Advertisement
ಕಾಂಗ್ರೆಸ್ ನಾಯಕರು ತಮ್ಮನ್ನು ಸಂಪರ್ಕ ಮಾಡಿರುವುದು ನಿಜ ಎಂದಿರುವ ಡಿವಿಎಸ್ ಬಿಜೆಪಿಯ ಕೆಲವು ನಾಯಕರ ವಿರುದ್ಧ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ವಿಚಾರ ದಲ್ಲಿ ಸಿಎಂ ಡಿಸಿಎಂ ನಡುವೆ ಒಮ್ಮತ ಮೂಡಿಲ್ಲ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಬಿಜೆಪಿ ವಿರುದ್ಧ ಅಸಮಾ ಧಾನಗೊಂಡಿದ್ದರೆಂದು ಕಾಂಗ್ರೆಸ್‌ಗೆ ಕರೆತಂದದ್ದೂ ಅಲ್ಲದೆ, ವಿಧಾನಪರಿಷತ್ ಸದಸ್ಯ ಸ್ಥಾನವನ್ನು ಕೂಡ ಕೊಡಲಾಗಿತ್ತು. ಆದರೆ ಕೊನೆಗೆ ಎಲ್ಲವನ್ನೂ ಬಿಟ್ಟು ಬಿಜೆಪಿಗೆ ಮರಳಿದರು. ಇದರಿಂದ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಮುಜುಗರ ಆಗಿದೆ. ಹಲವಾರು ವರ್ಷಗಳಿಂದ ಬಿಜೆಪಿಯಲ್ಲೇ ಇರುವ ಸದಾನಂದ ಗೌಡರನ್ನು ಕರೆತಂದರೆ ಮತ್ತೆ ಮುಜುಗರ ಅನುಭವಿಸಬೇಕಾಗುತ್ತದೆ. ಹೀಗಾಗಿ ಈ ದುಸ್ಸಾಹಸಕ್ಕೆ ಕೈಹಾಕುವುದು ಬೇಡ ಎಂಬ ನಿಲುವಿಗೆ ಸಿಎಂ ಬಂದಂತಿದೆ.
Related Articles
ಈ ನಡುವೆ ಕೊಪ್ಪಳದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರ ಗೊಂಡಿರುವ ಸಂಗಣ್ಣ ಕರಡಿ ಬುಧವಾರ ಸಭೆ ನಡೆಸಿ ತಮ್ಮ ಮುಂದಿನ ನಿಲುವು ಪ್ರಕಟಿಸುವುದಾಗಿ ಹೇಳಿದ್ದರು. ಅವರ ನ್ನೂ ಕಾಂಗ್ರೆಸ್ ಸೆಳೆಯುವ ಪ್ರಯತ್ನ ನಡೆಸಿದೆ ಎಂಬ ಚರ್ಚೆಗಳು ಇದ್ದವು. ಆದರೆ ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದು, ಕಾಂಗ್ರೆಸ್‌ನ ಶಿವರಾಜ್ ತಂಗಡಗಿ
ಸಹಿತ ಅನೇಕರು ಸಂಪರ್ಕಿಸಿದ್ದಾರೆ ಯೇ ವಿನಾ ಕಾಂಗ್ರೆಸ್ ಟಿಕೆಟ್ ಬಗ್ಗೆಯಾಗಲೀ, ಪಕ್ಷಕ್ಕೆ ಬರುವಂತೆ ಯಾಗಲೀ ಯಾರೂ ಪ್ರಸ್ತಾವಿಸಿಲ್ಲ ಎಂದಿದ್ದಾರೆ.
Advertisement
ಬಿಜೆಪಿಯಲ್ಲಿರುವ ಅಸಮಾಧಾನಿ ತರನ್ನು ಕರೆತರುವ ವಿಚಾರವನ್ನು ಕೈ ಬಿಡುವುದೇ ಒಳ್ಳೆಯದು. ಪಕ್ಷದಲ್ಲಿ ಸ್ಪರ್ಧಿಗಳಿಲ್ಲದೆ ಸೆಳೆಯುತ್ತಿದ್ದೇವೆ ಎನ್ನುವ ಸಂದೇಶ ರವಾನೆಯಾಗುತ್ತಿದೆ. ಅಲ್ಲದೆ ಪಕ್ಷಕ್ಕೆ ಬಂದವರಿಗೆ ಸ್ಥಾನಮಾನ ಕೊಡಲೇಬೇಕಾಗುತ್ತದೆ. ಇದರಿಂದ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಭುಗಿಲೇಳಬಹುದು. ಎಲ್ಲವನ್ನೂ ನಿಭಾಯಿಸಿ ಸ್ಥಾನಮಾನ ಕೊಟ್ಟರೂ ಕೆಲವು ಸಮಯದ ಆನಂತರ ಬಿಜೆಪಿಗೆ ಮರಳಿದರೆ ಕಷ್ಟ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ಮನೆಯಲ್ಲಿ ನಡೆಯುತ್ತಿದೆ.