Advertisement
ದೇವಸ್ಥಾನದಿಂದ ಆರಂಭಗೊಂಡ ದ್ಯಾಮವ್ವ-ದುರ್ಗವ್ವ ಪ್ರತಿಷ್ಠಾಪಿಸಿದ್ದ ರಥೋತ್ಸವವು ಸಂಚರಿಸಿದ ಮಾರ್ಗಗಳೆಲ್ಲವೂ ಭಂಡಾರದಿಂದ ಮಿಂದೆದ್ದವು. ಭಕ್ತರಂತೂ ದೇವಿಯರ ಜಯಘೋಷಣೆಗಳ ಮಧ್ಯೆ ಭಕ್ತಿಯಿಂದ ಭಂಡಾರದಲ್ಲಿ ಮಿಂದೆದ್ದರು. ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದಾರಿ ಉದ್ದಕ್ಕೂ ದೇವಿಯರ ಮೂರ್ತಿಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಕಾಮನಕಟ್ಟಿ, ರವಿವಾರ ಪೇಟೆ, ಶ್ರೀನಗರೇಶ್ವರ ದೇವಸ್ಥಾನ, ಶ್ರೀ ಕಾಳಮ್ಮ ದೇವಸ್ಥಾನ, ಮಟ್ಟಿ ಪರಪ್ಪನಕೂಟದ ಮಾರ್ಗವಾಗಿ ಮಹಾರಥೋತ್ಸವವು ರಾತ್ರಿ ಹೊತ್ತಿಗೆ ದೇವಸ್ಥಾನಕ್ಕೆ ಮರಳಿ ಸಂಪನ್ನಗೊಂಡಿತು. ವಿವಿಧ ಜಾನಪದ ಕಲಾವಿದರು ಹಾಗೂ ಮಜಲಿನ ಕಲಾ ತಂಡಗಳ ಪ್ರದರ್ಶನಗಳು ಗಮನ ಸೆಳೆದವು.
Advertisement
ಶತಮಾನದ ಬಳಿಕ ದ್ಯಾಮವ್ವ-ದುರ್ಗವ್ವ ಜಾತ್ರೆ
04:26 PM Dec 25, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.