ಜಮೈಕಾ: ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಡ್ವೇನ್ ಬ್ರಾವೋ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿದ್ದಾರೆ.
2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಚಾಂಪಿಯನ್ ಬ್ರಾವೋ ನಂತರ ವಿದೇಶಿ ಟಿ ಟ್ವೆಂಟಿ ಲೀಗ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಸದ್ಯ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿರುವ ಡಿಜೆ ಬ್ರಾವೋ, ಕೋಚ್ ಫಿಲ್ ಸಿಮನ್ಸ್ ಮತ್ತು ಕೈರನ್ ಪೊಲಾರ್ಡ್ ನಾಯಕತ್ವದಡಿಯಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಡ್ವೇನ್ ಬ್ರಾವೋ 2018ರಲ್ಲಿ ನಿವೃತ್ತಿ ಘೋಷಿಸಿದ್ದರೂ ಅವರು ವೆಸ್ಟ್ ಇಂಡೀಸ್ ತಂಡದ ಪರ ಕಡೆಯದಾಗಿ ಆಡಿದ್ದು 2016ರ ಸಪ್ಟೆಂಬರ್ ನಲ್ಲಿ. ಪಾಕಿಸ್ಥಾನ ವಿರುದ್ದದ ಯುಎಇ ಪಂದ್ಯದಲ್ಲಿ ಕಡೆಯದಾಗಿ ಸೀನಿಯರ್ ಬ್ರಾವೋ ಕಾಣಿಸಿಕೊಂಡಿದ್ದರು.
ವೆಸ್ಟ್ ಇಂಡೀಸ್ ಜೆರ್ಸಿಯಲ್ಲಿ ಸುಮಾರು 40 ಟೆಸ್ಟ್, 164 ಏಕದಿನ ಪಂದ್ಯ ಮತ್ತು 66 ಚುಟುಕು ಮಾದರಿ ಪಂದ್ಯಗಳನ್ನು ಬ್ರಾವೋ ಆಡಿದ್ದಾರೆ.