Advertisement

ದಿಲ್ಲಿ ವಿವಿ ಚುನಾವಣೆಗೆ ಇವಿಎಂ ಕೊಟ್ಟವರು ಯಾರು ? ಕೇಜ್ರಿವಾಲ್‌

05:19 PM Sep 14, 2018 | Team Udayavani |

ಹೊಸದಿಲ್ಲಿ : ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗೆ ನಡೆದಿರುವ ಚುನಾವಣೆಯಲ್ಲಿ ಬಳಸಲಾಗಿರುವ ಇಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು (ಇವಿಎಂ) ಗಳನ್ನು ತಾನು ಒದಗಿಸಿಲ್ಲ; ಅವುಗಳನ್ನು ದಿಲ್ಲಿ  ವಿಶ್ವವಿದ್ಯಾಲಯದವರು ಖಾಸಗಿಯಾಗಿ ಪಡೆದು ಕೊಂಡಿರಬಹುದು ಎಂದು ಚುನಾವಣಾ ಆಯೋಗ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

Advertisement

ಇದಕ್ಕೆ ಪ್ರತಿಯಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಟ್ವೀಟ್‌ ಮಾಡಿ ಈ ಕೆಳಗಿನ ಸರಣಿ ಪ್ರಶ್ನೆಯನ್ನು ಕೇಳಿದ್ದಾರೆ :

ಇವಿಎಂ ಗಳನ್ನು ಖಾಸಗಿಯಾಗಿ ಪಡೆದುಕೊಂಡು ಬಳಸಲು ಸಾಧ್ಯವೇ ? 

ಇವಿಎಂ ಗಳನ್ನು ಖಾಸಗಿಯಾಗಿ ಎಲ್ಲಿಂದ ಪಡೆದುಕೊಳ್ಳಬಹುದು ? 

ಇವಿಎಂ ಗಳನ್ನು ಯಾರೂ ಉತ್ಪಾದಿಸುವುದಾಗಲೀ, ಖರೀದಿಸುವುದಾಗಲೀ, ಮಾರುವುದಾಗಲೀ ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳಿಲ್ಲವೇ ?

Advertisement

ಚುನಾವಣಾ ಆಯೋಗದ ಅನುಮತಿ ಇಲ್ಲದೇ ಯಾರೇ ಆದರೂ ಇವಿಎಂ ಹೊಂದಿದರೆ ಅದು ಕ್ರಿಮಿನಲ್‌ ಅಪರಾಧವಾಗುವುದಿಲ್ಲವೇ ? 

ದಿಲ್ಲಿ  ವಿವಿ ವಿದ್ಯಾರ್ಥಿ  ಸಂಘಟನೆಗೆ ನಡೆದಿರವ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ ಬೆಂಬಲಿತ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ನಾಲ್ಕರಲ್ಲಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ; ಕಾಂಗ್ರೆಸ್‌ ಬೆಂಬಲಿತ ಎನ್‌ಎಸ್‌ಯುಐ ಒಂದು ಸ್ಥಾನ ಗೆದ್ದುಕೊಂಡಿದೆ. ಆಪ್‌ ಬೆಂಬಲಿತ ಸಿವೈಎಸ್‌ಎಸ್‌ (ಐಎಎಸ್‌ಎ ಜತೆಗೆ) ಮೂರನೇ ಸ್ಥಾನಿಯಾಗಿದೆ. 

ಮತ ಎಣಿಕೆ ವೇಳೆ ಇವಿಎಂ ಗಳು ಕೈಕೊಟ್ಟ ಬಗ್ಗೆ ಉಂಟಾದ ವಿವಾದದಿಂದ ಚುನಾವಣಾ ಆಯೋಗ ದೂರ ಉಳಿದಿರುವುದನ್ನು ಕೇಜ್ರಿವಾಲ್‌ ಪ್ರಶ್ನಿಸಿದರು. ದಿಲ್ಲಿ ವಿವಿಗೆ ತಾನು ಇವಿಎಂಗಳನ್ನು ಕೊಟ್ಟೇ ಇಲ್ಲ;ಅವರು ಖಾಸಗಿಯಾಗಿ ಅದನ್ನು ಪಡೆದುಕೊಂಡಿರಬಹುದು ಎಂದು ಹೇಳಿ ಚುನಾವಣಾ ಆಯೋಗ ಕೈತೊಳೆದು ಕೊಂಡಿತ್ತು. ಈಗಿನ್ನು ಈ ಇಡಿಯ ಪ್ರಹಸನದ ಬಗ್ಗೆ ಆದೇಶಿಸಲಾಗಿರುವ ವಿಸ್ತೃತ ವರದಿ ಹೊರಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next