Advertisement

ಸಂಭ್ರಮದ ದ್ಯಾವಮ್ಮ ದೇವಿ ಜಾತ್ರೆ

12:04 PM Apr 30, 2022 | Team Udayavani |

ಯಡ್ರಾಮಿ: ಪಟ್ಟಣದ ಆರಾಧ್ಯ ದೇವತೆ ದ್ಯಾವಮ್ಮ ದೇವಿ ಜಾತ್ರಾ ಮಹೋತ್ಸವ ಶುಕ್ರವಾರ ಸಾವಿರಾರು ಭಕ್ತರ ಮಧ್ಯೆ ಸಡಗರ-ಸಂಭ್ರಮದಿಂದ ಜರುಗಿತು.

Advertisement

ಶುಕ್ರವಾರ ಬೆಳಗ್ಗೆ ಗ್ರಾಮದೇವತೆಯ ಗಂಗಾಸ್ನಾನವಾದ ಬಳಿಕ ಗ್ರಾಮದ ನಡುಗಡ್ಡೆಯಲ್ಲಿ ಆಸೀನಳಾಗಿ ಭಕ್ತರಿಗೆ ದರ್ಶನ ನೀಡಿದಳು. ಭಕ್ತರು ದೇವತೆಗೆ ವಿವಿಧ ರೀತಿಯ ಹರಕೆ ತೀರಿಸಿದರು. ಜಾತ್ರೆ ಹಿನ್ನೆಲೆಯಲ್ಲಿ ಗುರುವಾರ ಮುಂಜಾನೆಯಿಂದಲೇ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರೆಲ್ಲರೂ ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಸಂಭ್ರಮದಿಂದ ದೇವತೆಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಲಕ್ಕಮ್ಮ ದೇವಸ್ಥಾನ ಆವರಣದಲ್ಲಿ (ನಡುಗಡ್ಡೆ) ಸಂಜೆ 5ಗಂಟೆ ವರೆಗೆ ಭಕ್ತರಿಗೆ ದರ್ಶನ ನೀಡಿ ನೂತನ ಶಿಲಾ ದೇವಸ್ಥಾನಕ್ಕೆ ಭಾಜಾ-ಭಜಂತ್ರಿ, ಡೊಳ್ಳು, ಸುಮಂಗಲೆಯರ ಕುಂಭ, ಕಳಸದೊಂದಿಗೆ ಉತ್ಸವ ಮೂರ್ತಿ ಹೊತ್ತ ರಥ ಮೆರವಣಿಗೆಯೊಂದಿಗೆ ಸಾಗಿ ಗರ್ಭ ಗುಡಿಯಲ್ಲಿ ದೇವತೆ ಮೂರ್ತಳಾದ ನಂತರ ಮಹಾ ಮಂಗಳಾರತಿಯೊಂದಿಗೆ ಎರಡು ದಿನಗಳ ಜಾತ್ರಾ ಉತ್ಸವ ಸಂಪನ್ನಗೊಂಡಿತು.

ಮುಖಂಡರಾದ ಸಿದ್ರಾಮಪ್ಪಗೌಡ ಮಾಲಿಪಾಟೀಲ, ಮಲ್ಹಾರಾವ್‌ ಕುಲಕರ್ಣಿ, ಶಿವಶರಣಯ್ಯ ಪುರಾಣಿಕ, ಮಹಾಲಿಂಗಪ್ಪಗೌಡ ಬಂಡೆಪ್ಪಗೋಳ, ಗುರುಬಸಪ್ಪ ಸಾಹು ಸಣ್ಣಳ್ಳಿ, ಲಕ್ಷ್ಮೀಕಾಂತ ಸೋನಾರ, ವಿಠ್ಠಲ ಸಾಹು ಪತ್ತಾರ, ಪ್ರಕಾಶ ಸಾಹು ಬೆಲ್ಲದ, ಶಂಭು ಸಾಹು ತಾಳಿಕೋಟಿ, ಚನ್ನವೀರ ತಾಳಿಕೋಟಿ, ಬಸಯ್ಯಸ್ವಾಮಿ ಹೊರಗಿನಮಠ, ಚನ್ನವೀರಪ್ಪಗೌಡ ಬಂಡೆಪ್ಪಗೋಳ, ಅಪ್ಪುಗೌಡ ಮಾಲಿಪಾಟೀಲ, ಆನಂದ ಯತ್ನಾಳ, ಮಲ್ಲಿಕಾರ್ಜುನ ಯಾದಗಿರಿ, ಸತೀಶ ಬಂಡೆಪ್ಪಗೋಳ, ಬಸವರಾಜ ಗುರುಶೆಟ್ಟಿ, ಇಬ್ರಾಹೀಂ ಉಸ್ತಾದ, ಬಾಬಾಫರೀದ ಮಳ್ಳಿಕರ್‌, ಚಂದ್ರಕಾಂತ ಕುಸ್ತಿ, ಮಂಜುನಾಥ ಪುರಾಣಿಕ, ಶ್ರೀ ಗ್ರಾಮದೇವಿ ದೇವಸ್ಥಾನ ಕಮಿಟಿ ಸದಸ್ಯರು, ಭಕ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next