Advertisement

ಭಾಷೆ ಸಂಸ್ಕೃತಿಯ ವಾಹಕ: ಡಾ|ಮಹಾದೇವ

05:13 PM Feb 07, 2021 | Team Udayavani |

ಧಾರವಾಡ: ಭಾಷೆಯು ಸಂಸ್ಕೃತಿಯ ವಾಹಕವಾಗಿದ್ದು, ಅದರಲ್ಲೂ ಸಂಸ್ಕೃತ ಭಾಷೆಯು ಭಾರತೀಯ ಸಂಸ್ಕೃತಿಯನ್ನು ನಮ್ಮ ದೇಶದಲ್ಲಷ್ಟೇ ಅಲ್ಲ ವಿಶ್ವದ ವಿವಿಧ ದೇಶಗಳ ಪಯಂìತ ಪಸರಿಸುವಂತೆ ಮಾಡಿದೆ ಎಂದು ಕವಿವಿಯ ವಿಶ್ರಾಂತ ಕುಲಸಚಿವ ಡಾ| ಮಹಾದೇವ ಜೋಶಿ ಹೇಳಿದರು.

Advertisement

ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಸಂಸ್ಕೃತ, ಪ್ರಾಕೃತ, ಮತ್ತು ಯೋಗ ಅಧ್ಯಯನ ವಿಭಾಗಗಳ ಸಹಯೋಗದಲ್ಲಿ ಭಾರತೀಯ ಭಾಷಾ ಸಂವರ್ಧನೆಗೆ ಸಂಸ್ಕೃತ ಭಾಷೆಯ ಕೊಡುಗೆ’ ವಿಷಯ ಕುರಿತು ರಾಷ್ಟಿÅàಯ ವಿಚಾರ ಸಂಕಿರಣ (ವೆಬನಾರ್‌) ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕೃತ ಭಾಷೆ ಎಲ್ಲ ಭಾಷೆಗಳಿಗೆ ಮೂಲವಾಗಿದ್ದು, ಸಂಸ್ಕೃತ ಭಾಷೆ ಸಂಸ್ಕೃತಿಗಳ ಮಿಶ್ರಣವಾಗಿದೆ. ವಿದ್ಯಾರ್ಥಿಗಳು ಸಂಸ್ಕೃತ ಭಾಷೆ ಕುರಿತು ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿದರು.

ಕರ್ನಾಟಕ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ಎಂ.ಎಸ್‌ ತರ್ಲಗಟ್ಟಿ ಮಾತನಾಡಿ, ಸಂಗೀತಕ್ಕೆ ಯಾವುದೇ ಭಾಷೆ ಇಲ್ಲ, ಆದರೆ ಸಂಗೀತ ವಿದ್ಯೆ ಹೇಗಿರಬೇಕೆಂಬುದನ್ನು ಸಂಸ್ಕೃತ ಭಾಷೆ  ತಿಳಿಸಿಕೊಟ್ಟಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಸಿಡಿ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ|ಡಿ.ಬಿ.ಕರಡೋಣಿ ಮಾತನಾಡಿ, ಸಂಗೀತ ಮತ್ತು ಸಂಸ್ಕೃತ ಸಂಸ್ಕೃತಿಯ ಪ್ರತೀಕಗಳಾಗಿವೆ. ಸಂಸ್ಕೃತ ಭಾಷೆ ಪ್ರಾಚೀನ ಭಾಷೆಯಾಗಿದೆ. ಯೋಗ ಮತ್ತು ಸಂಸ್ಕೃತ ಎರಡು ಒಂದೇ ನಾಣ್ಯದ ಮುಖವಿದ್ದಂತೆ. ಯೋಗ-ಸಂಸ್ಕೃತ ಭಾಷೆ ಇಂದಿಗೂ ತನ್ನ ಪ್ರಸ್ತುತತೆ ಉಳಿಸಿಕೊಂಡಿದೆ ಎಂದರು.

Advertisement

ಕೇರಳದ ಎರ್ನಾಕುಲಂ ವಿದ್ಯಾಪೀಠದ ಡಾ|ರಾಮಕೃಷ್ಣ ಪೇಜತ್ತಾಯ ಆಶಯ ಭಾಷಣ ಮಾಡಿದರು. ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಡಾ|ಚಂದ್ರಕಲಾ ಕೊಂಡಿ, ಗೋವಾದ ವಿದ್ವಾನ್‌ ಮಹಾಬಲ ಭಟ್ಟ, ವಿಭಾಗದ ಮುಖ್ಯಸ್ಥೆ ಡಾ|ರಜನಿ. ಹೆಚ್‌. ಮಾತನಾಡಿದರು.

ಇದನ್ನೂ ಓದಿ :ವಿವಿಧ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

ಡಾ|ಅಮರನಾಥ ಶರ್ಮ ವೇದಘೋಷ ಮತ್ತು ಶ್ರೇಯಾ, ದೀಪಾ, ಕೃತಿಕಾ ಪ್ರಾರ್ಥಿಸಿದರು. ಡಾ|ಪ್ರಕಾಶ ಹೆಗಡೆ, ವಿದ್ವಾನ್‌ ವಾಚಸ್ಪತಿ ಶಾಸ್ತ್ರೀ ಜೋಶಿ, ಡಾ|ಸುಜಾತಾ ಎಂ. ಎನ್‌, ಡಾ| ಸಿ.ಆರ್‌.ಲಮಾಣಿ, ಡಾ| ಪ್ರೇಮಾ ನಡಕಟ್ಟಿ, ಡಾ|ಅನ್ನಪೂರ್ಣಾ ಹೆಗಡೆ, ಡಾ|ಜ್ಯೋತಿ ಗೋಕಾವಿ, ವಿದುಷಿ ಲತಾ ಪಾಟೀಲ, ಡಾ|ಗೀತಾ ಕುಂಶಿಕರ್‌, ಡಾ| ವ ಡಾ|ಮೇಗೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next