ಮುಂಬಯಿ: ಬೊರಿ ವಲಿ ಪೂರ್ವ ಸಾವರಾ³ಡಾದ ಶ್ರೀ ಶನಿಮಹಾತ್ಮ ಪೂಜಾ ಮಿತ್ರ ಮಂಡ ಳಿಯ ವತಿಯಿಂದ ದಸರಾ ಹಬ್ಬದ ನಿಮಿತ್ತ ಶ್ರೀ ಶನಿಮಂದಿರದಲ್ಲಿ ದುರ್ಗಾ ನಮಸ್ಕಾರ ಪೂಜೆ ಮತ್ತು ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಅ. 18ರಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು.
ಮಂದಿರದ ಅರ್ಚಕರ ನೇತೃತ್ವದಲ್ಲಿ ಸಂಜೆ ಮಹಿಳಾ ವಿಭಾಗದ ಹಿರಿಯ ಸದಸ್ಯೆಯರುಗಳಾದ ಪದ್ಮಾವತಿ ಕೋಟ್ಯಾನ್, ರಾಜೇಶ್ವರಿ ಸುವರ್ಣ, ಲಕ್ಷ್ಮೀ ಸಾಲ್ಯಾನ್ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಅರಸಿನ ಕುಂಕುಮದ ಮಹತ್ವವನ್ನು ತಿಳಿಸಿದ ಮಂದಿರದ ಸದಸ್ಯೆ ಮಮತಾ ಶೆಟ್ಟಿ ಅವರು, ಅನಾದಿ ಕಾಲದಿಂದಲೂ ವಿವಾಹಿತ ಮಹಿಳೆಯರು ಕುಂಕುಮವನ್ನು ಸಿಂಧೂರ ಮತ್ತು ತಿಲಕದಂತೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಪತಿಯ ದೀರ್ಘಾಯುಷ್ಯದ ಸಂಕೇತವಾಗಿ ಇವರುಗಳು ಕುಂಕುಮದಿಂದ ಬೈತಲೆಯ ನಡುವೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಾರೆ. ಹಿಂದೂ ಶಾಸ್ತ್ರಗಳು ಹೇಳುವಂತೆ ಸೌಭಾಗ್ಯ ಮತ್ತು ಅದೃಷ್ಟದ ಸಂಕೇತವಾಗಿ ಕುಂಕುಮವನ್ನು ಕಾಣಲಾಗುತ್ತದೆ. ಹಣೆಯನ್ನು ಮೇಷ ರಾಶಿಯ ಸ್ಥಾನವಾಗಿ ಹೇಳಲಾಗಿದ್ದು, ಮೇಷ ರಾಶಿಯ ದೇವನು ಮಂಗಳನಾಗಿದ್ದಾನೆ. ಆದ್ದರಿಂದ ಅದೃಷ್ಟವನ್ನು ತರುತ್ತದೆ ಎಂಬ ಕಾರಣಕ್ಕಾಗಿ ವಿವಾಹಿತ ಸ್ತ್ರೀಯರು ತಮ್ಮ ಹಣೆಯನ್ನು ಕುಂಕುಮದಿಂದ ಅಲಂಕರಿಸಿಕೊಳ್ಳುತ್ತಾರೆ ಎಂದು ನುಡಿದರು.
ಮಂದಿರದ ವತಿಯಿಂದ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ಮಹಿಳಾ ವಿಭಾಗದ ಭವಾನಿ ಸಾಲ್ಯಾನ್, ವಿದ್ಯಾ ಸಾಲ್ಯಾನ್, ಜಯಲಕ್ಷ್ಮೀ ಸಾಲ್ಯಾನ್, ಪದ್ಮಾವತಿ ಸಾಲ್ಯಾನ್, ಉಷಾ ಮೆಂಡನ್, ಇಂದಿರಾ ಪುತ್ರನ್, ಅಮಿತಾ ಪುತ್ರನ್, ರಾಜೇಶ್ವರಿ ಸುವರ್ಣ, ಲಕ್ಷ್ಮೀ ಕರ್ಕೇರ, ಲಕ್ಷ್ಮೀ ಕಾಂಚನ್, ಸವಿತಾ ಕರ್ಕೇರ, ದಮಯಂತಿ ಸನಿಲ್, ಪೂಜಾ ಪುತ್ರನ್, ವಿದ್ಯಾ ಪೂಜಾರಿ, ದೀಪಾ ಶ್ರೀಯಾನ್, ಸುಮಿತ್ರಾ ಕೋಟ್ಯಾನ್, ಮಮತಾ ಶೆಟ್ಟಿ, ರೋಶ್ನಿ ಕಾಂಚನ್, ಪುಷ್ಪಾ ತಿಂಗಳಾಯ, ರಜನಿ ಕುಂದರ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಮಂದಿರದ ಅಧ್ಯಕ್ಷ ಗೋವರ್ಧನ ಸುವರ್ಣ, ಉಪಾಧ್ಯಕ್ಷ ಗಿರೀಶ್ ಕರ್ಕೇರ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಜತೆ ಕಾರ್ಯದರ್ಶಿ ಗಿರಿಧರ ಸುವರ್ಣ, ಕೋಶಾಧಿಕಾರಿ ಕೇಶವ ಕಾಂಚನ್, ಜತೆ ಕೋಶಾಧಿಕಾರಿ ಸುಧಾಕರ ಸನಿಲ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸಂಜೀವ ಸಾಲ್ಯಾನ್, ನಾಗೇಶ್ ಕರ್ಕೇರ, ಮೋನಪ್ಪ ತಿಂಗಳಾಯ, ರಘುನಾಥ್ ಸಾಲ್ಯಾನ್, ತಿಮ್ಮಪ್ಪ ಕೋಟ್ಯಾನ್, ದಾಮೋದರ ಪುತ್ರನ್, ಗೋಪಾಲ್ ಪುತ್ರನ್, ಮೋಹನ್ ಪೂಜಾರಿ, ವಿನೋದ್ ಸಾಲ್ಯಾನ್, ದೇವೇಂದ್ರ ಸುರತ್ಕಲ್, ಯಶ್ ಶೆಟ್ಟಿ ಅವರು ಸರ್ವ ರೀತಿಯಲ್ಲಿ ಸಹಕರಿಸಿದರು. ಪರಿಸರದ ಭಕ್ತಾದಿಗಳು, ತುಳು-ಕನ್ನಡಿಗರು ಮಹಿಳೆಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪ್ರಸಾದ ಸ್ವೀಕರಿಸಿದರು.