ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಮನವಿ ಮಾಡಿದರು.
Advertisement
ಶುಕ್ರವಾರ ಬೆಳಗ್ಗೆ ಯಶವಂತಪುರ ವಿಧಾನಸಭೆ ಕ್ಷೇತ್ರದ ತಾವರೆಕೆರೆ ಹೋಬಳಿ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸಿದ ನಂತರ ಅವರುಸುದ್ದಿಗಾರರೊಂದಿಗೆ ಮಾತನಾಡಿದರು.
ಮೂಲಕ ನರೇಂದ್ರ ಮೋದಿಯವರು ಜಗತ್ತಿಗೆ ಸಾರಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕೇಂ ದ್ರದಲ್ಲಿ ಆಡಳಿತದಲ್ಲಿದ್ದಾಗ ಸೇನೆಗೆ ಅಗತ್ಯ ಸ್ವಾತಂತ್ರÂ ನೀಡಿರಲಿಲ್ಲ. ಉಗ್ರರ ಬಗ್ಗೆ ಮೃದು ಧೋರಣೆ ಅನುಸರಿಸಲಾಗಿತ್ತು. ಆದ್ದರಿಂದಲೇ ಪಾಕಿಸ್ತಾನ ಚಿಗಿತುಕೊಂಡಿತ್ತು ಎಂದು ಹೇಳಿದರು. ಉತ್ತಮ ಪ್ರತಿಕ್ರಿಯೆ: ಸದಾನಂದಗೌಡರು ಹಲವು ಮುಖಂಡರ ಮನೆಗಳಿಗೆ ತೆರಳಿ ಮತ ಯಾಚಿಸಿದಾಗ ಉತ್ತಮ ಪ್ರತಿಕ್ರಿಯೆ ಕಂಡುಬಂತು. ದೇಶದ ಭದ್ರತೆ ವಿಷಯದಲ್ಲಿ ಮೋದಿಯವರು ಕೈಗೊಂಡ ಕಠಿಮ ಕ್ರಮಗಳನ್ನು ಶ್ಲಾ ಸಿದ ಮುಖಂಡರು ಈ ಬಾರಿ ಬಿಜೆಪಿ ಬೆಂಬಲಿಸುವುದಾಗಿ ಭರವಸೆ ನೀಡಿದರು.
Related Articles
ಆಂಜಿನಪ್ಪ, ಚಂದ್ರಮ್ಮ ಮುನಿಯಪ್ಪ, ಗೋಪಾಲ,ಮುನಿಯಪ್ಪ, ವೀರೇಶ್, ರಮೇಶ್, ನಾಗರಾಜ,ಬಸವರಾಜ್ ಮತ್ತಿತರರು ಹಾಜರಿದ್ದರು.
Advertisement
ಮುಖಂಡರ ಮನೆಗಳಿಗೆ ಭೇಟಿ: ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ತಾವರೇಕೆರೆಹೋಬಳಿಯ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು. ಚನ್ನೇನಹಳ್ಳಿಯಲ್ಲಿರುವ ಜಿ.ಪಂ ಸದಸ್ಯ ನರಸಿಂಹಮೂರ್ತಿ ನಿವಾಸ, ಯಲಚಗುಪ್ಪದ ರಂಗಸ್ವಾಮಿ, ಜೈಪ್ರಕಾಶ್, ರಮೇಶ್, ಹೆನ್ನಗನಹಟ್ಟಿಯ ವರಲಕ್ಷ್ಮೀ ವೀರೇಶ್, ಮೇಟಿಪಾಳ್ಯದ ಗ್ರಾ.ಪಂ ಸದಸ್ಯ ಬಸವರಾಜು ಅವರ ಮನೆಗಳಿಗೆ ತೆರಳಿ ಮಾತುಕತೆ ನಡೆಸಿದರು. ನಂತರ ವರ್ತೂರು ಗ್ರಾಮ ದೇವತೆ ಮಾರಮ್ಮದೇವಿ ದೇವಸ್ಥಾನಕ್ಕೆ ತೆರಳಿದ ಸದಾನಂದಗೌಡರು ಪೂಜೆ ಸಲ್ಲಿಸಿದರು. ಮುಖಂಡ ನಾಗರಾಜ್ ಮನಗೆ ತೆರಳಿ ಬೆಂಬಲ ಯಾಚಿಸಿದರು. ಪೆದ್ದನಪಾಳ್ಯ ಮೂಲಕ ಗಾಣಕಲ್ಗೆ ತೆರಳಿ ಮುಖಂಡ ರಮೇಶ್ ನಿವಾಸ, ಕನಕನಗರದ ಲಕ್ಕಪ್ಪ, ಮನೆಗೆ
ತೆರಳಿ ಮತ ಯಾಚಿಸಿದರು. ಬಳಿಕ ತಾವರೇಕೆರೆ ಮಾರಮ್ಮದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.