈಶಿಷ್ಟ್ಯ ಇರುತ್ತದೆ. ಇದೊಂದು ಕ್ರಿಯಾಶೀಲ ಹವ್ಯಾಸವಾಗಿದ್ದು ಬರೆದು ಮುಗಿಸಿದಾಗ ಬರೆದವರಿಗೆ ಒಂದು ಬಗೆಯ ನಿರಾಳತೆ, ಸಮಾಧಾನ ಉಂಟಾ ಗುತ್ತದೆ. ಪ್ರೀತಿ ಪಾತ್ರರ, ಸ್ನೇಹಿತರ ಪತ್ರಗಳನ್ನು ರಕ್ಷಿಸಿಟ್ಟುಕೊಂಡು ಅದನ್ನು ಮತ್ತೆ ಮತ್ತೆ ಓದಿ ಸಂತೋಷ ಪಡಬಹುದು. ಇವು ದಾಖಲೆ ಯಾಗಿ ಉಳಿದು ಸಮಯ ಸಿಕ್ಕಾಗಲೆಲ್ಲ ಹಳೆಯ ಪತ್ರಗಳನ್ನು ಮತ್ತೂಮ್ಮೆ ಓದಿದಾಗ ಹಳೆಯ ನೆನಪುಗಳೆಲ್ಲ ಮರುಕಳಿಸಿ ಮನಸ್ಸಿಗೆ ಮುದವಾಗುತ್ತದೆ, ಹಿತಾನುಭವವಾಗುತ್ತದೆ. ಥಟ್ಟನೆ ಬಂದು ಅಚ್ಚರಿ ಮೂಡಿಸುವ ಮೊಬೈಲ್ ಸಂದೇಶಗಳಲ್ಲಿ ಈ ಬಗೆಯ ಸಂತೋಷವನ್ನು ಕಾಣಲಾರೆವು.
Related Articles
Advertisement